ಬ್ರೇಕಿಂಗ್ ನ್ಯೂಸ್
02-10-22 05:42 pm HK News Desk ದೇಶ - ವಿದೇಶ
ಕಾಸರಗೋಡು, ಅ.2: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾಸರಗೋಡು ಜಿಲ್ಲಾ ಘಟಕದ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ ನಾಯಮ್ಮಾರಮೂಲೆಯಲ್ಲಿದ್ದ ಕಚೇರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬೀಗ ಜಡಿದು ಮೊಹರು ಹಾಕಿದ್ದಾರೆ. ಅಲ್ಲದೆ, ಪಿಎಫ್ಐ ನಾಯಕರು ಸಹಿತ ಜಿಲ್ಲೆಯ ಹಲವಾರು ಮಂದಿ ಸದಸ್ಯರಾಗಿದ್ದ ನೀರಂ ಚಾರಿಟೇಬಲ್ ಟ್ರಸ್ಟಿಗೆ ಸೇರಿದ ಕಚೇರಿಗೂ ಬೀಗ ಹಾಕಲಾಗಿದೆ.
ಕಾಸರಗೋಡು ನಗರ ಹೊರವಲಯದ ಚೆಂಗಳ ಪಂಚಾಯತ್ ಏರಿಯಾದ ಪೆರುಂಬಳ ಕಡವು ಸುತುವೆ ಬಳಿಯಿದ್ದ ಚಂದ್ರಗಿರಿ ಚಾರಿಟೇಬಲ್ ಟ್ರಸ್ಟ್ ಹೆಸರಿನ ಪಿಎಫ್ಐ ಕಚೇರಿಗೂ ಬೀಗ ಹಾಕಿ ಮೊಹರು ಹಾಕಲಾಗಿದೆ. ಇದಲ್ಲದೆ, ಕೇಂದ್ರ ಸರಕಾರ ಇತ್ತೀಚೆಗೆ ನಿಷೇಧಿಸಿರುವ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳ ಬಗ್ಗೆ ಮಾಹಿತಿಗಳಿದ್ದ ನೋಟೀಸನ್ನು ಕಚೇರಿಯ ಬಾಗಿಲಿಗೆ ಅಂಟಿಸಲಾಗಿದೆ.
ಎನ್ಐಎ ಕೊಚ್ಚಿ ಘಟಕದ ಎಸ್ಪಿ ಉಮೇಶ್ ರಾಯ್ ನೇತೃತ್ವದ ತಂಡ ಇಲ್ಲಿಗೆ ಆಗಮಿಸಿದ್ದು, ನೋಟೀಸ್ ಅಂಟಿಸಿ ಕಚೇರಿಗೆ ಬೀಗ ಹಾಕಿದೆ. ಈ ವೇಳೆ, ಇಬ್ಬರು ತಹಸೀಲ್ದಾರರು, ಡಿವೈಎಸ್ಪಿ ವಿವಿ ಮನೋಜ್, ವಿದ್ಯಾನಗರ ಪೊಲೀಸ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ಉಪಸ್ಥಿತರಿದ್ದರು. ಎನ್ಐಎ ಸೂಚನೆಯಂತೆ ಹೊಸದುರ್ಗ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಚಂದೇರ ಪೊಲೀಸ್ ಇನ್ ಸ್ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ಪೊಲೀಸರು ಪಡನ್ನ ಎಂಬಲ್ಲಿದ್ದ ನೀರಂ ಚಾರಿಟೇಬಲ್ ಟ್ರಸ್ಟಿಗೂ ಬೀಗ ಹಾಕಿದ್ದಾರೆ. ಪಡನ್ನ ಹೈಸ್ಕೂಲ್ ಸಮೀಪದ ಕಟ್ಟಡದಲ್ಲಿ ನಾಮಫಲಕ ಇಲ್ಲದೆ ನೀರ ಚಾರಿಟೇಬಲ್ ಟ್ರಸ್ಟ್ ಕಚೇರಿ ಕಾರ್ಯಾಚರಿಸುತ್ತಿತ್ತು. ಎನ್ಐಎ ಬಂಧಿಸಿರುವ ಪಿಎಫ್ಐ ಜಿಲ್ಲಾಧ್ಯಕ್ಷ ತೃಕ್ಕರಿಪುರ ಮೂಲದ ಸಿಟಿ ಸುಲೇಮಾನ್ ಸೇರಿ ಕಾಸರಗೋಡಿನ ಹಲವು ಪ್ರಮುಖರು ಟ್ರಸ್ಟಿನಲ್ಲಿ ಸದಸ್ಯರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
Following the Central government order to ban Popular Front of India, offices were closed and sealed in Kannur and Kasaragod district.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm