ಬ್ರೇಕಿಂಗ್ ನ್ಯೂಸ್
26-09-22 07:19 pm HK News Desk ದೇಶ - ವಿದೇಶ
ನವದೆಹಲಿ, ಸೆ.26: ರಾಜಸ್ಥಾನದಲ್ಲಿ ತ್ವರಿತ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ. ಭಾನುವಾರ ರಾತ್ರಿ ಗೆಹ್ಲೋಟ್ ಪರ ಇರುವ 90ಕ್ಕೂ ಹೆಚ್ಚು ಶಾಸಕರು ಹೈಡ್ರಾಮಾ ನಡೆಸಿದ್ದು, ಗೆಹ್ಲೋಟ್ ಜಾಗವನ್ನು ಸಚಿನ್ ಪೈಲಟ್ ಗೆ ವಹಿಸಿದರೆ ಶಾಸಕ ಸ್ಥಾನಕ್ಕೇ ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ಅವರನ್ನೂ ಭೇಟಿಯಾಗದೆ ಅಸಹಕಾರ ತೋರಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಶಾಸಕಾಂಗ ಸಭೆಯನ್ನು ಕರೆಯಲು ಸೂಚಿಸಿದ್ದರೂ, ಅಲ್ಲಿನ ಶಾಸಕರು ಅದಕ್ಕೆ ಒಪ್ಪಿಲ್ಲ. ಒಂದೋ ನಾವು ಹೇಳುವ ಮಂದಿಯನ್ನು ಮುಖ್ಯಮಂತ್ರಿ ಮಾಡಬೇಕು. 2020ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಗುಂಪಿಗೆ ಮುಖ್ಯಮಂತ್ರಿ ಸ್ಥಾನ ನೀಡಬಾರದು ಎಂದು ತಗಾದೆ ತೆಗೆದಿದ್ದು ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡು ಮಾಡಿದೆ. ಈ ಬಗ್ಗೆ ರಾಜಸ್ಥಾನಕ್ಕೆ ವೀಕ್ಷಕರಾಗಿ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸೋಮವಾರ ವರದಿ ನೀಡಿದ್ದಾರೆ. ಅಲ್ಲದೆ, ಅಶೋಕ್ ಗೆಹ್ಲೋತ್ ಪಕ್ಷಾಧ್ಯಕ್ಷ ಹುದ್ದೆಗೇರಿಸುವ ಬದಲು ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಆದ್ಯತೆ ಕೊಡುವುದು ಉತ್ತಮ ಎಂಬ ಅಭಿಪ್ರಾಯ ನೀಡಿದ್ದಾರೆ.
ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ರಾಜಸ್ಥಾನದ ಹೆಚ್ಚಿನ ಶಾಸಕರು ಪಕ್ಷದ ಅಧ್ಯಕ್ಷ ಹುದ್ದೆ ನಿರ್ಣಯ ಆದಬಳಿಕ ಮುಂದಿನ ಮುಖ್ಯಮಂತ್ರಿ ನಿರ್ಣಯ ಮಾಡಿ. ಅಲ್ಲಿ ವರೆಗೂ ಹೋಲ್ಡ್ ಮಾಡಿ ಎಂದು ಹೇಳಿದ್ದಾರೆ. ಇದು ಅಲ್ಲಿನ ಕೆಲವರ ಹಿತಾಸಕ್ತಿಯನ್ನು ತೋರಿಸುತ್ತಿದೆ. ನಾವು ಒಬ್ಬೊಬ್ಬ ಶಾಸಕರನ್ನು ಭೇಟಿಯಾಗಲು ಬಯಸಿದ್ದೆವು. ಆದರೆ ಶಾಸಕರು ಗುಂಪಾಗಿಯೇ ಬಂದು ಅಭಿಪ್ರಾಯ ತಿಳಿಸಿದ್ದಾರೆ. ನಾವು ಸೋನಿಯಾ ಗಾಂಧಿಗೆ ವರದಿ ಕೊಟ್ಟಿದ್ದೇವೆ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಕೆಲವು ಶಾಸಕರ ವಿರುದ್ಧ ಶಿಸ್ತು ತೆಗೆದುಕೊಳ್ಳುವಂತೆಯೂ ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದ ಖರ್ಗೆ, ಪಕ್ಷದ ಶಾಸಕರು ಶಿಸ್ತಿನಲ್ಲಿ ಇರಬೇಕು, ಶಿಸ್ತು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು.
ಗೆಹ್ಲೋಟ್ ಪಕ್ಷಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಸುಳಿವು ಇದ್ದುದರಿಂದ ಸಚಿನ್ ಪೈಲಟ್ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಗೆಹ್ಲೋಟ್ ಪರ ಇರುವ ಸಿಪಿ ಜೋಷಿ ಸೇರಿದಂತೆ ಪ್ರಮುಖ ನಾಯಕರು ಸಚಿನ್ ಪೈಲಟ್ ಸಿಎಂ ಆಗುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಗೆಹ್ಲೋಟ್ ಪರ ಇರುವ 90ಕ್ಕೂ ಹೆಚ್ಚು ಮಂದಿ ಸಚಿನ್ ವಿರುದ್ಧ ನಿಲುವು ಹೊಂದಿದ್ದಾರೆ. 2020ರಲ್ಲಿ ಸಚಿನ್ ಪೈಲಟ್ ಜೊತೆಗಿದ್ದ 18 ಮಂದಿ ಶಾಸಕರು, ಗೆಹ್ಲೋಟ್ ವಿರುದ್ಧ ನಿಂತು ಒಂದು ತಿಂಗಳ ಕಾಲ ರೆಸಾರ್ಟಿನಲ್ಲಿದ್ದರು. ಬಿಜೆಪಿ ಜೊತೆಗೆ ಹೋಗುವುದಕ್ಕೂ ಮುಂದಾಗಿದ್ದರು. ಆದರೆ 102 ಶಾಸಕರು ಗೆಹ್ಲೋಟ್ ಪರ ಇದ್ದುದರಿಂದ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಡಿಸಿಎಂ ಹುದ್ದೆ ನೀಡಲು ಒಪ್ಪಿದ್ದರೂ ಸಚಿನ್ ಪೈಲಟ್ ಅದಕ್ಕೆ ಒಪ್ಪಿರಲಿಲ್ಲ.
Following the crisis in Rajasthan, CM Ashok Gehlot, who was considered as the front-runner in Congress president poll race, is no longer in the race. Sources said party top leadership is not keen on him filing nomination.Congress in-charge for Rajasthan Ajay Maken on Monday slammed the MLAs loyal to Rajasthan Chief Minister Ashok Gehlot for setting conditions for a party resolution, terming it a “conflict of interest”, and said their decision to hold a parallel meeting amounted to indiscipline.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm