ಬ್ರೇಕಿಂಗ್ ನ್ಯೂಸ್
14-09-22 04:06 pm HK News Desk ದೇಶ - ವಿದೇಶ
ಚೆನ್ನೈ, ಸೆ.14 : ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಎ.ರಾಜಾ ಹಿಂದುಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ವಿವಾದಕ್ಕೆ ತುತ್ತಾಗಿದ್ದಾರೆ. ಶೂದ್ರರ ಕುರಿತು ಎ.ರಾಜಾ ನೀಡಿರುವ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ಕೆಂಡಾಮಂಡಲವಾಗಿದೆ.
ಪಕ್ಷದ ಸಭೆಯಲ್ಲಿ ಮಾತನಾಡಿದ ಎ. ರಾಜಾ, "ಹಿಂದೂ ಆಗಿ ಉಳಿಯುವವರೆಗೂ ನೀನು ಶೂದ್ರನಾಗಿರುವೆ. ಶೂದ್ರನಾಗಿ ಉಳಿಯುವವರೆಗೂ ನೀನು ವೇಶ್ಯೆಯ ಮಗನಾಗಿರುತ್ತೀಯ. ಹಿಂದೂ ಆಗಿ ಉಳಿಯುವವರೆಗೂ ನೀನು ಪಂಚಮನಾಗಿರುತ್ತಿ (ದಲಿತ). ಹಿಂದೂ ಆಗಿ ಉಳಿಯುವವರೆಗೂ ನೀನು ಅಸ್ಪೃಶ್ಯನಾಗುಯೇ ಇರುತ್ತೀಯ ಎಂದು ಹಿಂದುಳಿದ ಜನಾಂಗದ ಬಗ್ಗೆ ಹೇಳಿದ್ದರು.
ಮನುಸ್ಮೃತಿಯಲ್ಲಿ ಶೂದ್ರರನ್ನು ಅವಮಾನಿಸಲಾಗಿದೆ. ಶೂದ್ರರಿಗೆ ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ನೀಲಗಿರಿಯ ಸಂಸದ ಎ.ರಾಜಾ ಅಸಮಾಧಾನ ಹೊರಹಾಕಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಎ.ರಾಜಾ, "ನಿಮ್ಮಲ್ಲಿ ಎಷ್ಟು ಮಂದಿ ವೇಶ್ಯೆಯರ ಮಕ್ಕಳಾಗಿ ಉಳಿಯಲು ಬಯಸುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಅಸ್ಪೃಶ್ಯರಾಗಿ ಉಳಿಯಲು ಬಯಸುತ್ತೀರಿ? ಈ ಪ್ರಶ್ನೆಗಳ ಬಗ್ಗೆ ನಾವು ಧ್ವನಿ ಎತ್ತಿದರೆ ಮಾತ್ರ ಸನಾತನ ಧರ್ಮದ ಪ್ರಭಾವದಿಂದ ಹೊರಬರಲು ಸಾಧ್ಯ ಎಂದು ಎ.ರಾಜಾ ಹೇಳಿದ್ದಾರೆ.
ಒಬ್ಬ ವ್ಯಕ್ತಿ ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಅಲ್ಲದಿದ್ದರೆ, ಅವನು ಹಿಂದೂ ಆಗಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ಮಾಜಿ ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. ಇಂತಹ ಸಾಮಾಜಿಕ ಕ್ರೌರ್ಯವನ್ನು ಪ್ರಸ್ತುತ ಜಗತ್ತಿನ ಯಾವುದೇ ದೇಶ ಎದುರಿಸುತ್ತಿಲ್ಲ ಎಂದು ಎ. ರಾಜಾ ತೀವ್ರ ವಾಗ್ದಾಳಿ ನಡೆಸಿದ್ದರು.
ಈ ಕುರಿತು ರಣಿ ಟ್ವೀಟ್ಗಳನ್ನೂ ಮಾಡಿರುವ ಎ. ರಾಜಾ, "ಶೂದ್ರರು ಯಾರು? ಅವರು ಹಿಂದೂಗಳಲ್ಲವೇ? ಮನುಸ್ಮೃತಿಯಲ್ಲಿ ಅವರನ್ನು ಏಕೆ ಅವಮಾನಿಸಲಾಗಿದೆ. ಶೂದ್ರರಿಗೆ ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯ ಪ್ರವೇಶವನ್ನು ಏಕೆ ನಿರಾಕರಿಸಲಾಗಿದೆ. ದ್ರಾವಿಡ ಚಳುವಳಿ ಶೇ.90ರಷ್ಟು ಶೂದ್ರರನ್ನು ಈ ಸಾಮಾಜಿಕ ಜೀತದಿಂದ ರಕ್ಷಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಿಎಂಕೆ ಸಂಸದ ಎ. ರಾಜಾ ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ಅತ್ಯುಗ್ರವಾಗಿ ಖಂಡಿಸಿದೆ. ಹಿಂದೂ ಸಮಾಜದ ಒಗ್ಗಟ್ಟನ್ನು ಒಡೆಯಲು ಎ.ರಾಜಾ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಮಾತನಾಡಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ, ಎ.ರಾಜಾ ಅವರ ಹೇಳಿಕೆಯನ್ನು ʼತಮಿಳುನಾಡಿನ ರಾಜಕೀಯ ಭಾಷಣದ ಒಂದು ವಿಷಾದನೀಯ ಸ್ಥಿತಿʼ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಎ. ರಾಜಾ ಇತರರನ್ನು ಸಮಾಧಾನಪಡಿಸುವ ಏಕೈಕ ಗುರಿಯೊಂದಿಗೆ ಒಂದು ಸಮುದಾಯದ ವಿರುದ್ಧ ಮತ್ತೊಮ್ಮೆ ದ್ವೇಷವನ್ನು ಹೊರಹಾಕಿದ್ದಾರೆ. ಇಡೀ ತಮಿಳುನಾಡನ್ನು ತಮ್ಮದೇ ಎಂದು ಭಾವಿಸುವ ಈ ರಾಜಕೀಯ ನಾಯಕರ ದುರದೃಷ್ಟಕರ ಮನಸ್ಥಿತಿ ರಾಜ್ಯವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದೂ ಅಣ್ಣಾಮಲೈ ಕಿಡಿಕಾರಿದ್ದಾರೆ.
Chennai, Sep 13 (PTI) DMK deputy general secretary A Raja stoked a controversy over his Shudra remark and drew BJP’s ire with the saffron party accusing him of spewing hatred against a community to appease others.Shudras, the Nilgiris MP claimed, were insulted in Manusmrithi and denied equality, education, employment and entry into temples.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm