ಬ್ರೇಕಿಂಗ್ ನ್ಯೂಸ್
12-08-22 08:51 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 12: ಸ್ವಾತಂತ್ರ್ಯೋತ್ಸವಕ್ಕೆ ಎರಡೇ ದಿನ ಇರುವಾಗ ಉತ್ತರ ಪ್ರದೇಶ ಪೊಲೀಸರು ಜೈಶ್- ಇ-ಮಹಮ್ಮದ್ ಉಗ್ರವಾದಿ ಸಂಘಟನೆಗೆ ಸೇರಿದ ಉಗ್ರನನ್ನು ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರ್ ಎಂಬಲ್ಲಿ ಬಂಧಿಸಿದ್ದಾರೆ. ಇತ್ತೀಚೆಗೆ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಕೊಲ್ಲುವ ಗುರಿ ಇಟ್ಟುಕೊಂಡಿದ್ದ ಅನ್ನುವ ಸ್ಫೋಟಕ ಮಾಹಿತಿಯನ್ನು ಪೊಲೀಸರು ಹೊರಗೆಡವಿದ್ದಾರೆ.
ಬಂಧಿತನನ್ನು ಮೊಹಮ್ಮದ್ ನದೀಂ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಆಂಟಿ ಟೆರರಿಸ್ಟ್ ಸ್ಕ್ವಾಡ್ ಸಿಬಂದಿ ಸೆರೆ ಹಿಡಿದಿದ್ದಾರೆ. ಆತನಿಗೆ ನೂಪುರ್ ಶರ್ಮಾನನ್ನು ಹುಡುಕಿ ಕೊಲ್ಲುವುದನ್ನೇ ಪ್ರಮುಖ ಟಾರ್ಗೆಟ್ ಆಗಿ ನೀಡಲಾಗಿತ್ತು. ಜೈಶೆ ಮಹಮ್ಮದ್ ಮತ್ತು ತೆಹ್ರೀಕ್ ಇ-ತಾಲಿಬಾನ್ ಉಗ್ರವಾದಿ ಸಂಘಟನೆಗಳ ಜೊತೆ ಲಿಂಕ್ ಹೊಂದಿದ್ದ. 2018ರಿಂದ ನಿರಂತರವಾಗಿ ಪಾಕಿಸ್ಥಾನದ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಅನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮೊಹಮ್ಮದ್ ನದೀಂ ವಿವಿಧ ಸಾಮಾಜಿಕ ಜಾಲತಾಣಗಳನ್ನು ನಕಲಿ ಐಡಿ ಬಳಸಿ ಕಾರ್ಯಾಚರಿಸುತ್ತಿದ್ದು, ಅದರಲ್ಲಿಯೇ ಪಾಕಿಸ್ಥಾನದ ಉಗ್ರರ ಜೊತೆಗೆ ಸಂಪರ್ಕ ಮಾಡುತ್ತಿದ್ದ. ಪಾಕಿಸ್ಥಾನದ ಕಡೆಯ ಉಗ್ರರು ನೂಪುರ್ ಶರ್ಮಾಳನ್ನು ಕೊಲ್ಲುವ ಟಾರ್ಗೆಟ್ ಕೊಟ್ಟಿದ್ದರು. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೊಲೀಸರು ಅಲರ್ಟ್ ಇರುವಂತೆ ಸೂಚಿಸಲಾಗಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಾಕುತ್ತಾರೆಂದು ಪೊಲೀಸರು ಸೇರಿದಂತೆ ವಿವಿಧ ಭದ್ರತಾ ಏಜನ್ಸಿಗಳು ಅಲರ್ಟ್ ಆಗಿರುತ್ತವೆ. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಉಗ್ರವಾದಿ ಲಿಂಕ್ ಇರುವ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.
Ahead of Independence Day, police claimed to have busted a major terror plot on Friday as it arrested an alleged operative of Jaish-e-Mohammad and Tehreek-e-Taliban from western Uttar Pradesh’s Saharanpur. The accused was tasked with killing former BJP leader Nupur Sharma, police added.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
20-04-26 09:40 pm
HK News Staffer
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
20-04-26 09:35 pm
HK News Staffer
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm