ಬ್ರೇಕಿಂಗ್ ನ್ಯೂಸ್
22-06-22 10:24 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 22: ಪ್ರಧಾನಿ ನರೇಂದ್ರ ಮೋದಿ ಜೂನ್ 28ರಂದು ದುಬೈ ಹೋಗಲಿದ್ದಾರೆ. ಇತ್ತೀಚೆಗೆ ನಿಧನರಾದ ಯುಎಇ ದೇಶದ ರಾಜ ಶೇಖ್ ಖಲೀಫಾ ಬಿನ್ ಝಾಯೇದ್ ಗೌರವಾರ್ಥ ಸಂತಾಪ ಸೂಚಿಸುವುದಕ್ಕಾಗಿ ಪ್ರಧಾನಿ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಜರ್ಮನಿಯಲ್ಲಿ ಜಿ7 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಅದನ್ನು ಮುಗಿಸಿದ ಬಳಿಕ ಹಿಂತಿರುಗುವ ಹಾದಿಯಲ್ಲಿ ಯುಎಇ ದೇಶಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿಯನ್ನು ವಿದೇಶಾಂಗ ಇಲಾಖೆ ಪ್ರಕಟಿಸಿದೆ. ಹಿಂದಿನ ರಾಜನ ನಿಧನಕ್ಕೆ ಸಂತಾಪ ಹೇಳುವ ಜೊತೆಗೆ ಹೊಸತಾಗಿ ರಾಜನ ಸ್ಥಾನಕ್ಕೇರಿದ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಪ್ರಧಾನಿ ಮೋದಿ ಈ ವರ್ಷದ ಆರಂಭದಲ್ಲಿಯೇ ಯುಎಇ ತೆರಳುವುದಕ್ಕೆ ಸಿದ್ಧತೆ ಆಗಿತ್ತು. ಆನಂತರ, ಭೇಟಿ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ತಯಾರಿ ನಡೆದಿತ್ತು. ಆನಂತರ, ಫೆಬ್ರವರಿಯಲ್ಲಿ ವರ್ಚುವಲ್ ಮೀಟಿಂಗ್ ನಡೆದು ವಾಣಿಜ್ಯ ಒಪ್ಪಂದ ನಡೆದಿತ್ತು.
ಉಭಯ ರಾಷ್ಟ್ರಗಳ ನಡುವೆ ಐದು ವರ್ಷಗಳಲ್ಲಿ 115 ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ಒಪ್ಪಂದ ನಡೆದಿದೆ. ಈ ಒಪ್ಪಂದದ ಬಳಿಕ ಪ್ರಧಾನಿ ಮೋದಿ ಈಗ ಆ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದು ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ದೊಡ್ಡ ಕೊಡುಗೆ ನೀಡಲಿದೆ. ಇತ್ತೀಚೆಗೆ ಪ್ರವಾದಿ ಅವಹೇಳನದ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ಛೀಮಾರಿ ಹಾಕಿದ್ದವು. ಸೌದಿ, ಯುಎಇ ಸೇರಿದಂತೆ ಹಲವು ರಾಷ್ಟ್ರಗಳು ಭಾರತೀಯ ರಾಯಭಾರ ಕಚೇರಿಗೆ ನೋಟೀಸ್ ಮಾಡಿತ್ತು. ಇದೀಗ ಮೋದಿ ದಿಢೀರ್ ಆಗಿ ಮುಸ್ಲಿಂ ರಾಷ್ಟ್ರವೊಂದಕ್ಕೆ ಭೇಟಿ ನೀಡುವುದು ಮಹತ್ವ ಪಡೆದಿದೆ.
Indian Prime Minister Narendra Modi will visit the UAE on June 28, India's Ministry of External Affairs said.The prime minister will travel to the UAE from Germany, where he will participate in the G7 Summit. During the visit, PM Modi will pay his condolences on the demise of the late His Highness Sheikh Khalifa bin Zayed Al Nahyan."After attending the G7 Summit, the Prime Minister will be travelling to UAE on June 28 to pay his personal condolences on the passing away of Sheikh Khalifa bin Zayed Al Nahyan, the former UAE President.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm