ಬ್ರೇಕಿಂಗ್ ನ್ಯೂಸ್
21-09-22 09:25 pm HK News Desk ದೇಶ - ವಿದೇಶ
ನವದೆಹಲಿ, ಸೆ.21 : ಏಕಕಾಲದಲ್ಲಿ ಎರಡು ಕಂಪನಿಗೆ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿ ವಿಪ್ರೋ ಕಂಪನಿ ತನ್ನಲ್ಲಿದ್ದ 300 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ ಜಿ, ಮೂನ್ ಲೈಟಿಂಗ್ (ಟೆಕ್ಕಿಗಳು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ ಮಾಡುವ ಅಭ್ಯಾಸ) ಮಾಡುತ್ತಿದ್ದಾರೆ. ಅಂಥ ಸಿಬಂದಿಯನ್ನು ಪತ್ತೆ ಮಾಡಿ ಕಿತ್ತು ಹಾಕಿದ್ದೇವೆ ಎಂದಿದ್ದಾರೆ.
ವಿಪ್ರೋ ಜೊತೆ ಕೆಲಸ ಮಾಡುತ್ತಿದ್ದಾಗಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡಲು ನಿರ್ಧರಿಸಿರುವ ಉದ್ಯೋಗಿಗಳಿಗೆ ಕಂಪನಿಯಲ್ಲಿ ಸ್ಥಾನವಿಲ್ಲ ಎಂದು ಪ್ರೇಮ್ ಜಿ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ 300 ಜನರನ್ನು ನಾವು ಪತ್ತೆ ಮಾಡಿದ್ದೇವೆ. ಇದು ಮೋಸ. ಕಂಪನಿ ನಿಯಮದ ಉಲ್ಲಂಘನೆಯಾಗಿದೆ ಎಂದರು.
ಟೆಕ್ ಉದ್ಯಮದಲ್ಲಿ ಉದ್ಯೋಗಿಗಳು ಮೂನ್ ಲೈಟ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ವಿಪ್ರೋ ಅಧ್ಯಕ್ಷರ ಟ್ವೀಟ್ ಉದ್ಯಮದೊಳಗೆ ಭಾರೀ ಸಂಚಲನ ಸೃಷ್ಟಿಸಿದೆ. ಅನೇಕ ಐಟಿ ಕಂಪನಿಗಳು ಇಂತಹ ಅಭ್ಯಾಸಗಳ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿವೆ.
ಕಳೆದ ವಾರ ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ ದ್ವಂದ್ವ ಉದ್ಯೋಗ ಅಥವಾ 'ಮೂನ್ಲೈಟಿಂಗ್' ಅನ್ನು ಅನುಮತಿಸುವುದಿಲ್ಲ ಎಂದು ಹೇಳಿತ್ತು. ಷರತ್ತುಗಳ ಯಾವುದೇ ಉಲ್ಲಂಘನೆ ಉದ್ಯೋಗ ಕಳೆದುಕೊಳ್ಳಲು ಕಾರಣವಾದೀತು ಎಂದು ಶಿಸ್ತು ಕ್ರಮದ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ವಿಪ್ರೋ ಕಂಪನಿಯು 300 ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.
Wipro Chairman Rishad Premji on Wednesday said that 300 people who worked with the company were also found to be working for one of its competitors at the same time, as he firmly stood his ground that moonlighting is “complete violation of integrity in its deepest form”.Speaking at an AIMA event, Mr. Premji who has been a vocal critic of moonlighting (the practice of techies taking up side gigs to work more than one job at a time) made it clear that the company had no place for such employees, who even while working with Wipro chose to directly work for rivals, simultaneously.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm