ಬ್ರೇಕಿಂಗ್ ನ್ಯೂಸ್
08-09-22 09:16 pm HK News Desk ದೇಶ - ವಿದೇಶ
ಮುಂಬೈ, ಸೆ.8: ಟಾಟಾ ಸನ್ಸ್ ಕಂಪನಿಯ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿಗೆ ಕಾರಣವಾದ ಅಪಘಾತದಲ್ಲಿ ಲಕ್ಸುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್, ತನಿಖಾ ವರದಿಯನ್ನು ನೀಡಿದೆ. ಅಪಘಾತ ಆಗೋದಕ್ಕೂ ಮುನ್ನ ಕಾರು 100 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಕೇವಲ 5 ಸೆಕೆಂಡ್ ಮುನ್ನ ಬ್ರೇಕ್ ಅದುಮಲಾಗಿತ್ತು. ಅದರಿಂದಾಗಿ ನಿಯಂತ್ರಣ ತಪ್ಪಿ ಅಪಘಾತ ಆಗಿತ್ತು ಎಂದು ವರದಿಯಲ್ಲಿ ಹೇಳಿದೆ.
ಲಕ್ಸುರಿ ಕಾರು ಮರ್ಸಿಡಿಸ್ ಬೆಂಜ್ ನಲ್ಲಿ ಪ್ರಯಾಣಿಸುತ್ತಿದ್ದಾಗ ದೇಶದ ಹೆಸರಾಂತ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದು ಭಾರೀ ಚರ್ಚೆಗೂ ಕಾರಣವಾಗಿತ್ತು. ಅಂಥ ಲಕ್ಸುರಿ ಕಾರಿನಲ್ಲಿಯೂ ಅಪಘಾತದ ವೇಳೆ ಸಾವು ತಡೆಯಬಲ್ಲ ಸಾಧನೆ ಇಲ್ಲವೇ ಎಂದು ಪ್ರಶ್ನೆ ಕೇಳಿಬಂದಿತ್ತು. ಹೀಗಾಗಿ ಕಾರು ತಯಾರಕ ಕಂಪನಿ, ಅಪಘಾತದ ಬಗ್ಗೆ ತಾಂತ್ರಿಕ ತನಿಖೆ ನಡೆಸಿ ವರದಿಯನ್ನು ಪಾಲ್ಘಾರ್ ಪೊಲೀಸರಿಗೆ ನೀಡಿದೆ.
ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರನ್ನು ಮುಂಬೈನ ವೈದ್ಯೆ ಅನಾಹಿತಾ ಪಾಂಡೋಲೆ ಚಲಾಯಿಸುತ್ತಿದ್ದರು. ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರಿಬ್ಬರು ಕೂಡ ಒಂದೇ ಬದಿಯಲ್ಲಿ ಹಿಂದು ಮುಂದಿನ ಸೀಟಿನಲ್ಲಿ ಕುಳಿತಿದ್ದರು. 100 ಕಿಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದಾಗಲೇ ನಿಯಂತ್ರಣ ತಪ್ಪಿದ್ದು ಡ್ರೈವರ್ ಬ್ರೇಕ್ ಅದುಮಿದ್ದಾರೆ. ಕಾರಿನ ವೇಗ 89 ಕಿಮೀ ಅಂತರಕ್ಕೆ ಬರುವಷ್ಟರಲ್ಲಿ ರಸ್ತೆ ಮಧ್ಯದ ಡಿವೈಡರ್ ಮೇಲೆ ಡಿಕ್ಕಿಯಾಗಿ ಪಲ್ಟಿ ಹೊಡೆದಿತ್ತು. ಪಲ್ಟಿಯಾದ ರಭಸಕ್ಕೆ ಅದೇ ಬದಿಯಲ್ಲಿ ಕುಳಿತಿದ್ದ ಇಬ್ಬರು ಕೂಡ ಎದೆ ಮತ್ತು ತಲೆಗೆ ಪೆಟ್ಟು ಬಿದ್ದು ಸಾವು ಕಂಡಿದ್ದಾರೆ. ಕಾರಿನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಡ್ರೈವರ್ ಅನಹಿತಾ ಪಾಂಡೋಲೆ ಮತ್ತು ಅವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಡೇರಿಯಸ್ ಪಾಂಡೋಲೆ ಗಾಯಗೊಂಡಿದ್ದು ಸಾವಿನಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಡ್ರೈವರ್ ಬ್ರೇಕ್ ಅದುಮಿದ್ದೇ ಘಟನೆಗೆ ಕಾರಣವೇ ಎಂದು ಪೊಲೀಸರು ಮರ್ಸಿಡಿಸ್ ಬೆಂಜ್ ಕಂಪನಿ ಬಳಿ ಕೇಳಿದ್ದರು. ಪ್ರಾಥಮಿಕ ವರದಿಯನ್ನು ಕಂಪನಿ ಪ್ರತಿನಿಧಿಗಳು ನೀಡಿದ್ದಾರೆ. ಹಾಂಗ್ ಕಾಂಗ್ ನಿಂದ ತಜ್ಞರು ಬಂದು ವಿಸ್ತೃತ ವರದಿ ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಆರ್ ಟಿಓ ಮಾಹಿತಿ ಪ್ರಕಾರ, ಕಾರಿನಲ್ಲಿ ನಾಲ್ಕು ಏರ್ ಬ್ಯಾಗ್ ಅಳವಡಿಸಲಾಗಿತ್ತು. ಸಕಾಲದಲ್ಲಿ ಏರ್ ಬ್ಯಾಗ್ ಓಪನ್ ಆಗದೇ ಇದ್ದುದೇ ಅಪಘಾತಕ್ಕೆ ಕಾರಣವಾಗಿತ್ತು.
ಸೀಟ್ ಬೆಲ್ಟ್ ಹಾಕದ್ದರಿಂದ ಮಿಸ್ತ್ರಿ ಸಾವು
ಸ್ಥಳೀಯರ ಮಾಹಿತಿ ಪ್ರಕಾರ, ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಹಾಕ್ಕೊಂಡಿರಲಿಲ್ಲ. 2017ರ ಎಸ್ ಯುವಿ ಮಾಡೆಲ್ ಕಾರು ಅದಾಗಿದ್ದು, ಅದರಲ್ಲಿ ಏಳು ಏರ್ ಬ್ಯಾಗ್ ಇರುತ್ತದೆ. ಆದರೆ, ಡ್ರೈವರ್ ಪಕ್ಕದಲ್ಲಿ ಕುಳಿತುಕೊಳ್ಳುವ ಸೀಟಿನ ಮುಂಭಾಗದಲ್ಲಿ ಏರ್ ಬ್ಯಾಗ್ ಇರಲಿಲ್ಲ. ಬದಿಯಿಂದ ಮಾತ್ರ ಏರ್ ಬ್ಯಾಗ್ ಇತ್ತು ಎನ್ನಲಾಗುತ್ತಿದೆ. ಅತಿ ವೇಗದಿಂದ ಕಾರು ಡಿವೈಡರ್ ಡಿಕ್ಕಿಯಾಗಿದ್ದರಿಂದ ಎದುರಿನ ಸೀಟಿನಲ್ಲಿ ಕುಳಿತಿದ್ದ ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಹಾಕ್ಕೊಂಡಿಲ್ಲದ ಕಾರಣ ಮುಂಭಾಗಕ್ಕೆ ಎಸೆಯಲ್ಪಟ್ಟು ಎದೆ ಮತ್ತು ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿರಬೇಕೆಂದು ಶಂಕೆ ಪಡಲಾಗಿದೆ.
ಕೆಲವರ ಪ್ರಕಾರ, ಈಗಿನ ಹೈ ಎಂಡ್ ಕಾರುಗಳಲ್ಲಿ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕ್ಕೊಂಡಿರದೇ ಇದ್ದರೆ ಏರ್ ಬ್ಯಾಗ್ ಓಪನ್ ಆಗಲ್ಲ. ಸೈರಸ್ ಮಿಸ್ತ್ರಿ ಇದ್ದ ಮರ್ಸಿಡಿಸ್ ಬೆಂಜ್ ಕಾರು ಲಕ್ಸುರಿಯೇ ಆಗಿದ್ದರೂ, ಸೀಟ್ ಬೆಲ್ಟ್ ಹಾಕಿಲ್ಲದ ಕಾರಣ ಸಕಾಲದಲ್ಲಿ ಏರ್ ಬ್ಯಾಗ್ ಓಪನ್ ಆಗಿರಲಿಲ್ಲ ಎನ್ನಲಾಗುತ್ತಿದೆ. ಮೃತಪಟ್ಟ ಮಿಸ್ತ್ರಿ ಮತ್ತು ಅವರ ಗೆಳೆಯ ಪಾಂಡೋಲೆ ಇಬ್ಬರು ಕೂಡ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನೋದು ಸ್ಥಳೀಯರ ಮಾಹಿತಿಯಾಗಿತ್ತು.
Luxury carmaker Mercede on Thursday submitted their probe report to the Palghar Police on the road accident that killed the former Tata Sons chairman Cyrus Mistry. The company said the vehicle was going at 100 kilometres per hour (kmph) five seconds before the accident.The Regional Transport Office (RTO) also submitted their primary report to the police.Cyrus Mistry was inside a Mercedes-Benz car with three other people when the driver, Anahita Pandole, lost control of the vehicle and rammed it into a road divider.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm