ನೀಟ್‌ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಆತ್ಮಹತ್ಯೆಗೆ ಯತ್ನ ; ಫೇಸ್ ಬುಕ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಉಳೀತು ಜೀವ ! 

09-09-22 08:35 pm       HK News Desk   ದೇಶ - ವಿದೇಶ

'ನೀಟ್‌'ನಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗದೇ ಮಾನಸಿಕ ಉದ್ವೇಗಕ್ಕೆ ಒಳಗಾಗಿ ವಿಷ ಸೇವನೆಗೆ ಮುಂದಾಗಿದ್ದ 29 ವರ್ಷದ ವಿದ್ಯಾರ್ಥಿಯೊಬ್ಬನ ಜೀವವನ್ನು ಫೇಸ್​ಬುಕ್​ ಕಾಪಾಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಉತ್ತರ ಪ್ರದೇಶ,ಸೆ.9: 'ನೀಟ್‌'ನಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗದೇ ಮಾನಸಿಕ ಉದ್ವೇಗಕ್ಕೆ ಒಳಗಾಗಿ ವಿಷ ಸೇವನೆಗೆ ಮುಂದಾಗಿದ್ದ 29 ವರ್ಷದ ವಿದ್ಯಾರ್ಥಿಯೊಬ್ಬನ ಜೀವವನ್ನು ಫೇಸ್​ಬುಕ್​ ಕಾಪಾಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಷಯ ಯುವಕ ಫೇಸ್​ಬುಕ್​ನಲ್ಲಿ ತಿಳಿಸಿದ್ದ. ನಂತರ ಆತ್ಮಹತ್ಯೆಗೆ ಮುಂದಾಗಿದ್ದ. ಇದು ಫೇಸ್​ಬುಕ್​ ಸಿಬ್ಬಂದಿಗೆ ತಿಳಿಯುತ್ತಲೇ ಮಿಂಚಿನ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯ ಜೀವ ಕಾಪಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ವಿದ್ಯಾರ್ಥಿಯ ಮನವೊಲಿಕೆ ಮಾಡಿದ್ದಾರೆ.

ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ವಿಷಯವನ್ನು ತಕ್ಷಣವೇ ಸ್ಥಳೀಯ ಡಿಜಿಪಿ ಕೇಂದ್ರ ಕಚೇರಿಯಲ್ಲಿರುವ ಸೋಷಿಯಲ್ ಮೀಡಿಯಾ ಸೆಂಟರ್​ಗೆ ಫೇಸ್​ಬುಕ್ ತಿಳಿಸಿತ್ತು. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೋಸ್ಟ್ ಹಾಕಿದ್ದ ಯುವಕನ ಮನೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಚಿರಂಜೀವ ನಾಥ್ ಸಿನ್ಹಾ ತಕ್ಷಣವೇ ಧಾವಿಸಿ ಆತನ ಜೀವ ಉಳಿಸಿದ್ದಾರೆ.

'ಆ ಯುವಕ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಮತ್ತು ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾನೆ. ನಾವು ಆತನಿಗೆ ಪೊಲೀಸ್ ಮೊಬೈಲ್ ಸಂಖ್ಯೆ ಒದಗಿಸಿದ್ದೇವೆ ಮತ್ತು ಯಾವುದೇ ಸಮಸ್ಯೆ ಇದ್ದಾಗ ತಕ್ಷಣ ಕರೆ ಮಾಡುವಂತೆ ತಿಳಿಸಿದ್ದೇವೆ' ಎಂದು ಸಿನ್ಹಾ ಹೇಳಿದರು.

ಇಂಥದ್ದೊಂದು ಚಮತ್ಕಾರಕ್ಕೆ ಕಾರಣವಾಗಿರುವುದು ಉತ್ತರ ಪ್ರದೇಶ ಸರ್ಕಾರ. ಆತ್ಮಹತ್ಯೆಗೆ ಯತ್ನ ಪ್ರಕರಣಗಳ ಮೇಲೆ ನಿರಂತರವಾಗಿ ನಿಗಾ ಇಡುವ ಮೂಲಕ ಜೀವಗಳನ್ನು ಉಳಿಸುವ ಉದ್ದೇಶದಿಂದ ಉತ್ತರಪ್ರದೇಶ ಸರ್ಕಾರ, ಫೇಸ್​ಬುಕ್​ ನಡುವೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ಇದರ ನಿಮಿತ್ತ ಯಾವುದೇ ಆತ್ಮಹತ್ಯೆ ಯತ್ನದ ಬಗ್ಗೆ ಮಾಹಿತಿ ತಿಳಿಯುತ್ತಲೇ ಫೇಸ್​​ಬುಕ್ ಪೊಲೀಸ್ ಇಲಾಖೆಗೆ ತುರ್ತು ಸಂದೇಶ ರವಾನಿಸುತ್ತದೆ. ಇದೇ ಕಾರಣಕ್ಕೆ ಈ ವಿದ್ಯಾರ್ಥಿಯ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದರು.

Facebook sent an SOS to the social media centre at DGP headquarters in Lucknow about a NEET aspirant in Lucknow potentially ending their life by consuming a poisonous substance and helped cops reach the scene and save his life. This was a part of an agreement between the Uttar Pradesh Police and the social networking site to save precious lives through real-time alerts and action to check cases of suicide.