ಬ್ರೇಕಿಂಗ್ ನ್ಯೂಸ್
02-09-22 07:11 pm HK News Desk ದೇಶ - ವಿದೇಶ
ಕೊಚ್ಚಿ, ಸೆ.2 : ಭಾರತೀಯ ನೌಕಾಪಡೆಗೆ ಮೊಟ್ಟಮೊದಲ ಸ್ವದೇಶಿ ನಿರ್ಮಿತ ಯುದ್ಧವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಾಂತ್' ಸೇರ್ಪಡೆಯಾಗಿದ್ದು ಆಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ 'ಐಎನ್ಎಸ್ ವಿಕ್ರಾಂತ್' ಅನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.
262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲದ ವಿಕ್ರಾಂತ್ ಹಡಗಿನಲ್ಲಿ ಸುಮಾರು 2,200 ವಿಭಾಗಗಳಿವೆ, ಸುಮಾರು 1,600 ಸಿಬ್ಬಂದಿ ನಿಲ್ಲುವಂತೆ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್ಗಳಿವೆ. ಅಲ್ಲದೆ, ಹೆಲಿಕಾಪ್ಟರ್, ವಿಮಾನ ಇಳಿಯುವುದಕ್ಕೂ ವ್ಯವಸ್ಥೆ ಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, 'ಇದು ಭಾರತದ ಪಾಲಿಗೆ ಮಹತ್ವದ ಮೈಲಿಗಲ್ಲು. ಯುದ್ಧನೌಕೆಯನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಉಕ್ಕು ಸೇರಿದಂತೆ ಕಚ್ಚಾವಸ್ತು ಹಾಗೂ ಬಿಡಿಭಾಗಗಳನ್ನು ಬಳಸುವಾಗಲೂ ದೇಶೀಯ ಕಂಪನಿಗಳಿಗೇ ಆದ್ಯತೆ ನೀಡಲಾಗಿದೆ. ಜಗತ್ತಿನ ಕೆಲವೇ ದೇಶಗಳಿಗೆ ಸ್ವತಂತ್ರ ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ವಿಕ್ರಾಂತ್ ಮೂಲಕ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಿದೆ. ಕೇರಳದಲ್ಲಿ ಪವಿತ್ರ ಓಣಂ ಹಬ್ಬದ ದಿನ ಈ ಸಾಧನೆ ಸಾಧ್ಯವಾಗಿದೆ. ಸ್ವಾವಲಂಬನೆಯ ಆಶಯವನ್ನು ವಿಕ್ರಾಂತ್ ಯುದ್ಧನೌಕೆ ಈಡೇರಿಸಿದೆ ಎಂದು ಹೇಳಿದರು.
ಐಎನ್ಎಸ್ ವಿಕ್ರಾಂತ್ ಕೇವಲ ಹಡಗಷ್ಟೇ ಅಲ್ಲ, ಅದೊಂದು ತೇಲುವ ವಾಯುನೆಲೆಯೂ ಹೌದು. ಈ ಯುದ್ಧ ನೌಕೆ 13 ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಇದರಲ್ಲಿ ಉತ್ಪತ್ತಿಯಾಗುವ ವಿದ್ಯುತ್ನಿಂದ 5,000 ಮನೆಗಳಿಗೆ ಬೆಳಕು ಕೊಡಬಹುದು. ಇದು ನಮ್ಮ ದೇಶದ ಸ್ವಾವಲಂಬನೆಯ ಪ್ರತೀಕ. ಭಾರತೀಯ ನೌಕಾಪಡೆಯು ವಿವಿಧ ಹಂತಗಳಲ್ಲಿ ಮಹಿಳೆಯರ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ ಎಂದು ಮೋದಿ ನುಡಿದರು.
ವಿಕ್ರಾಂತ್ ಎಂದರೆ ವಿಜಯಶಾಲಿ ಮತ್ತು ಧೀರ ಎಂದರ್ಥ. ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ 2005 ಏಪ್ರಿಲ್ ತಿಂಗಳಲ್ಲಿ ನೌಕೆಗಾಗಿ ಲೋಹ ಕತ್ತರಿಸುವ ಕಾರ್ಯ ನಡೆದಿತ್ತು. ಇದರ ನಿರ್ಮಾಣಕ್ಕೆ ಅಗತ್ಯವಾದ ಯುದ್ಧನೌಕೆ ದರ್ಜೆಯ ಉಕ್ಕನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್ಡಿಎಲ್) ಮತ್ತು ಭಾರತೀಯ ನೌಕಾಪಡೆಯ ಸಹಯೋಗದೊಂದಿಗೆ ಪಡೆಯಲಾಗಿತ್ತು. 2009ರ ಫೆಬ್ರವರಿಯಲ್ಲಿ ಹಡಗಿನ ಕೀಲ್ ಅನ್ನು ಹಾಕಲಾಯಿತು. 2013ರ ಆಗಸ್ಟ್ನಲ್ಲಿ ಹಡಗಿನ ಯಶಸ್ವಿ ಚಾಲನೆಯೊಂದಿಗೆ ಹಡಗು ನಿರ್ಮಾಣದ ಮೊದಲ ಹಂತ ಪೂರ್ಣಗೊಂಡಿತ್ತು.
Prime Minister Narendra Modi commissioned India’s first indigenously designed and built aircraft carrier INS Vikrant in Kochi today, that put India into a select league of countries with domestic capability to build such large war ships. The Prime Minister commissioned the carrier, built at a cost of Rs 20,000 crore, at a function organised at the Cochin Shipyard Limited.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm