ಬ್ರೇಕಿಂಗ್ ನ್ಯೂಸ್
03-10-22 03:42 pm HK News Desk ದೇಶ - ವಿದೇಶ
ಕೊಲ್ಕತ್ತಾ, ಅ.3: ದುರ್ಗಾ ಮೂರ್ತಿಯ ಕಾಲ ಕೆಳಗೆ ಮಹಿಷಾಸುರನ ಬದಲು ಮಹಾತ್ಮ ಗಾಂಧೀಜಿ ಇರುವಂತೆ ಬಿಂಬಿಸಿ ಪ್ರತಿಮೆ ರಚಿಸಿದ್ದು ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೊಲ್ಕತ್ತಾದಲ್ಲಿ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮೂರ್ತಿಯ ಪೆಂಡಾಲ್ ನಲ್ಲಿ ಈ ರೀತಿ ಚಿತ್ರಿಸಲಾಗಿದ್ದು, ಗೃಹ ಸಚಿವಾಲಯದ ಸೂಚನೆಯಂತೆ ಬಳಿಕ ಗಾಂಧೀಜಿ ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಅಖಿಲ ಭಾರತೀಯ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯಲ್ಲಿ ಅಸುರ ಗಾಂಧಿಯನ್ನು ದುರ್ಗಾಮಾತೆ ಕೊಲ್ಲುವ ರೀತಿ ಚಿತ್ರಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದು ಮಹಾಸಭಾ ಪಶ್ಚಿಮ ಬಂಗಾಳ ಘಟಕದ ಕಾರ್ಯಾಧ್ಯಕ್ಷ ಚಂದ್ರಾಚುರ್ ಗೋಸ್ವಾಮಿ, ನಾವು ಗಾಂಧಿಯನ್ನು ನೈಜ ಅಸುರನಾಗಿಯೇ ನೋಡುತ್ತೇವೆ. ಗಾಂಧಿ ಒಬ್ಬ ರಾಕ್ಷಸನಾಗಿದ್ದ. ಅದಕ್ಕಾಗಿಯೇ ಆ ರೀತಿ ಮೂರ್ತಿಯನ್ನು ಚಿತ್ರಿಸಲಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಗಾಂಧೀಜಿಯನ್ನು ಪ್ರಮೋಟ್ ಮಾಡುತ್ತಿದೆ. ಆದರೆ ನಾವು ಗಾಂಧಿಯನ್ನು ಒಪ್ಪುವುದಿಲ್ಲ. ನಾವು ಅಸುರನಂತೆ ಚಿತ್ರಿಸಿ ಹಾಕಿದ್ದ ಮೂರ್ತಿಯನ್ನು ಬಲವಂತದಿಂದ ಬದಲಿಸಿದ್ದಾರೆ. ನಾವು ಎಲ್ಲ ಕಡೆ ಹಾಕಿರುವ ಗಾಂಧಿ ಚಿತ್ರಣವನ್ನು ತೆಗೆದು ಸುಭಾಸ್ ಚಂದ್ರ ಬೋಸ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಮುನ್ನೆಲೆಯಲ್ಲಿ ಹಾಕಲಿದ್ದೇವೆ ಎಂದು ಗೋಸ್ವಾಮಿ ಹೇಳಿದ್ದಾರೆ. ದಸರಾ ಎಂದರೆ, ಮಹಿಷಾಸುರನನ್ನು ದೇವಿ ಕೊಂದಿರುವ ದಿನವೆಂದು ಪುರಾಣ ನಂಬಿಕೆ. ಅದೇ ರೀತಿ ಅಸುರನನ್ನು ಕೊಂದ ದೇವಿಯ ಪ್ರತೀಕವಾಗಿ ದೇಶದೆಲ್ಲೆಡೆ ದೇವಿಯ ಆರಾಧನೆ ನಡೆಯುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಗಾಂಧೀಜಿ ಜನ್ಮದಿನದ ಸಂದರ್ಭದಲ್ಲಿ ದಸರಾ ಬಂದಿದ್ದರಿಂದ ಗಾಂಧೀಜಿಯನ್ನೇ ದುರ್ಗೆ ಕೊಲ್ಲುವ ರೀತಿ ಚಿತ್ರಿಸಿ ವಿವಾದ ಎಬ್ಬಿಸಲಾಗಿದೆ. ಘಟನೆ ಬಗ್ಗೆ ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.
A controversy erupted after a durga puja in Kolkata organised by the All India Hindu Mahasabha depicted the ‘Mahisasura’ as Mahatma Gandhi, sparking a controversy. However, after pressure from the Ministry of Home Affairs , the organisers of the puja changed and removed the face, they alleged.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm