ಬ್ರೇಕಿಂಗ್ ನ್ಯೂಸ್
15-10-22 04:58 pm HK News Desk ದೇಶ - ವಿದೇಶ
ಇಸ್ಲಮಾಬಾದ್, ಅ.15: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದ ಸರಕಾರಿ ಆಸ್ಪತ್ರೆಯ ಕೋಣೆಗಳಲ್ಲಿ 300ಕ್ಕೂ ಹೆಚ್ಚು ಅನಾಥ ಶವಗಳು ಪತ್ತೆಯಾಗಿದ್ದು, ಕೊಳೆತು ನಾರುತ್ತಿರುವ ವಿಡಿಯೋ ವೈರಲ್ ಆಗಿದೆ. ನಿಶ್ತಾರ್ ಮೆಡಿಕಲ್ ಯುನಿವರ್ಸಿಟಿ ಮತ್ತು ಹಾಸ್ಪಿಟಲ್ ಸೆಂಟರಿನ ಶವಾಗಾರದ ಕೊಠಡಿಗಳು, ಟೆರೇಸ್ ಗಳಲ್ಲಿ ನೂರಾರು ಶವಗಳು ಕೊಳೆಯುತ್ತಿದ್ದು, ವಿಶ್ವ ರಾಷ್ಟ್ರಗಳಲ್ಲಿ ಪಾಕಿಸ್ಥಾನದಲ್ಲಿ ಮನುಷ್ಯತ್ವ, ಮಾನವೀಯತೆ ಕುಸಿಯುತ್ತಿರುವುದಕ್ಕೆ ಸಾಕ್ಷಿಯೆಂದು ಟೀಕೆ ವ್ಯಕ್ತವಾಗಿದೆ.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಕಾರಣವಾದ ಸಿಬಂದಿಯನ್ನು ಶಿಕ್ಷಿಸುವಂತೆ ಸೂಚಿಸಿದ್ದಾರೆ. ಟ್ವಿಟರ್ ಸೇರಿದಂತೆ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ಸ್ಥಿತಿಯನ್ನು ತೆರೆದಿಟ್ಟಿದೆ. ಕೆಲವರ ಪ್ರಕಾರ, 500ಕ್ಕೂ ಹೆಚ್ಚು ಶವಗಳು ಇವೆಯಂತೆ. ಹೆಚ್ಚಿನವು ಅರೆಬರೆ ಇದ್ದು, ಪ್ಯಾಂಟ್, ಶರ್ಟ್ ಹಾಕ್ಕೊಂಡ ರೀತಿಯಲ್ಲೇ ಇವೆ. ಕೆಲವು ಅಸ್ಥಿಪಂಜರ ಮಾತ್ರ ಇದೆ. ದೇಹದ ಅವಯವಗಳನ್ನು ಕತ್ತರಿಸಿ ಹಾಗೇ ಬಿಟ್ಟಿರುವಂತೆ ಕಂಡುಬಂದಿದೆ. ಹಾರ್ಟ್, ಕಿಡ್ನಿ, ಶ್ವಾಸಕೋಶ ಸೇರಿದಂತೆ ಪ್ರಮುಖ ಅವಯವಗಳನ್ನು ತೆಗೆದು ಆಸ್ಪತ್ರೆ ಕಟ್ಟಡದ ಟೆರೇಸಿನಲ್ಲಿ ಎಸೆಯಲಾಗಿದೆ.

ಮೆಡಿಕಲ್ ಯುನಿವರ್ಸಿಟಿಯ ವಿದ್ಯಾರ್ಥಿಯೊಬ್ಬ ಹೇಳುವ ಪ್ರಕಾರ, ಶವಗಳನ್ನು ವಿದ್ಯಾರ್ಥಿಗಳು ಪ್ರಯೋಗಕ್ಕಾಗಿ ಬಳಸುತ್ತಿದ್ದರು ಎನ್ನಲಾಗಿದೆ. ಘಟನೆ ಬಗ್ಗೆ ತನಿಖೆಗೆ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದ್ದು, ಮೂರು ದಿನದಲ್ಲಿ ಪ್ರಾಥಮಿಕ ವರದಿ ನೀಡುವಂತೆ ಪಾಕ್ ಸರಕಾರ ಸೂಚಿಸಿದೆ. ಇದೇ ವೇಳೆ, ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಅದು ತಮ್ಮಲ್ಲಿಂದ ನಾಪತ್ತೆಯಾಗಿರುವ ವ್ಯಕ್ತಿಗಳ ಶವಗಳಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ನಿಶ್ತಾರ್ ಮೆಡಿಕಲ್ ಯುನಿವರ್ಸಿಟಿ ಸರಕಾರಿ ಆಸ್ಪತ್ರೆಯಾಗಿದ್ದು, ಅಲ್ಲಿ ಮೆಡಿಕಲ್ ವಿದ್ಯಾರ್ಥಿಗಳು ಹೆಣಗಳನ್ನು ತಮ್ಮ ಪ್ರಯೋಗಕ್ಕಾಗಿ ಬಳಸಿ ಹಾಗೇ ಎಸೆಯುತ್ತಿದ್ದರು ಎನ್ನಲಾಗುತ್ತಿದೆ. ಆದರೆ, ಟೆರೇಸ್ ಸೇರಿದಂತೆ ವಿವಿಧ ಕೊಠಡಿಗಳಲ್ಲಿ ಬೇಕಾಬಿಟ್ಟಿಯಾಗಿ ಶವಗಳನ್ನು ಅದರ ಅವಯವಗಳನ್ನು ಕತ್ತರಿಸಿ ಬಿಸುಟಿರುವುದು ಸಂಶಯಕ್ಕೆ ಕಾರಣವಾಗಿದೆ. ಅತ್ಯಂತ ಕೆಟ್ಟದಾಗಿ ಶವಗಳನ್ನು ಎಸೆದು ಮಾನವೀಯತೆ ಇಲ್ಲದಂತೆ ವರ್ತಿಸಿರುವ ಬಗ್ಗೆ ಭಾರೀ ಟೀಕೆಯೂ ವ್ಯಕ್ತವಾಗಿದೆ. ಪಾಕಿಸ್ಥಾನದ ಪತ್ರಿಕೆಗಳೇ ಅಲ್ಲಿನ ಆಸ್ಪತ್ರೆ ಆಡಳಿತದ ವರ್ತನೆಯನ್ನು ಟೀಕಿಸಿವೆ.
Several putrefied bodies have been found dumped on the rooftop of a public sector hospital in Pakistan’s Punjab province that sparked outcry on social media over their desecration.Punjab Chief Minister Parvez Elahi on Friday took a strict notice of this and formed a high-powered committee to investigate the matter. The six-member committee headed by specialised healthcare secretary Muzamil Bashir has been given three days to complete the probe and fix the responsibility.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 11:13 pm
HK News Desk
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
04-03-26 09:31 pm
HK News Staffer
ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗ...
04-03-26 10:54 am
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm