200 ವರ್ಷ ಭಾರತ ಆಳಿದ್ದ ಆಂಗ್ಲರಿಗೆ ಭಾರತೀಯನದ್ದೇ ಆಳ್ವಿಕೆ ! ಕನ್ನಡಿಗರ ಅಳಿಯ ಸುನಕ್ ಬ್ರಿಟನ್ ಪ್ರಧಾನಿ ! 

24-10-22 08:20 pm       HK News Desk   ದೇಶ - ವಿದೇಶ

ಭಾರತ ಮೂಲದ ಬ್ರಿಟನ್ ಯುವ ರಾಜಕಾರಣಿ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ್ದ ಬ್ರಿಟನ್‌ಗೆ ಇದೀಗ ಭಾರತ ಮೂಲದ ವ್ಯಕ್ತಿಯೊಬ್ಬರೇ ಆಡಳಿತ ಚುಕ್ಕಾಣಿ ಹಿಡಿಯುವಂತಾಗಿದೆ. 

ಲಂಡನ್, ಅ.24: ಭಾರತ ಮೂಲದ ಬ್ರಿಟನ್ ಯುವ ರಾಜಕಾರಣಿ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ್ದ ಬ್ರಿಟನ್‌ಗೆ ಇದೀಗ ಭಾರತ ಮೂಲದ ವ್ಯಕ್ತಿಯೊಬ್ಬರೇ ಆಡಳಿತ ಚುಕ್ಕಾಣಿ ಹಿಡಿಯುವಂತಾಗಿದೆ. 

ವಿಶೇಷ ಅಂದ್ರೆ, ಇದೇ ಸುನಕ್ ಗೂ ಕನ್ನಡಿಗರಿಗೂ ನೇರ ನಂಟಿದೆ. ಈತ ಕನ್ನಡಿಗರಾದ ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಯ ಅಳಿಯನೂ ಹೌದು. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಬದಲಾದ ಪರಿಸ್ಥಿತಿಯಲ್ಲಿ ಅತ್ಯುನ್ನತ ಹುದ್ದೆ ಪಡೆಯುವಂತಾಗಿದೆ. ಕೇವಲ 45 ದಿನ ಆಡಳಿತ ನಡೆಸಿದ ಲಿಜ್ ಟ್ರಸ್ ರಾಜಿನಾಮೆಯಿಂದಾಗಿ ಹೊಸ ಪ್ರಧಾನಿ ಆಯ್ಕೆ ಮಾಡಬೇಕಿತ್ತು. ಕನ್ಸರ್ವೇಟಿವ್ ಪಕ್ಷದ ಅರ್ಧಕ್ಕೂ ಹೆಚ್ಚು ಸಂಸದರು ಇವತ್ತು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿದರು.

Rishi Sunak as first British Indian PM an 'historic moment': Thinktank |  Mint

All you need to know about the controversy around Rishi Sunak, the next  possible UK PM

Rishi Sunak - Wiki, Bio, Age, Height, Wife, and Net Worth

ಪ್ರತಿಸ್ಫರ್ಧಿಯಾಗಲು ಬಯಸಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಬೆಂಬಲ ನೀಡಿದರು. 198 ಸಂಸದರು ರಿಷಿ ಪರ ನಿಂತಿದ್ದರಿಂದ ಪ್ರಧಾನಿ ಸ್ಥಾನಕ್ಕೇರುವುದು ಸುಲಭ ಆಗಿದೆ. ಪ್ರತಿಸ್ಪರ್ಧಿಯೇ ಇಲ್ಲದೆ ಸುನಕ್ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತಾನು ಪುನರಾಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಿಷಿ ಸುನಕ್ ದಾರಿ ಸುಗಮವಾಗಿತ್ತು.

Who Is Rishi Sunak? Indian-Origin British Politician In Race To Become UK's  Next PM

ಭಗವದ್ಗೀತೆ ಹಿಡಿದು ಪ್ರಮಾಣ ಸ್ವೀಕರಿಸಿದ್ದ ಸುನಕ್ ! 

ರಿಷಿ ಸುನಕ್ ಅವರು ಸಂಸತ್ತಿನಲ್ಲಿ ಭಗವದ್ಗೀತೆಯನ್ನು ಮುಂದಿಟ್ಟು ಯಾರ್ಕ್‌ಷೈರ್‌ ನಗರದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಭಗವದ್ಗೀತೆ ಹಿಡಿದು ಪ್ರಮಾಣ ಸ್ವೀಕರಿಸಿದ್ದ ಮೊದಲ ಯುಕೆ ಸಂಸದ ಸುನಕ್. 2020ರಿಂದ ತೊಡಗಿ ಆರು ತಿಂಗಳ ಹಿಂದೆ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನದಿಂದ ಇಳಿಯುವ ವರೆಗೂ ಅವರ ಜೊತೆಗೆ ರಿಷಿ ಸುನಕ್ ಹಣಕಾಸು ಸಚಿವರಾಗಿದ್ದರು.

Rishi Sunak: UK's ex-Treasury chief gets 2nd shot at PM job : NPR

ರಿಷಿ ಸುನಕ್ ಅವರ ತಂದೆ ತಾಯಿಯರಿಬ್ಬರೂ ಭಾರತೀಯ ಮೂಲದವರು. ಸುನಕ್ ಅವರ ಪೋಷಕರು 1960ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದಿದ್ದರು. ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದ ಸುನಕ್ ಅವರಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡುತ್ತಿದ್ದರು.

Rishi Sunak on Monday is all set to make history as Britain's first Indian-origin Prime Minister after being elected unopposed as the new leader of the governing Conservative Party on Diwali, following Penny Mordaunt's withdrawal from the race.