ಬ್ರೇಕಿಂಗ್ ನ್ಯೂಸ್
14-08-22 01:01 pm HK News Desk ದೇಶ - ವಿದೇಶ
ಮುಂಬೈ, ಆಗಸ್ಟ್ 14 : ಭಾರತದ ಶೇರು ಮಾರುಕಟ್ಟೆಯಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಾಡಿದ್ದ ರಾಕೇಶ್ ಜುಂಜುನ್ ವಾಲಾ ಇನ್ನಿಲ್ಲ. ಮುಂಬೈನಲ್ಲಿ ಹೃದಯಾಘಾತಕ್ಕೊಳಗಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ವಾರದ ಹಿಂದಷ್ಟೇ ಭಾರತದಲ್ಲಿ ವೈಮಾನಿಕ ಉದ್ಯಮಕ್ಕೆ ಕಾಲಿಟ್ಟಿದ್ದ ಜುಂಜುನ್ ವಾಲಾ ಅವರು ಅಕಾಸಾ ಏರ್ ಲೈನ್ಸ್ ಎಂಬ ಹೊಸ ಕಂಪನಿಯನ್ನು ಹುಟ್ಟುಹಾಕಿದ್ದರು. ಆರಂಭಿಕ ನೆಲೆಯಲ್ಲಿ ವಾಣಿಜ್ಯ ವಿಮಾನಗಳ ಹಾರಾಟವೂ ಆರಂಭಗೊಂಡಿತ್ತು. ಬೆಳಗ್ಗೆ ಹೃದಯಾಘಾತ ಆದಕೂಡಲೇ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಗೆ ಒಯ್ಯುವಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಜುಂಜುನ್ ವಾಲಾ ಕಿಡ್ನಿ ಸೇರಿದಂತೆ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. ತಿಂಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು.

ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಹೂಡಿಕೆ ಮಾಡುವ ಮೂಲಕವೇ ರಾಕೇಶ್ ಜುಜುನ್ ವಾಲಾ ಅವರು ಮೇಲೇರಿದ್ದರು. ಮುಂಬೈ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ದಿಗ್ಗಜರಾಗಿ ಭಾರೀ ಹೆಸರು ಮಾಡಿದ್ದರು. ಭಾರತೀಯ ಶೇರು ಮಾರುಕಟ್ಟೆಯಲ್ಲಿ ಜುಂಜುನ್ ವಾಲಾ ಅವರದ್ದು ಅತ್ಯಂತ ದೊಡ್ಡ ಹೆಸರು. ಫೋರ್ಬ್ಸ್ ನಿಯತಕಾಲಿಕದ ಪ್ರಕಾರ, ಜುಂಜುನ್ ವಾಲಾ ಅವರ ಒಟ್ಟು ಆಸ್ತಿ 5.8 ಬಿಲಿಯನ್ ಡಾಲರ್. ಜಗತ್ತಿನಲ್ಲಿ 36ನೇ ಶ್ರೀಮಂತ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಜುಂಜುನ್ ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎನ್ನುವ ಅನ್ವರ್ಥ ನಾಮದಲ್ಲೂ ಕರೆಯುತ್ತಾರೆ.
The veteran trader-cum-investor, known as the Big Bull of Dalal Street, was reported to have a net worth of around $5.8 billion, according to Forbes.Ace stock market investor Rakesh Jhunjhunwala died this morning at a Mumbai hospital. He was also the co-founder of Akasa Air, India's newest airline which began commercial operations last week.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm