ಬ್ರೇಕಿಂಗ್ ನ್ಯೂಸ್
22-07-22 09:09 pm HK News Desk ದೇಶ - ವಿದೇಶ
ತಿರುವನಂತಪುರಂ, ಜುಲೈ 22: ಕೇರಳದಲ್ಲಿ ಮೂರನೇ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಜುಲೈ 6ರಂದು ದುಬೈನಿಂದ ಮಲಪ್ಪುರಂ ಜಿಲ್ಲೆಗೆ ಬಂದಿದ್ದ ವ್ಯಕ್ತಿಗೆ ಮಂಕಿ ಪಾಕ್ಸ್ ಲಕ್ಷಣ ಕಾಣಿಸಿಕೊಂಡಿದ್ದು, ಶಂಕೆಯ ಮೇರೆಗೆ ತಪಾಸಣೆ ನಡೆಸಿದಾಗ ರೋಗ ಇರುವುದು ದೃಢಪಟ್ಟಿದೆ.
ಜುಲೈ 6ರಂದು ಮಲಪ್ಪುರಂಗೆ ಬಂದಿದ್ದ 35 ವರ್ಷದ ವ್ಯಕ್ತಿಯಲ್ಲಿ ಜುಲೈ 13ರಂದು ಜ್ವರದ ಲಕ್ಷಣಗಳಿದ್ದವು. ಜುಲೈ 15ರಂದು ಮಂಕಿ ಪಾಕ್ಸ್ ಲಕ್ಷಣ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಮಂಜೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ವ್ಯಕ್ತಿಯ ಪ್ರಾಥಮಿಕ ಸೋಂಕಿತರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಕಳೆದ ವಾರ ಕೇರಳದಲ್ಲಿ ಇಬ್ಬರಿಗೆ ಮಂಕಿ ಪಾಕ್ಸ್ ಕಂಡುಬಂದಿತ್ತು. ಅವರ ಸ್ಥಿತಿಯೂ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನುವ ಮಾಹಿತಿಗಳಿವೆ. ಜುಲೈ 14ರಂದು ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಮಂಕಿ ಪಾಕ್ಸ್ ಕಂಡುಬಂದಿತ್ತು. ಕೇರಳದಲ್ಲಿ ಮೂರನೇ ಪ್ರಕರಣ ಪತ್ತೆಯಾಗಿರುವುದರಿಂದ 14 ಜಿಲ್ಲೆಗಳಲ್ಲಿಯೂ ಆರೋಗ್ಯ ಇಲಾಖೆಯಿಂದ ಹೈ ಎಲರ್ಟ್ ಮಾಡಲಾಗಿದೆ. ಇದೇ ವೇಳೆ, ಕೇಂದ್ರದಿಂದ ಉನ್ನತ ಮಟ್ಟದ ಆರೋಗ್ಯ ತಂಡವನ್ನು ರಾಜ್ಯಕ್ಕೆ ಕಳುಹಿಸಲಾಗಿದ್ದು, ರೋಗ ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ.
ಸೋಂಕಿತ ಮನುಷ್ಯ ಅಥವಾ ಪ್ರಾಣಿಯಿಂದ ಹರಡುವ ವೈರಸ್ ಇದಾಗಿದ್ದು, ಸೋಂಕು ಆದ 10 ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕಿತನ ಬಾಯಿ ನೀರು, ಆತನ ಜೊತೆಗೆ ಇರುವುದು, ಜೊತೆಗೆ ಮಲಗುವುದು, ಮೈಕೈ ಮುಟ್ಟಿದಂತೆ ಇರುವುದರಿಂದ ವೈರಸ್ ಹರಡುತ್ತದೆ. ಜ್ವರ, ತಲೆನೋವು, ಬೆನ್ನುನೋವು, ಸ್ನಾಯು ನೋವು, ದಣಿವಾಗುವುದು, ಮೈಯಲ್ಲಿ ಬೊಕ್ಕೆಗಳಂತೆ ಕಾಣಿಸಿಕೊಳ್ಳುವುದು ಇತ್ಯಾದಿ ಈ ರೋಗದ ಲಕ್ಷಣಗಳು. ಮುಖದಲ್ಲಿ ಮೊಡವೆಗಳಂತೆ ಗುಳ್ಳೆ ಏಳುವುದು, ಬಾಯಿ ಒಳಗೆ ಕಜ್ಜಿಗಳಾಗುವುದು ಕೂಡ ಇರುತ್ತದೆ. ಆರಂಭದಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ, ರೋಗ ನಿವಾರಣೆಯಾಗುತ್ತದೆ.
A 35 year-old man, who came to Kerala from UAE earlier this month, has tested positive for monkeypox, making him the third case of the virus from the country as well as the state.Kerala Health Minister Veena George said the Malappuram native arrived in the state on July 6 and was undergoing treatment at the Manjeri Medical College there.
04-03-26 05:06 pm
HK News Staffer
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
ಬೆಂಗಳೂರಿನಲ್ಲಿ 10 ಕೋಟಿ ಮೌಲ್ಯದ ಬೃಹತ್ ಡ್ರಗ್ಸ್ ಪತ...
03-03-26 08:39 pm
04-03-26 12:58 pm
HK News Staffer
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
04-03-26 10:54 am
HK News Staffer
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm