ಬ್ರೇಕಿಂಗ್ ನ್ಯೂಸ್
25-08-22 07:35 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 25 : ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟ ಪಾಕಿಸ್ತಾನಿ ಉಗ್ರನಿಗೆ ಅಲ್ಲಿನ ಗುಪ್ತಚರ ದಳವು ಭಾರತದ ಸೇನಾ ನೆಲೆ ಮೇಲೆ ದಾಳಿ ನಡೆಸಲು ರೂ. 30 ಸಾವಿರ ಕೊಟ್ಟಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತ ಉಗ್ರ, 32 ವರ್ಷದ ತಬರಕ್ ಹುಸೈನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಪ್ರದೇಶದ ಸಬ್ಸ್ ಕೋಟ್ ಗ್ರಾಮದ ನಿವಾಸಿ. ಭಾನುವಾರ ನೌಶೇರಾ ಸೆಕ್ಟರ್ನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಹುಸೈನ್ನನ್ನು ಬಿಟ್ಟು ಉಳಿದ ಉಗ್ರರು ಪಲಾಯನಗೈದಿದ್ದರು. ಈ ವೇಳೆ ಹುಸೈನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಕಳೆದ 6 ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ಹುಸೈನ್ ಭಾರತೀಯ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಮೊದಲು ಅಕ್ರಮವಾಗಿ ಗಡಿ ನುಸುಳಲು ಪ್ರಯತ್ನಿಸಿ ಬಂಧನಕ್ಕೆ ಒಳಪಟ್ಟಿದ್ದ. ಆಗಸ್ಟ್ 21ರಂದು ಬೆಳಗ್ಗೆ ಜಾನ್ಗರ್ ಪ್ರದೇಶದಲ್ಲಿ 2-3 ಉಗ್ರರು ಗಡಿ ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನಿಸುತ್ತಿರುವ ಸೂಚನೆ ಸಿಕ್ಕಿತ್ತು. ತಕ್ಷಣ ಕಾರ್ಯೋನ್ಮುಖರಾದ ಭದ್ರತಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಎಚ್ಚರಿಕೆಯ ನಡುವೆ ಬೇಲಿಯನ್ನು ತುಂಡರಿಸಿ ಒಳನುಗ್ಗಲು ಪ್ರಯತ್ನಿಸಿದ್ದ ಹುಸೈನ್ ಮೇಲೆ ದಾಳಿ ನಡೆಸಿದ ಸೇನೆ ಆತನನ್ನು ಸೆರೆ ಹಿಡಿದಿದೆ. ಗಾಯಗೊಂಡಿರುವ ಉಗ್ರನಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತೀಯ ಸೇನಾ ನೆಲೆ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿದ್ದಾಗಿ ಹಾಗೂ ತನ್ನ ಜೊತೆ ಬಂದಿದ್ದ ಇನ್ನಿಬ್ಬರು ಉಗ್ರರು ಪಲಾಯನಗೈದಿರುವುದಾಗಿ ಹುಸೈನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಜೊತೆಗೆ ಬಂದಿದ್ದವರು ತನ್ನನ್ನು ಸಿಕ್ಕಿಸಿ ಓಡಿ ಹೋದರೆಂದು ದೂರಿದ್ದಾನೆ. ಈ ದಾಳಿ ನಡೆಸಲು ತನಗೆ ಪಾಕಿಸ್ತಾನ ಗುಪ್ತಚರ ದಳದ ಕರ್ನಲ್ ಯೂನಸ್ ಚೌಧರಿ ಎಂಬಾತ ₹ 30 ಸಾವಿರ (ಪಾಕಿಸ್ತಾನಿ ರೂಪಾಯಿ) ಕೊಟ್ಟಿದ್ದಾಗಿ ಹೇಳಿದ್ದಾನೆ. ಪಾಕಿಸ್ತಾನ ಸೇನೆಯ ಮೇಜರ್ ರಜಾಕ್ ತರಬೇತಿ ನೀಡಿದ್ದಾಗಿ ಹಾಗೂ ಅಲ್ಲಿನ ಭಯೋತ್ಪಾದಕರ ಜೊತೆ ದೀರ್ಘಕಾಲೀನ ಒಡನಾಟ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆತ್ಮಾಹುತಿ ದಾಳಿ ಮೂಲಕ ಪ್ರಾಣವನ್ನು ಕೊಡಲು ಬಂದಿದ್ದೆ. ಆದರೆ ಸಹಚರರು ತನಗೆ ಮೋಸ ಮಾಡಿ ತಪ್ಪಿಸಿಕೊಂಡರು. ನಾನು 6 ತಿಂಗಳು ತರಬೇತಿ ಪಡೆದಿದ್ದೆ. ಲಷ್ಕರ್ ಎ ತಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳಿಗಾಗಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಹಲವಾರು ಭಯೋತ್ಪಾದಕ ಕ್ಯಾಂಪ್ಗಳಿಗೆ ಹೋಗಿದ್ದೆ' ಎಂದು ಬಂಧಿತ ಹುಸೈನ್ ಹೇಳಿರುವುದಾಗಿ ರಾಜೌರಿಯ ಸೇನಾ ಆಸ್ಪತ್ರೆಯ ಬ್ರಿಗೆಡಿಯರ್ ರಾಜೀವ್ ನಾಯರ್ ತಿಳಿಸಿದ್ದಾರೆ.
A Pakistani terrorist, who was captured in Rajouri district of Jammu and Kashmir, was paid Rs 30,000 by a colonel of Pakistan intelligence agency to attack the Indian Army post, officials said on Wednesday. Thirty-two-year-old Tabarak Hussain, a resident of Sabzkot village of Kotli in Pakistan-occupied Kashmir (PoK), was arrested in Naushera sector on Sunday after his accomplices abandoned him and fled back after being intercepted by the alert Indian troops.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm