ಬ್ರೇಕಿಂಗ್ ನ್ಯೂಸ್
31-08-22 11:05 pm HK News Desk ದೇಶ - ವಿದೇಶ
ಅಸ್ಸಾಂ, ಆಗಸ್ಟ್ 31: ಅಸ್ಸಾಂನಲ್ಲಿ ಭಯೋತ್ಪಾದಕರ ನಂಟು ಹೊಂದಿದ್ದ ಆರೋಪದಲ್ಲಿ ಮತ್ತೊಂದು ಮದರಸಾವನ್ನು ಕೆಡವಿ ಹಾಕಲಾಗಿದೆ. ಬೊಂಗಾಯಿಗಾಂವ್ ಎಂಬ ಜಿಲ್ಲೆಯ ಜೋಗಿಘೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಕಬೈತರಿ ಎನ್ನುವ ಗ್ರಾಮದಲ್ಲಿ ಮದ್ರಸಾವನ್ನು ಜೆಸಿಬಿ ತಂದು ಪೊಲೀಸರೇ ಧ್ವಂಸ ಮಾಡಿದ್ದಾರೆ.
ಅಲ್-ಖೈದಾ ಮತ್ತು ಬಾಂಗ್ಲಾದೇಶ ಮೂಲದ ಅನ್ಸರುಲ್ಲಾ ಬಾಂಗ್ಲಾ ಎಂಬ ಭಯೋತ್ಪಾದಕ ಸಂಘಟನೆ ಜೊತೆಗೆ ಸಂಬಂಧ ಹೊಂದಿರುವುದು ಸಾಬೀತಾಗಿದ್ದರಿಂದ ಮರ್ಕಜ್ ಉಲ್ ಮಾ-ಆರಿಫ್ ಕುರಿಯಾನಾ ಎಂಬ ಹೆಸರಿನ ಮದ್ರಸಾವನ್ನು ಕೆಡವಲಾಗಿದೆ. ಎರಡು ತಿಂಗಳ ಸತತ ಕಾರ್ಯಾಚರಣೆಯಿಂದ ಭಯೋತ್ಪಾದಕ ನಿಗ್ರಹ ದಳವು ಅಸ್ಸಾಂನಲ್ಲಿ 37 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಹಲವಾರು ಕಡೆ ಮಸೀದಿ ಇಮಾಮ್ ಗಳು, ಮದ್ರಸಾ ಶಿಕ್ಷಕರನ್ನು ಬಂಧಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಭಯೋತ್ಪಾದಕರ ನಂಟಿನಲ್ಲಿ ಕೆಡವಲಾದ ಮೂರನೇ ಮದ್ರಸಾ ಇದಾಗಿದೆ.
ಆಗಸ್ಟ್ 21ರಂದು ಗೋಲ್ಪಾರಾ ಜಿಲ್ಲೆಯಲ್ಲಿ ಇಬ್ಬರು ಇಮಾಮ್ಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಬೈತರಿ ಮದ್ರಸಾದಲ್ಲಿ ಶಿಕ್ಷಕನಾಗಿದ್ದ ಜೆಹಾರುಲ್ ಇಸ್ಲಾಂ ಎಂಬಾತ ಭಯೋತ್ಪಾದಕ ಸಂಘಟನೆಗಳ ನಂಟು ಹೊಂದಿರುವುದು ತಿಳಿದುಬಂದಿತ್ತು. ಅದರಂತೆ ದಾಳಿ ನಡೆಸಿದ್ದ ಎಟಿಎಸ್ ಪಡೆ ಆಗಸ್ಟ್ 26 ರಂದು ಆತನನ್ನು ಬಂಧಿಸಿತ್ತು. ಅಲ್ಲದೆ, ಭಯೋತ್ಪಾದಕರ ಜೊತೆಗೆ ನಂಟು ಹೊಂದಿದ್ದ ಬಗ್ಗೆ ಸಾಕಷ್ಟು ದಾಖಲೆಗಳನ್ನೂ ಪತ್ತೆ ಮಾಡಿತ್ತು. ಅದರಂತೆ, ಆತ ನಡೆಸುತ್ತಿದ್ದ ಮದ್ರಸಾವನ್ನು ಧ್ವಂಸ ಮಾಡಲು ಬೊಂಗಾಯಿಗಾಂವ್ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು.
ಎರಡು ದಿನಗಳ ಹಿಂದೆ ಎರಡಂತಸ್ತಿನ ಕಟ್ಟಡ ಧ್ವಂಸ ಕುರಿತು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಮದ್ರಸಾದಲ್ಲಿದ್ದ ಸುಮಾರು 200 ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಲಾಗಿದೆ. ಅಲ್ಲದೆ, ಹತ್ತಿರದ ಇತರ ಸಂಸ್ಥೆಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ ಎಂದು ಬೊಂಗಾಯಿಗಾಂವ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸ್ವಪ್ನನೀಲ್ ದೇಕಾ ಮಾಹಿತಿ ನೀಡಿದ್ದಾರೆ.
The crackdown against illegal madrasas in Assam by the state government continues to take place as another private Islamic seminary was demolished on Wednesday over alleged links to terror outfits Al-Qaeda in Indian Subcontinent (AQIS) and Bangladesh-based Ansarullah Bangla Team (ABT).
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm