ಬ್ರೇಕಿಂಗ್ ನ್ಯೂಸ್
04-09-22 06:28 pm HK News Desk ದೇಶ - ವಿದೇಶ
ಮುಂಬೈ, ಸೆ.4: ಟಾಟಾ ಸಮೂಹ ಸಂಸ್ಥೆಯಲ್ಲಿ ಚೇರ್ಮನ್ ಆಗಿ ಆಡಳಿತ ಕಮಿಟಿ ಸದಸ್ಯರಿಂದಲೇ ಉಚ್ಛಾಟನೆಗೊಂಡಿದ್ದ ಹೆಸರಾಂತ ಉದ್ಯಮಿ ಸೈರಸ್ ಮಿಸ್ತ್ರಿ (54) ಮುಂಬೈ ಬಳಿಯ ಪಾಲ್ಘಾರ್ ಜಿಲ್ಲೆಯಲ್ಲಿ ರಸ್ತೆ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಸೈರಸ್ ಮಿಸ್ತ್ರಿಯವರು ಗುಜರಾತಿನ ಅಹ್ಮದಾಬಾದ್ ನಿಂದ ಮುಂಬೈಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಸೈರಸ್ ಅವರಲ್ಲದೆ ಇತರ ನಾಲ್ವರಿದ್ದರು. ಪಾಲ್ಘಾರ್ ಜಿಲ್ಲೆಯಲ್ಲಿ ಬರುತ್ತಿದ್ದಾಗ ಕಾರು ಡಿವೈಡರ್ ಡಿಕ್ಕಿಯಾಗಿ ಪಲ್ಟಿಯಾಗಿದ್ದು ಸೈರಸ್ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಸೈರಸ್ ಮಿಸ್ತ್ರಿಯವರು ಪ್ರತಿಷ್ಠಿತ ಶಪೂರ್ ಜೀ ಪಲ್ಲೊಂಜಿ ಮಿಸ್ತ್ರಿ ಕುಟುಂಬದವರು. ಸ್ವಾತಂತ್ರ್ಯಕ್ಕೂ ಮೊದಲೇ ಇವರ ಕುಟುಂಬ ನಿರ್ಮಾಣ ಚಟುವಟಿಕೆಯಲ್ಲಿ ನಿರತವಾಗಿತ್ತು. 1930ರಲ್ಲೇ ಟಾಟಾ ಸನ್ಸ್ ಕಂಪನಿಯಲ್ಲಿ ಶಪೂರ್ ಜೀ ಮಿಸ್ತ್ರಿ ಪಾಲುದಾರಿಕೆ ಹೊಂದಿದ್ದರು. ಪಲ್ಲೊಂಜಿ ಮಿಸ್ತ್ರಿಯವರ ಪುತ್ರರಾಗಿದ್ದ ಸೈರಸ್ ಮಿಸ್ತ್ರಿ ಕುಟುಂಬದಿಂದ ಬಂದ ಕಂಪನಿಯನ್ನು ಮುನ್ನಡೆಸುತ್ತಿದ್ದರು. 2018ರ ವೇಳೆಗೆ, ಸೈರಸ್ ಮಿಸ್ತ್ರಿ ಕಂಪನಿಯ ಆಸ್ತಿ ಮೌಲ್ಯ ಹತ್ತು ಬಿಲಿಯನ್ ಡಾಲರ್ ಆಗಿತ್ತು.
ಮಿಸ್ತ್ರಿ ಮತ್ತು ಟಾಟಾ ಕುಟುಂಬಸ್ಥರ ಸುದೀರ್ಘ ಮೈತ್ರಿಯ ಕಾರಣದಿಂದ 2012ರಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸಮೂಹ ಸಂಸ್ಥೆಗಳ ಚೇರ್ಮನ್ ಮಾಡಲಾಗಿತ್ತು. ಟಾಟಾ ಕಂಪನಿಯ ಆರನೇ ಅಧ್ಯಕ್ಷರಾಗಿ ನೇಮಕ ಆಗಿದ್ದರು. ಆದರೆ ಟಾಟಾ ಕುಟುಂಬಕ್ಕೂ ಸೈರಸ್ ಮಿಸ್ತ್ರಿಗೂ ಸರಿ ಹೋಗಿರಲಿಲ್ಲ. ಹೀಗಾಗಿ ಮಿಸ್ತ್ರಿ ಅವರನ್ನು ಸ್ವಯಂ ಆಗಿ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಲು ಸೂಚಿಸಲಾಗಿತ್ತು. ಆದರೆ ಮಿಸ್ತ್ರಿ ಟಾಟಾ ಕುಟುಂಬದ ಮಾತನ್ನು ಕೇಳಿರಲಿಲ್ಲ.
ಕೊನೆಗೆ 2016ರಲ್ಲಿ ಟಾಟಾ ಸಮೂಹ ಸಂಸ್ಥೆಯ ಆಡಳಿತ ಕಮಿಟಿಯ ಸದಸ್ಯರು ವಿರುದ್ಧವಾಗಿ ಮತ ಹಾಕಿ ಮಿಸ್ತ್ರಿ ಅವರನ್ನು ಪದಚ್ಯುತಿ ಮಾಡಿದ್ದರು. ತನ್ನನ್ನು ಪದಚ್ಯುತಿ ಮಾಡಿದ್ದನ್ನು ಸೈರಸ್ ಮಿಸ್ತ್ರಿಯವರು ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಿದ್ದರು. 2021ರಲ್ಲಿ ಲಾ ಟ್ರಿಬ್ಯುನಲ್ ನಡೆಗೆ ಸುಪ್ರೀಂ ಕೋರ್ಟ್ ತಡೆ ಹೇರಿದ್ದು ಮಿಸ್ತ್ರಿ ಅವರಿಗೆ ಹಿನ್ನಡೆ ಮಾಡಿತ್ತು. ಟಾಟಾ ಮತ್ತು ಮಿಸ್ತ್ರಿ ಕುಟುಂಬದ ಜಟಾಪಟಿಯ ನಡುವಲ್ಲೇ ಸೈರಸ್ ಮಿಸ್ತ್ರಿಯವರು ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ.
Cyrus Mistry, former executive chairman of Tata Sons, died in an accident on Sunday. Cyrus Mistry, 54, was travelling in a car with three others when the vehicle met with an accident near Maharashtra's Palghar district, neighbouring Mumbai.Mahindra Group chairman Anand Mahindra and RPG Enterprises chairman Harsh Goenka mourned Cyrus Mistry's death, describing him as someone destined for greatness and a man of substance.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm