ಬ್ರೇಕಿಂಗ್ ನ್ಯೂಸ್
27-08-22 12:28 pm HK News Desk ದೇಶ - ವಿದೇಶ
ತಿರುವನಂತಪುರ, ಆಗಸ್ಟ್ 27 : ರಾಜ್ಯದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಕೇಂದ್ರಗಳಿದ್ದು ಇಲ್ಲಿನ ಜನಸಂಖ್ಯೆಗೂ ಧಾರ್ಮಿಕ ರಚನೆಗಳಿಗೂ ಅನುಪಾತದಲ್ಲಿ ತುಂಬ ವ್ಯತ್ಯಾಸ ಇದೆ. ಜನರು ಮನೆ ಹತ್ತಿರವೇ ಮಸೀದಿ ಇರಬೇಕೆಂದು ಬಯಸಿದರೆ ಅದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಕೇರಳವು ಧಾರ್ಮಿಕ ರಚನೆಗಳು, ಪ್ರಾರ್ಥನಾ ಕೇಂದ್ರಗಳಿಂದಲೇ ತುಂಬಿ ತುಳುಕುತ್ತಿದೆ ಎಂದು ಈ ಕುರಿತ ಪ್ರಕರಣ ಒಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. ಕೇರಳವನ್ನು ವಿಶಿಷ್ಟ ಭೌಗೋಳಿಕ ಪರಿಸರದ ಕಾರಣಕ್ಕೆ 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ. ಆದರೆ ನಾವು ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ತುಂಬಿ ಹೋಗಿದ್ದೇವೆ. ತೀರಾ ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸುವ ಸ್ಥಿತಿಯಲ್ಲಿ ನಾವು ಇಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಮುಸ್ಲಿಂ ಸಮುದಾಯಕ್ಕೆ ಮಸೀದಿಗಳು ಬಹಳ ಮುಖ್ಯ ಎನ್ನುವುದನ್ನು ಒಪ್ಪುತ್ತೇವೆ. ಆದರೆ, ಕುರಾನ್ನಲ್ಲಿ ಪ್ರತಿ ರಸ್ತೆ, ಪ್ರತಿ ಗಲ್ಲಿಯಲ್ಲೂ ಮಸೀದಿ ಇರಬೇಕು ಎಂದು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
"ಹದೀಸ್" ಅಥವಾ ಪವಿತ್ರ ಕುರಾನ್ನಲ್ಲಿ ಮಸೀದಿ ಪ್ರತಿ ಮುಸ್ಲಿಂ ಸಮುದಾಯದ ಸದಸ್ಯರ ಮನೆಯ ಪಕ್ಕದಲ್ಲಿರಬೇಕು ಎಂದು ಹೇಳಲಾಗಿಲ್ಲ. ಇರುವ ದೂರವು ಮಾನದಂಡವಲ್ಲ. ಆದರೆ ಮಸೀದಿಯನ್ನು ತಲುಪಬೇಕು ಎನ್ನುವುದಷ್ಟೆ ಮುಖ್ಯ. ಅದನ್ನು ನ್ಯಾಯಾಲಯ ಗಮನಿಸಿದೆ. 2011ರ ಜನಗಣತಿ ಆಧಾರದಲ್ಲಿ ಧಾರ್ಮಿಕ ರಚನೆಗಳ ಮೇಲಿನ ಅಧ್ಯಯನವನ್ನು ಉಲ್ಲೇಖಿಸಿದ ನ್ಯಾಯಾಲಯವು 'ಆತಂಕಕಾರಿ ಬೆಳವಣಿಗೆ' ಎಂದು ಕರೆದಿದೆ. ಕೇರಳದ ಗ್ರಾಮಗಳಲ್ಲಿ ಅಂದಾಜು 10ರಷ್ಟು ಧಾರ್ಮಿಕ ರಚನೆಗಳಿವೆ. ಇದು ಆಸ್ಪತ್ರೆಗಳ ಸಂಖ್ಯೆಗಿಂತ 3.5 ಪಟ್ಟು ಹೆಚ್ಚು ಎಂದು ಕೋರ್ಟ್ ಹೇಳಿದೆ.
ಹಿಂದು, ಕ್ರಿಶ್ಚಿಯನ್, ಮುಸ್ಲಿಂ, ಯಹೂದಿಗಳು, ಪಾರ್ಸಿಗಳು ಇತ್ಯಾದಿ ಪ್ರತಿಯೊಬ್ಬ ಧರ್ಮದವರು ತಮ್ಮ ಮನೆಯ ಬಳಿಯೇ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ಕೋಮು ಸಾಮರಸ್ಯ ಕಾಪಾಡುವಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸದ್ರಿ ಪ್ರಕರಣದಲ್ಲಿ ಗುಪ್ತಚರ ವರದಿ ಮತ್ತು ಪೊಲೀಸ್ ವರದಿಯ ಪ್ರಕಾರ, ಪ್ರಸ್ತುತ ವಾಣಿಜ್ಯ ಕಟ್ಟಡವನ್ನು ಧಾರ್ಮಿಕ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲು ಅನುಮತಿ ನೀಡಿದರೆ, ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಅವಕಾಶವಿದೆ ಎಂದು ಹೇಳುತ್ತದೆ. ಇದು ಸೂಕ್ಷ್ಮ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
The Kerala High Court recently, while disallowing a petition to convert a commercial building to a Muslim place of worship, issued a direction to the State Government to close down religious places and prayer halls that were functioning illegally and without permission.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm