ಬ್ರೇಕಿಂಗ್ ನ್ಯೂಸ್
19-10-22 06:54 pm HK News Desk ದೇಶ - ವಿದೇಶ
ನವದೆಹಲಿ, ಅ.19 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲು ಪಾಕಿಸ್ಥಾನದ ಐಎಸ್ಐ ಸಂಚು ಹೂಡಿದೆ ಎಂದು ಗುಪ್ತಚರ ಏಜನ್ಸಿಗಳು ಎಲರ್ಟ್ ಸೂಚನೆ ನೀಡಿವೆ. ಮೋದಿ ನಡೆಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೊಲೀಸರ ಸೋಗಿನಲ್ಲಿ ಆತ್ಮಹತ್ಯಾ ಬಾಂಬರ್ ಗಳು ನುಗ್ಗಲಿದ್ದಾರೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ಹಿಂದಿ ವಾಹಿನಿ ವರದಿ ಮಾಡಿದೆ.
ಮುಂದಿನ ವಾರದಲ್ಲಿ ಪ್ರಧಾನಿ ಮೋದಿ ಗುಜರಾತ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ರ್ಯಾಲಿ ನಡೆಸಲಿದ್ದು, ಅದೇ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲು ಪಾಕಿಸ್ಥಾನದ ಐಎಸ್ಐ, ಲಷ್ಕರ್ ಇ-ತೊಯ್ಬಾ ಉಗ್ರರಿಗೆ ಟಾರ್ಗೆಟ್ ನೀಡಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಮೋದಿ ಕಾರ್ಯಕ್ರಮಕ್ಕೆ ಪೊಲೀಸರ ಸಮವಸ್ತ್ರ ಧರಿಸಿ ಉಗ್ರರು ನುಗ್ಗಲಿದ್ದಾರೆ ಎನ್ನುವ ಮಾಹಿತಿಗಳಿದ್ದು, ಈ ಬಗ್ಗೆ ಅಲರ್ಟ್ ಇರುವಂತೆ ಸೂಚನೆ ನೀಡಿದೆ.
ಪಾಕಿಸ್ಥಾನದ ಗುಪ್ತಚರ ಏಜನ್ಸಿ ಐಎಸ್ಐ, ಭಾರತದ ಪ್ರಮುಖ ನಾಯಕರನ್ನು ಈ ಮೊದಲೇ ಕೊಲ್ಲಲು ಟಾರ್ಗೆಟ್ ಮಾಡಿತ್ತು. ಅದರಲ್ಲಿ ಮೊದಲ ಹೆಸರು ಮೋದಿಯದ್ದು ಇದೆ. ಉಗ್ರರು ಪೊಲೀಸರ ವೇಷದಲ್ಲಿಯೇ ಕಾರ್ಯಕ್ರಮದ ಸ್ಥಳಕ್ಕೆ ಸುಸೈಡ್ ಬಾಂಬ್ ಹೊತ್ತುಕೊಂಡು ಬರಲಿದ್ದಾರೆ ಎನ್ನುವ ಮಾಹಿತಿಯನ್ನು ಈ ಬಾರಿ ಗುಪ್ತಚರ ಏಜನ್ಸಿಗಳು ಸರಕಾರಕ್ಕೆ ತಲುಪಿಸಿದೆ. ಲಷ್ಕರ್ ಉಗ್ರರ ಸಂಭಾಷಣೆಯನ್ನು ಆಧರಿಸಿ ಗುಪ್ತಚರ ಏಜನ್ಸಿಗಳು ಈ ವರದಿ ಮಾಡಿದೆ ಎನ್ನಲಾಗುತ್ತಿದೆ.
ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿರುವಾಗಲೇ ಇಂಥ ಎಲರ್ಟ್ ಬಂದಿದ್ದು, ಪ್ರಧಾನಿಯ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ, ಅಮಿತ್ ಷಾ ಬಗ್ಗೆ ಇದಕ್ಕೂ ಹಿಂದೆಯೇ ಉಗ್ರರು ಟಾರ್ಗೆಟ್ ಮಾಡಿರುವುದು, ಪಾಕಿಸ್ಥಾನದ ಐಎಸ್ಐ ಟಾರ್ಗೆಟ್ ಮಾಡಿರುವುದು ವರದಿಯಾಗಿತ್ತು. ಈ ಬಾರಿ ಚುನಾವಣಾ ಪ್ರಚಾರಕ್ಕೆ ಮೋದಿ ಧುಮುಕುವ ಮೊದಲೇ ಇಂಥ ಎಚ್ಚರಿಕೆಯನ್ನು ಗುಪ್ತಚರ ಏಜನ್ಸಿಗಳು ನೀಡಿವೆ.
Ahead of Diwali, intelligence agencies have issued a high alert regarding the security of Prime Minister Narendra Modi. According to intelligence agencies, Prime Minister Narendra Modi is being targeted by Pakistani spy agency ISI and a conspiracy is being hatched to assassinate PM Modi. It is being told that terrorists may take entry in rally or road show to attack PM Modi.
15-09-25 04:45 pm
Bangalore Correspondent
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm