ಬ್ರೇಕಿಂಗ್ ನ್ಯೂಸ್
25-09-22 10:03 pm HK News Desk ದೇಶ - ವಿದೇಶ
ನವದೆಹಲಿ, ಸೆ.25: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನ ದರ್ಶನಕ್ಕಾಗಿ ನದಿ ದಾಟಲು ದೋಣಿಯಲ್ಲಿ ಸಾಗುತ್ತಿದ್ದಾಗ ದೋಣಿ ಮಗುಚಿ ಬಿದ್ದು 24 ಮಂದಿ ದುರ್ಮರಣಕ್ಕೀಡಾದ ಘಟನೆ ಬಾಂಗ್ಲಾ ದೇಶದಲ್ಲಿ ನಡೆದಿದೆ.
ಪಂಚ್ ಗರ್ ಜಿಲ್ಲೆಯ ಕಾರತೋಯಾ ನದಿಯಲ್ಲಿ ದುರಂತ ಸಂಭವಿಸಿದೆ. ಔಲಿಯಾ ಘಾಲಿ ಘಾಟ್ ಪ್ರದೇಶದಿಂದ ಬಾಧೇಶ್ವರ್ ದೇವಸ್ಥಾನಕ್ಕೆ ತೆರಳಲು ನದಿಯನ್ನು ದಾಟುವುದಕ್ಕಾಗಿ ದೋಣಿಯಲ್ಲಿ ತೆರಳುತ್ತಿದ್ದರು. ಮಹಾಲಯ ಅಮಾವಾಸ್ಯೆ ಪುಣ್ಯ ದಿನದಂದು ದುರ್ಗಾ ದೇವಿಯನ್ನು ಪೂಜಿಸುವುದು ಬಂಗಾಳದಲ್ಲಿ ವಿಶೇಷ. ಹೀಗಾಗಿ ಬೋಡಾ, ಪಂಚ್ ಪೀರ್, ಮರಿಯಾ, ಬಂಘಾರಿ ಪ್ರದೇಶದ ಹಿಂದುಗಳು ದೇವಸ್ಥಾನಕ್ಕೆ ತೆರಳುತ್ತಿದ್ದರು.
ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಹೋಗುತ್ತಿದ್ದ ಕಾರಣ ನದಿಯಲ್ಲಿ ಮಧ್ಯದಲ್ಲಿರುವಾಗಲೇ ಮಗುಚಿ ಬಿದ್ದಿದೆ ಎನ್ನಲಾಗುತ್ತಿದೆ. ಹಲವರು ಈಜಿ ದಡ ಸೇರಿದ್ದರೆ, ಇನ್ನೂ ಹಲವರು ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಕ್ಕಳು, ಮಹಿಳೆಯರು ಸೇರಿ 24 ಮಂದಿಯ ಶವ ಸಿಕ್ಕಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಮಹಮ್ಮದ್ ಝಹರುಲ್ ಇಸ್ಲಾಮ್ ತಿಳಿಸಿದ್ದಾರೆ. ಈಜಿ ದಡ ಸೇರಿದವರ ಪ್ರಕಾರ, 30ಕ್ಕೂ ಹೆಚ್ಚು ನದಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಪೈಕಿ 24 ಮಂದಿಯ ಶವ ಸಿಕ್ಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ನದಿಗಳನ್ನು ದಾಟಲು ಹೆಚ್ಚಿನ ಕಡೆ ದೋಣಿಗಳನ್ನೇ ಬಳಸುತ್ತಾರೆ. ಢಾಕಾ ಇನ್ನಿತರ ನಗರ ಪ್ರದೇಶಗಳಿಗೆ ತೆರಳುವುದಕ್ಕೂ ದೋಣಿಗಳೇ ಆಸರೆ. ಆದರೆ ಹೆಚ್ಚಿನ ದೋಣಿ, ಬೋಟ್ ಗಳು ಅಸುರಕ್ಷಿತವಾಗಿದ್ದು, ಪ್ರಯಾಣಕ್ಕೆ ಸೂಕ್ತವಾಗಿಲ್ಲ ಎಂದು ಅಲ್ಲಿನ ನೌಕಾಪಡೆ ತಿಳಿಸಿದೆ.
At least 24 people drowned and several more went missing after a boat capsized on the Karatoya river in the northern district of Panchagarh in Bangladesh on Sunday.The accident took place in Auliar Ghat area under Maria Union Parishad of Boda Upazila (an administrative region in Bangladesh functioning as a sub-unit of a district). According to rescued passengers and locals, people from the Hindu community from Boda, Panchpir, Marea and Banghari areas were going from Aulia Ghat towards Badheshwar temple to offer prayers on the occasion of Mahalaya--an auspicious occasion in the Hindu calendar marking the arrival of Goddess Durga.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm