ಸೋನಾಲಿ ಫೋಗಟ್ ಕೊಲೆ ಪ್ರಕರಣ ; ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಗೋವಾ ಸರಕಾರ

12-09-22 06:53 pm       HK News Desk   ದೇಶ - ವಿದೇಶ

ಬಿಜೆಪಿ ನಾಯಕಿ, ಟಿವಿ ರಿಯಾಲಿಟಿ ಶೋ ತಾರೆ ಸೋನಾಲಿ ಫೋಗಟ್ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಗೋವಾ ಸರಕಾರ ಶಿಫಾರಸು ಮಾಡಿದೆ.

ಪಣಜಿ, ಸೆ.12: ಬಿಜೆಪಿ ನಾಯಕಿ, ಟಿವಿ ರಿಯಾಲಿಟಿ ಶೋ ತಾರೆ ಸೋನಾಲಿ ಫೋಗಟ್ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಗೋವಾ ಸರಕಾರ ಶಿಫಾರಸು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದು ಸಿಬಿಐ ತನಿಖೆ ನಡೆಸಲು ಕೋರಿದ್ದೇನೆ ಎಂದು ತಿಳಿಸಿದ್ದಾರೆ.

ಹರ್ಯಾಣದಲ್ಲಿ ಬಿಗ್ ಬಾಸ್ ತಾರೆಯೂ ಆಗಿದ್ದ ಸೋನಾಲಿ ಫೋಗಟ್ ಆಗಸ್ಟ್ 23ರಂದು ಗೋವಾಕ್ಕೆ ಬಂದಿದ್ದ ವೇಳೆ ನಿಗೂಢ ಸಾವು ಕಂಡಿದ್ದರು. ಈ ಬಗ್ಗೆ ಕುಟುಂಬಸ್ಥರು ಸೋನಾಲಿ ಜೊತೆಗಿದ್ದ ಮ್ಯಾನೇಜರ್ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದರು. ತನಿಖೆ ನಡೆಸಿದ್ದ ಗೋವಾ ಪೊಲೀಸರು ಇಬ್ಬರು ಮ್ಯಾನೇಜರ್ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದರು.

CBI raids 40 locations in NGO bribes case, detains 7 Home Ministry officials

ಆದರೆ ಪ್ರಕರಣದ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸೋದರರು ಸಿಬಿಐ ತನಿಖೆ ನಡೆಸಲು ಒತ್ತಾಯಿಸಿದ್ದರು. ಹರ್ಯಾಣದಲ್ಲಿ ನೆಲೆಸಿದ್ದ ಸೋನಾಲಿ ಫೋಗಟ್ ಅವರ ಪತಿ ನಾಲ್ಕು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಆನಂತರ, ಪರಿಚಯ ಆಗಿದ್ದ ಸುಖ್ ವಿಂದರ್ ಸಿಂಗ್ ತಾನೇ ಆಕೆಯ ಮ್ಯಾನೇಜರ್ ಆಗಿ ಜೊತೆ ಸೇರಿಕೊಂಡಿದ್ದ. ಆದರೆ ಈ ನಡುವೆ ಆಕೆಗೆ ಮತ್ತು ಬರಿಸುವ ಜ್ಯೂಸ್ ಕೊಟ್ಟು ಅತ್ಯಾಚಾರ ಎಸಗಿದ್ದಲ್ಲದೆ, ಅದರ ವಿಡಿಯೋ ಮಾಡಿಟ್ಟು ಆಕೆಯ ಆಸ್ತಿಯನ್ನು ಕೊಳ್ಳೆ ಹೊಡೆದಿದ್ದರು. ಪದೇ ಪದೇ ಅತ್ಯಾಚಾರ ನಡೆಸಿ ಕಿರುಕುಳ ನೀಡುತ್ತಿದ್ದರು ಅನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸೋನಾಲಿ ಸೋದರನೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಇದು ಸಹಜ ಸಾವಲ್ಲ, ಕೊಲೆಯೆಂದು ಆರೋಪ ಮಾಡಿದ್ದರು. ಅದರಂತೆ, ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. 

The Ministry of Home Affairs (MHA) on Monday recommended a CBI probe into BJP leader Sonali Phogat’s death case, sources told ANI news agency.Earlier in the day, the Goa government said it will hand over the investigation of the case to the Central Bureau of Investigation. Chief Minister Pramod Sawant wrote to Union Home Minister Amit Shah to hand over the murder case to the central agency.