ಬ್ರೇಕಿಂಗ್ ನ್ಯೂಸ್
20-09-22 06:54 pm HK News Desk ದೇಶ - ವಿದೇಶ
ಮುಂಬೈ, ಸೆ.20 : ಸ್ಪೈಸ್ ಜೆಟ್ ಏರ್ವೇಸ್ ಸಂಸ್ಥೆಯು ತನ್ನ 80 ಪೈಲಟ್ಗಳನ್ನು ವೇತನವಿಲ್ಲದೆ ಮೂರು ತಿಂಗಳ ಕಾಲ ರಜೆಯಲ್ಲಿ ಕಳುಹಿಸಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಸ್ಪೈಸ್ ಜೆಟ್ ಏರ್ವೇಸ್ ಹೇಳಿಕೊಂಡಿದೆ.
ಈ ಬಗ್ಗೆ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಕೆಲವು ಮೂಲಗಳ ಪ್ರಕಾರ ಬೋಯಿಂಗ್ 737 ವಿಭಾಗದ 40 ಪೈಲಟ್ಗಳು ಹಾಗೂ Q400 ವಿಭಾಗದ 40 ಪೈಲಟ್ಗಳು ಹೀಗೆ ಒಟ್ಟು 80 ಪೈಲಟ್ಗಳನ್ನು ಧೀರ್ಘ ರಜೆಯಲ್ಲಿ ಕಳುಹಿಸಲು ಏರ್ಲೈನ್ಸ್ ಸಿದ್ಧತೆ ನಡೆಸಿದೆ.

ದೇಶೀಯವಾಗಿ ಕಾರ್ಯ ನಿರ್ವಹಿಸುವ ವಿಮಾನಗಳಲ್ಲಿರುವ ಒಟ್ಟು 80 ಪೈಲಟ್ಗಳನ್ನು ಮೂರು ತಿಂಗಳ ವರೆಗೆ ವೇತನ ರಹಿತ ರಜೆಯ ಮೇಲೆ ಹೋಗಲು ಆದೇಶಿಸಲಾಗಿದೆ. ಡಿಸೆಂಬರ್ನಲ್ಲಿ ಏಳು ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್ಲೈನ್ಸ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದ್ದಾಗಿ ವರದಿ ಆಗಿದೆ.
ಇದಲ್ಲದೇ ಹೊಸ ವಿಮಾನಗಳು ಬರುವವರೆಗೆ, ಕಡಿಮೆ ಸಂಖ್ಯೆಯ ಸಿಬ್ಬಂದಿ ಬಳಸಿಕೊಂಡು ವಿಮಾನ ಹಾರಾಟ ನಡೆಸಲು ಮುಂದಾಗಿದೆ. ವೆಟ್-ಲೀಸ್ಡ್ ವಿಮಾನಗಳಿಗೆ ಹೆಚ್ಚಿನ ಪೈಲಟ್ಗಳ ಅಗತ್ಯವಿಲ್ಲ. ಏಕೆಂದರೆ ಅವುಗಳನ್ನು ಬಾಡಿಗೆಗೆ ಪಡೆಯುವ ಏರ್ಲೈನ್ ಸಿಬ್ಬಂದಿ ನಿರ್ವಹಿಸುತ್ತಾರೆ. 2021 ಆರಂಭದಲ್ಲಿ ಈ ಸ್ಪೈಸ್ ಜೆಟ್ ಏರ್ಲೈನ್, 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ ಕೇವಲ 50 ವಿಮಾನಗಳನ್ನು ಹೊಂದಿದೆ. ಹಲವು ವಿಮಾನಗಳನ್ನು ಅದು ಲೀಸ್ ಮೇಲೆ ಬೇರೆಯವರಿಗೆ ನೀಡಿದೆ. ಮತ್ತೆ ಕೆಲವು ನಿರ್ವಹಣಾ ಕಾರಣಕ್ಕೆ ಹಾರಾಟ ನಡೆಸುತ್ತಿಲ್ಲ.
ಹೀಗಾಗಿ ಹೆಚ್ಚಿನ ಪೈಲಟ್ಗಳನ್ನು ಇರಿಸಿಕೊಂಡು ಸಂಸ್ಥೆಯನ್ನು ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
SpiceJet will send around 80 pilots on Leave Without Pay as the airline finds itself with excess pilots. Sources said that around 40 pilots from the Boeing 737 fleet and another 40 from the Q400 fleet- which the airline operates on regional routes have been asked to go on Leave Without Pay for three months.The airline will call them back gradually as it deploys new aircraft into its fleet. SpiceJet plans to add seven new Boeing 737 Max starting from December.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm