ಬ್ರೇಕಿಂಗ್ ನ್ಯೂಸ್
29-09-22 04:40 pm HK News Desk ದೇಶ - ವಿದೇಶ
ನವದೆಹಲಿ, ಸೆ.30: ಮದುವೆಯಾಗಿದ್ದರೂ, ಮಗು ಬೇಡವೆಂದು ಪತ್ನಿಯನ್ನು ಅಬಾರ್ಶನ್ ಮಾಡಲು ಗಂಡ ಒತ್ತಾಯಿಸಿದರೆ ಅದನ್ನು ರೇಪ್ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಮಾಡಿದೆ. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನನ್ಸಿ (ಎಂಟಿಪಿ) ಕಾಯ್ದೆ ಪ್ರಕಾರ ಗಂಡನ ವಿರುದ್ಧವೂ ಅತ್ಯಾಚಾರ ಕೇಸು ದಾಖಲು ಮಾಡಬಹುದು ಎಂಬುದನ್ನು ಕೋರ್ಟ್ ಹೇಳಿದೆ.
ಬೇಡದ ಮಗುವಿಗಾಗಿ ಒಪ್ಪಿತವಿಲ್ಲದೆ ಲೈಂಗಿಕ ಕಿರುಕುಳ ನೀಡುವುದನ್ನು ಅತ್ಯಾಚಾರ ಎನ್ನಬಹುದು. ಅದಕ್ಕೆ ಮದುವೆಯಾದ ಮಹಿಳೆ, ಮದುವೆಯಾಗಿರದ ಮಹಿಳೆ ಎನ್ನುವ ಭೇದ ಮಾಡುವಂತಿಲ್ಲ. ಮಹಿಳೆಯ ಹಕ್ಕುಗಳನ್ನು ಗೌರವಿಸುವುದು ಮುಖ್ಯವಾಗುತ್ತದೆ. ಭಾರತದಲ್ಲಿ ಎಲ್ಲ ಮಹಿಳೆಯರು ಕೂಡ ಅಬಾರ್ಶನ್ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಪೂರ್ಣ ಸ್ವತಂತ್ರಳಾಗಿರುತ್ತಾಳೆ ಎಂದು ತೀರ್ಪಿನಲ್ಲಿ ಕೋರ್ಟ್ ಹೇಳಿದೆ.

ದೆಹಲಿ ಹೈಕೋರ್ಟ್ ನಲ್ಲಿ ಗಂಡನ ಲೈಂಗಿಕ ಕಿರುಕುಳವನ್ನೂ ಅಪರಾಧ ಎಂದು ಪರಿಗಣಿಸುವಂತೆ ಕೇಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ನಡುವೆ, ಅದೇ ರೀತಿಯ ಅರ್ಜಿ ಸುಪ್ರೀಂ ಕೋರ್ಟಿನಲ್ಲೂ ವಿಚಾರಣೆ ಬಂದಿದೆ. ಐಪಿಸಿ ಸೆಕ್ಷನ್ 375 ಪ್ರಕಾರ, ಪತ್ನಿಗೆ ಗಂಡ ಲೈಂಗಿಕ ಕಿರುಕುಳ ನೀಡಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು ಹೇಳುತ್ತದೆ. ಆ ಕಾಯ್ದೆಯಲ್ಲಿ ಗಂಡನಿಗೆ ಲೈಂಗಿಕ ಅಪರಾಧದಿಂದ ರಕ್ಷಣೆ ನೀಡುತ್ತದೆ. ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟಿಗೆ ಹಲವು ಪಿಐಎಲ್ ಸಲ್ಲಿಕೆಯಾಗಿದೆ. 375 ಸೆಕ್ಷನ್ ಪ್ರಕಾರ, ಮೋಸದಿಂದ, ಆಮಿಷವೊಡ್ಡಿ ಅಥವಾ ಮಹಿಳೆಗೆ ತಿಳಿಯದಂತೆ ಬಲವಂತದಿಂದ ಲೈಂಗಿಕ ಸಂಬಂಧ ನಡೆಸಿದರೆ ಅತ್ಯಾಚಾರವಾಗುತ್ತದೆ. ಪತ್ನಿ ಎನ್ನುವುದು ಸುದೀರ್ಘ ಸಂಬಂಧ ಆಗಿರುವುದರಿಂದ ಈ ಕಾಯ್ದೆಯಡಿ ಆಕೆಯ ಮೇಲಿನ ಲೈಂಗಿಕ ಕಿರುಕುಳ ಅತ್ಯಾಚಾರ ಎಂದಾಗುವುದಿಲ್ಲ ಎಂಬ ವಾದವನ್ನು ವಕೀಲರು ಮಾಡಿದ್ದರು.
ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಈ ಕುರಿತ ಅರ್ಜಿಯಲ್ಲಿ ಎಂಟಿಪಿ ಆಕ್ಟ್ ಪ್ರಕಾರ, ಯಾವುದೇ ಮಹಿಳೆ 24 ವಾರಗಳ ವರೆಗಿನ ಭ್ರೂಣವನ್ನು ಅಬಾರ್ಶನ್ ಮೂಲಕ ತೆಗೆಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಹಕ್ಕು ಹೊಂದಿದ್ದಾಳೆ. ಅದಕ್ಕೆ ಮದುವೆಯಾಗಿರಬೇಕು, ಮದುವೆಯಾಗದಿರುವುದು ಮಾನದಂಡ ಅಲ್ಲ. ಬೇಡದ ಮಗು ಎಂದಾಗಿದ್ದರೆ, ಅದರಲ್ಲಿ ಬಲವಂತದ ಸೆಕ್ಸ್ ಎಂದು ಪರಿಗಣಿತವಾದಲ್ಲಿ ಅತ್ಯಾಚಾರ ದೂರು ನೀಡವುದಕ್ಕೂ ಆಸ್ಪದವಿರುತ್ತದೆ ಎಂದು ತೀರ್ಪು ನೀಡಿದೆ.
The Supreme Court on Thursday gave its verdict on the termination of pregnancy under the Medical Termination of Pregnancy (MTP) Act. In a landmark ruling, the top court said that for the purpose of abortion, marital rape will be recognised as rape.The apex court said that sexual assault committed by a husband on his wife will also be recognised as rape under the provisions of the act. It added that the definition of rape will include marital rape under the MTP act.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm