ಬ್ರೇಕಿಂಗ್ ನ್ಯೂಸ್
22-10-22 04:36 pm HK News Desk ದೇಶ - ವಿದೇಶ
ಲಕ್ನೋ, ಅ.22: ರೈಲಿನಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋವನ್ನು ಉತ್ತರ ಪ್ರದೇಶದ ಮಾಜಿ ಶಾಸಕ ದೀಪಲಾಲ್ ಭಾರ್ತಿ ಹಂಚಿಕೊಂಡಿದ್ದಾರೆ. ತಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವು ಮುಸ್ಲಿಮ್ ವ್ಯಕ್ತಿಗಳು ಬೋಗಿಯ ಒಳಗೆ ನಮಾಜ್ ಮಾಡುತ್ತಿದ್ದರು. ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಅ.20ರಂದು ಉತ್ತರ ಪ್ರದೇಶದ ಖಡ್ಡಾ ರೈಲ್ವೇ ನಿಲ್ದಾಣದಲ್ಲಿ ಸತ್ಯಾಗ್ರಹ ಎಕ್ಸ್ ಪ್ರೆಸ್ ರೈಲು ನಿಂತಿದ್ದಾಗ ನಾಲ್ವರು ನಮಾಜ್ ಮಾಡಿದ್ದಾರೆ. ಇವರು ನಮಾಜ್ ಮಾಡುತ್ತಿದ್ದ ಕಾರಣ ಇತರೇ ಪ್ರಯಾಣಿಕರಿಗೆ ಒಳಗೆ ಬರುವುದು, ಹೊರಗೆ ಹೋಗುವುದಕ್ಕೆ ತೊಂದರೆ ಆಗಿತ್ತು. ಸ್ಲೀಪರ್ ಕೋಚ್ ಬೋಗಿಯಲ್ಲಿ ನಮಾಜ್ ಮಾಡುತ್ತಿದ್ದರು. ಇದರಿಂದ ಇತರೇ ಪ್ರಯಾಣಿಕರಿಗೆ ಕಿರಿಕಿರಿ ಆಗಿತ್ತು. ನಾನೇ ವಿಡಿಯೋ ಮಾಡಿ ಹಂಚಿಕೊಂಡಿದ್ದೇನೆ ಎಂದು ದೀಪಲಾಲ್ ತಿಳಿಸಿದ್ದಾರೆ.
ರೈಲು ಬೋಗಿಯ ಎರಡೂ ಬದಿಯಲ್ಲಿ ನಡುವೆ ಕುಳಿತು ನಮಾಜ್ ಮಾಡುತ್ತಿದ್ದರು. ಸಾರ್ವಜನಿಕ ಪ್ರದೇಶದಲ್ಲಿ ಇವರಿಗೆ ನಮಾಜ್ ಮಾಡಲು ಅವಕಾಶ ನೀಡಿದ್ದು ಹೇಗೆ. ಈ ಬಗ್ಗೆ ಭಾರತೀಯ ರೈಲ್ವೇ ಇಲಾಖೆಗೆ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದೇನೆ ಎಂದು ದೀಪಲಾಲ್ ತಿಳಿಸಿದ್ದಾರೆ. ನಮಾಜ್ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಮಾಜ್ ಮಾಡುತ್ತಿರುವುದು ಇದು ಮೊದಲೇನಲ್ಲ. ಇತ್ತೀಚೆಗೆ ಲಕ್ನೋದ ಲುಲು ಮಾಲ್ ನಲ್ಲಿ ಮುಸ್ಲಿಮರ ಗುಂಪು ಬಹಿರಂಗವಾಗಿಯೇ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಸಾಕಷ್ಟು ವಿರೋಧವೂ ಬಂದಿತ್ತು.
A video of four Muslim men offering namaz on a train surfaced on social media. The video purportedly shot by former Uttar Pradesh MLA Deeplal Bharti showed namaz being offered when the train halted at Khadda railway station.The incident is from October 20, Bharti said, adding that he was travelling on the Satyagraha Express when he saw four men offering namaz, blocking the way of other passengers.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm