ಬ್ರೇಕಿಂಗ್ ನ್ಯೂಸ್
05-10-22 07:17 pm HK News Desk ದೇಶ - ವಿದೇಶ
ಶ್ರೀನಗರ, ಅ.5: 70 ವರ್ಷ ಆಳ್ವಿಕೆ ನಡೆಸಿದವರು ಪಾಕಿಸ್ಥಾನದ ಜೊತೆ ಮಾತನಾಡುವುದಾಗಿ ಹೇಳುತ್ತಾ ಬಂದಿದ್ದರು. ಆದರೆ ಯಾಕೆ ನಾವು ಪಾಕಿಸ್ಥಾನದ ಜೊತೆ ಮಾತನಾಡಬೇಕೆಂದು ನಾನು ಕೇಳುತ್ತೇನೆ. ನಾವು ಯಾವತ್ತಿಗೂ ಪಾಕ್ ಜೊತೆ ಮಾತನಾಡುವುದಕ್ಕೆ ಇಚ್ಚಿಸುವುದಿಲ್ಲ. ನಾವು ಕಾಶ್ಮೀರದ ಜನರ ಜೊತೆ ಮಾತನಾಡಲು ಬಯಸುತ್ತೇವೆ, ಬಾರಾಮುಲ್ಲಾ ಜನರ ಜೊತೆ ಮಾತನಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, 1990ರಿಂದ ಜಮ್ಮು ಕಾಶ್ಮೀರದಲ್ಲಿ 40 ಸಾವಿರ ಸಾಮಾನ್ಯ ಜನರನ್ನು ಉಗ್ರರು ಕೊಂದಿದ್ದಾರೆ. ಆದರೆ ಈಗ ನಾವು ಭಯೋತ್ಪಾದಕರನ್ನು ಕೊಲ್ಲುತ್ತಿದ್ದೇವೆ. ಜಮ್ಮು ಕಾಶ್ಮೀರದಿಂದ ಪೂರ್ತಿಯಾಗಿ ಭಯೋತ್ಪಾದಕರನ್ನು ಹೊಡೆದೋಡಿಸುತ್ತೇವೆ. ದೇಶದಲ್ಲಿ ಅತ್ಯಂತ ಶಾಂತಿಯುತ ಜಾಗವಾಗಿ ಜಮ್ಮು ಕಾಶ್ಮೀರವನ್ನು ಪರಿವರ್ತಿಸುತ್ತೇವೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮೆಹಬೂಬ ಮುಫ್ತಿ ಟ್ವೀಟ್ ಮಾಡಿ, ಅಮಿತ್ ಷಾ ಇಲ್ಲಿ ಬಂದು ಏನು ಮಾಡುತ್ತಾರೆ, ಏನು ಕೊಟ್ಟಿದ್ದಾರೆ ಎಂದು ಕೇಳಿದ್ದರು. ಆದರೆ ಜಮ್ಮು ಕಾಶ್ಮೀರವನ್ನು ಬಹುಕಾಲ ಆಳಿದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ ಮತ್ತು ಗಾಂಧಿ ಕುಟುಂಬಕ್ಕೆ ಕೇಳಲು ಬಯಸುತ್ತೇನೆ. 70 ವರ್ಷ ಕಾಲ ಆಳಿದ ನೀವು ಕಾಶ್ಮೀರಕ್ಕೆ ಏನು ಕೊಟ್ಟಿದ್ದೀರಿ. ಮೆಹಬೂಬ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ನಾಲ್ಕು ಮೆಡಿಕಲ್ ಕಾಲೇಜು ಆರಂಭಿಸಿದ್ದರು. ನಾವು 2014ರಿಂದ ಈವರೆಗೆ 9 ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದೇವೆ. 2014ರ ನಂತರ ಒಂದು ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರದ ಪ್ರತಿ ಗ್ರಾಮದ ಹಳ್ಳಿಗೂ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿಯೂ ವಿದ್ಯುತ್ ತಲುಪಿಸಿದ್ದೇವೆ ಎಂದು ಹೇಳಿದರು.
ಕೆಲವರು ಬಾರಾಮುಲ್ಲಾದಲ್ಲಿ ನನ್ನ ಮಾತನ್ನು ಕೇಳಲು ಯಾರು ಬರುತ್ತಾರೆಂದು ಪ್ರಶ್ನೆ ಮಾಡಿದ್ದರು. ಆದರೆ ಅವರಿಗೆ ಹೇಳಲು ಬಯಸುತ್ತೇನೆ, ಇವತ್ತು ಕಾಶ್ಮೀರದ ಸಾವಿರಾರು ಜನರು ಸೇರಿದ್ದಾರೆ, ದೇಶದ ಅಭಿವೃದ್ಧಿಯ ಗಾಥೆಯನ್ನು ಕೇಳಲು ಬಯಸಿ ಬಂದಿದ್ದಾರೆ. ಮೋದಿಜೀ ಜೊತೆಗೆ ಸಾಥ್ ನೀಡುತ್ತೇವೆಂದು ಹೇಳಲು ಇಲ್ಲಿ ಸೇರಿದ್ದಾರೆ ಎಂದು ಹೇಳಿದ ಅಮಿತ್ ಷಾ, ಎರಡು ದಿನಗಳ ಹಿಂದೆ ರಾಜೌರಿ ಜಿಲ್ಲೆಯ ಪಹಾರಿ ಕಮ್ಯುನಿಟಿಯನ್ನು ಎಸ್ಟಿಗೆ ಸೇರಿಸಿದ್ದ ಬಗ್ಗೆ ಘೋಷಣೆ ಮಾಡಲಾಗಿತ್ತು. ಆ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಎಸ್ಟಿ ಮೀಸಲು ಸವಲತ್ತು ಸಿಗಲಿದೆ. ಆದರೆ ಜಮ್ಮು ಕಾಶ್ಮೀರದಲ್ಲಿ 370 ವಿಧಿ ಇದ್ದಾಗ ಈ ರೀತಿಯ ಮೀಸಲಾತಿ ಸಾಧ್ಯವಿರಲಿಲ್ಲ ಎಂದು ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ವಿಚಾರದಲ್ಲಿ ಸುಳಿವಿತ್ತ ಸಚಿವರು, ಈಗಾಗಲೇ ವೋಟರ್ ಲಿಸ್ಟ್ ತಯಾರಾಗುತ್ತಿದೆ, ಅದು ಪೂರ್ಣಗೊಂಡ ಕೂಡಲೇ ಪಾರದರ್ಶಕವಾಗಿ ಚುನಾವಣೆ ನಡೆಯಲಿದೆ ಎಂದು ಹೇಳಿದರು.
Chaired a meeting to review the security situation of J&K in Srinagar.
— Amit Shah (@AmitShah) October 5, 2022
People of J&K is witnessing a new era of peace, progress and prosperity under the leadership of PM @narendramodi Ji.
I applaud the relentless & coordinated efforts of our security forces to curb terrorism. pic.twitter.com/RJbc8dw3ow
Union Home Minister Amit Shah ruled out holding talks with Pakistan and vowed to wipe out terrorism from Jammu and Kashmir. Addressing a massive rally in Baramullah, Amit Shah said terrorism in J&K has claimed 42,000 lives since the 1990s.The Union minister also tore into the families of the Abdullahs (National Conference), Muftis (PDP) and Nehru-Gandhi (Congress) for the alleged underdevelopment of Jammu and Kashmir as they ruled the erstwhile state most of the time since the country's independence in 1947.
15-09-25 04:45 pm
Bangalore Correspondent
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm