ಬ್ರೇಕಿಂಗ್ ನ್ಯೂಸ್
19-08-22 09:41 pm HK News Desk ದೇಶ - ವಿದೇಶ
ಶ್ರೀನಗರ, ಆಗಸ್ಟ್ 19: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ತಯಾರಿ ನಡೆಯುತ್ತಿದ್ದು, ಮತದಾರ ಪಟ್ಟಿಗೆ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದೇ ವೇಳೆ, ಚುನಾವಣಾ ಆಯೋಗದ ಅಧಿಕಾರಿಗಳು ಹೊಸ ಘೋಷಣೆ ಹೊರಡಿಸಿದ್ದು, ಸ್ಥಳೀಯರಲ್ಲದವರಿಗೂ ಮತದಾನದ ಹಕ್ಕನ್ನು ನೀಡುವುದಾಗಿ ತಿಳಿಸಿದ್ದಾರೆ. ವಲಸಿಗ ಕಾರ್ಮಿಕರು, ಬೇರೆ ಬೇರೆ ಕರ್ತವ್ಯಕ್ಕಾಗಿ ಬಂದು ಉಳಿದುಕೊಂಡವರು, ಸೇನಾ ಪಡೆಯ ಯೋಧರು, ಇತರೇ ಉದ್ಯೋಗಸ್ಥರು ಸೇರಿದಂತೆ ಸ್ಥಳೀಯ ನಿವಾಸಿಗಳಲ್ಲದವರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ.
ಆದರೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹರ್ದೇಶ್ ಕುಮಾರ್ ಮಾಡಿರುವ ಈ ಘೋಷಣೆಗೆ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಅವರ ಪ್ರಕಾರ, ಯಾವುದೇ ಭಾರತದ ನಾಗರಿಕನಿಗೆ ಜಮ್ಮು ಕಾಶ್ಮೀರದಲ್ಲಿ ಮತದ ಹಕ್ಕು ನೀಡಲಾಗುವುದು. ಯಾವುದೇ ಕಡೆಯ ನಿವಾಸಿಯಾದ್ರೂ ಆತ ಉದ್ಯೋಗದ ನಿಮಿತ್ತ ಜಮ್ಮು ಕಾಶ್ಮೀರದಲ್ಲಿ ಉಳಿದುಕೊಂಡಿದ್ದರೆ, ಆತ ಮತ್ತು ಆತನ ಕುಟುಂಬಕ್ಕೆ ಮತದ ಹಕ್ಕನ್ನು ಚಲಾಯಿಸಬಹುದು. ಮತದಾರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸ್ಥಳೀಯಾಡಳಿತ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದು ಎಂದು ಹೇಳಿದ್ದಾರೆ.
ಆದರೆ ಸ್ಥಳೀಯ ನಿವಾಸಿಗಳಲ್ಲದವರಿಗೂ ಮತದ ಹಕ್ಕು ನೀಡುವುದಕ್ಕೆ ಕೆಲವು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಚುನಾವಣಾ ಫಲಿತಾಂಶ ಏರುಪೇರಾಗಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಮತದ ಹಕ್ಕು ಅನ್ನುವುದು ಎಲ್ಲಿಗೂ ಸೀಮಿತವಾಗಿಲ್ಲ. ಭಾರತದ ನಾಗರಿಕನಿಗೆ ಎಲ್ಲಿಯೂ ಮತ ಚಲಾಯಿಸಲು ಹಕ್ಕು ಇದೆ. ಮತದಾರ ಪಟ್ಟಿಗೆ ಸೇರ್ಪಡೆ ಆಗಬೇಕಾಗಿದ್ದಲ್ಲಿ ತನ್ನ ಮೂಲ ಮತದಾನ ಪಟ್ಟಿಯಿಂದ ತೆಗೆದು ಹಾಕಿರುವುದನ್ನು ತೋರಿಸಬೇಕಾಗುತ್ತದೆ. ಅದನ್ನು ಪರಿಶೀಲನೆ ಮಾಡಿಕೊಂಡೇ ಮತದಾರ ಪಟ್ಟಿಗೆ ಸೇರಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Jammu and Kashmir's Chief Electoral Officer (CEO) Hirdesh Kumar’s announcement about non-locals, including employees, students, labourers, or anyone from outside who is living ordinarily in Jammu and Kashmir, being able to register their names in the voting list and vote in the J&K elections has created a buzz across states.CEO Hirdesh Kumar had said any Indian citizen, including non-locals living or working in Jammu and Kashmir, can enlist their names on the voting list and cast a vote in the assembly and local body elections in the union territory.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm