ಬ್ರೇಕಿಂಗ್ ನ್ಯೂಸ್
28-06-22 10:19 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 28: ನೂಪುರ್ ಶರ್ಮಾ ಪರ ಬೆಂಬಲಿಸಿ ಪೋಸ್ಟ್ ಹಾಕಿದ್ದ ಯುವಕನನ್ನು ತಲೆ ಕಡಿದು ಅಮಾನುಷ ಕೃತ್ಯ ಮೆರೆದಿರುವ ವ್ಯಕ್ತಿ ಐಸಿಸ್ ಉಗ್ರವಾದಿ ಅನ್ನುವ ಶಂಕೆ ವ್ಯಕ್ತವಾಗಿದೆ. ಕೊಲೆ ಆರೋಪಿ ರಿಯಾಜ್ ಅತ್ತಾರಿ, ಇತ್ತೀಚೆಗೆ ಐಸಿಸ್ ಸಂಪರ್ಕದಲ್ಲಿ ರಾಜಸ್ಥಾನದಲ್ಲಿ ಬಂಧಿಸಲ್ಪಟ್ಟಿದ್ದ ಮುಜೀಬ್ ರೆಹ್ಮಾನ್ ಜೊತೆಗೆ ಸಂಪರ್ಕ ಹೊಂದಿದ್ದ ಅನ್ನೋದನ್ನು ಸಿಎನ್ಎನ್ –ನ್ಯೂಸ್ 18 ಖಚಿತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಎನ್ಐಎ ಅಧಿಕಾರಿಗಳು ಐಸಿಸ್ ಸಂಪರ್ಕ ಹೊಂದಿದ್ದ ಹಲವರನ್ನು ಬಂಧಿಸಿದ್ದರು. ಇವರ ಜೊತೆಗೆ ರಿಯಾಜ್ ಅತ್ತಾರಿ ಸಂಬಂಧ ಹೊಂದಿರುವ ಶಂಕೆಯಿದೆ ಎನ್ನಲಾಗುತ್ತಿದೆ. ರಿಯಾಜ್ ತನ್ನ ಫೇಸ್ಬುಕ್ ಪೇಜ್ ನಲ್ಲಿ ಐಸಿಸ್ ಉಗ್ರವಾದಿಯಂತೆ ಪೋಸು ಕೊಟ್ಟಿದ್ದ. ಇಸ್ಲಾಮಿಕ್ ಸ್ಟೇಟ್ಸ್ ಐಸಿಸ್ ಉಗ್ರರು ಕೈಬೆರಳಿನಲ್ಲಿ ವಿಚಿತ್ರ ರೀತಿಯ ಸನ್ನೆ ಮಾಡುವ ರೀತಿ ರಿಯಾಜ್ ಅತ್ತಾರಿ ವರ್ತಿಸುತ್ತಿದ್ದುದು ಆತನ ಫೋಟೋಗಳಲ್ಲಿ ಕಂಡುಬರುತ್ತವೆ.
ರಿಯಾಜ್ ಮೂಲತಃ ಬರೇಲ್ವಿ ಮೂಲದವನಾಗಿದ್ದು, ಪಾಕಿಸ್ಥಾನ ಮೂಲದ ಮೂಲಭೂತವಾದಿ ಸಂಘಟನೆ ದವಾತ್ ಇ- ಇಸ್ಲಾಮಿ (ಅತ್ತರ್) ಸದಸ್ಯನಾಗಿ ಗುರುತಿಸಲ್ಪಟ್ಟಿದ್ದ. ಅದಕ್ಕಾಗಿಯೇ ತನ್ನ ಹೆಸರಿನ ಕೊನೆಗೆ ಅತ್ತಾರಿ ಎಂದು ಹೆಚ್ಚುವರಿಯಾಗಿ ನಮೂದಿಸಿಕೊಂಡಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆತ ಈ ಹಾದಿಯಲ್ಲಿರುವ ಒಂಟಿ ತೋಳವೇ ಎಂದು ಪತ್ತೆ ಮಾಡುತ್ತೇವೆ ಎಂದಿದ್ದಾರೆ.
ವಿದೇಶದಿಂದ ಪ್ರೇರಣೆ ಪಡೆದು ಈ ರೀತಿಯ ಕೃತ್ಯ ನಡೆಸಿರುವ ಸಾಧ್ಯತೆಯಿದೆ. ಇದರ ಮೂಲಕ ದೇಶದಲ್ಲಿ ಗಲಭೆ ಎಬ್ಬಿಸುವ ಹುನ್ನಾರ ಹೊಂದಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಏಜನ್ಸಿಗಳು ಶಂಕೆ ವ್ಯಕ್ತಪಡಿಸಿವೆ. ಆರೋಪಿಗಳು ಕನ್ನಯ್ಯ ಲಾಲ್ ಇದ್ದ ಟೈಲರ್ ಅಂಗಡಿಗೆ ಅಂಗಿ ಹೊಲಿಸಲು ಅಳತೆ ನೀಡುವ ನೆಪದಲ್ಲಿ ಒಳಗೆ ಹೊಕ್ಕಿದ್ದರು. ಆನಂತರ, ಹರಿತ ಕತ್ತಿಯನ್ನು ತೆಗೆದು ರಿಯಾಜ್ ಅತ್ತಾರಿ ಕುತ್ತಿಗೆಯನ್ನು ಕತ್ತರಿಸಿದ್ದ. ಇದರ ವಿಡಿಯೋವನ್ನು ಗೋಸ್ ಮಹಮ್ಮದ್ ಚಿತ್ರೀಕರಿಸಿದ್ದು, ಇದನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಲ್ಲದೆ ಪ್ರಧಾನಿ ಮೋದಿಗೂ ಇದೇ ಗತಿಯಾಗಲಿದೆ ಎಂದು ಬೆದರಿಕೆ ಒಡ್ಡಿದ್ದರು.
Riyaz Attari, who allegedly beheaded a tailor in Rajasthan’s Udaipur city on Tuesday, is associated with ISIS,.Attari was in contact on three occasions in 2021 with one Mujeeb Abbasi, a resident of the state’s Tonk town, they added.Mujeeb, said the sources, was picked up from Rajasthan in a recently busted ISIS case.Some individuals from Ratlam were arrested in Rajasthan and Madhya Pradesh in connection with the case, they said.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm