ಬ್ರೇಕಿಂಗ್ ನ್ಯೂಸ್
15-06-22 06:07 pm HK News Desk ದೇಶ - ವಿದೇಶ
ಮುಂಬೈ, ಜೂನ್ 15: ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಕಾಂಗ್ರೆಸ್ ನಾಯಕನೊಬ್ಬ ಪ್ರಧಾನಿ ಮೋದಿಯನ್ನು, ಬೀದಿ ನಾಯಿ ರೀತಿ ಸಾಯಲಿದ್ದಾರೆ ಎಂದು ಮೂದಲಿಸಿದ ವಿಚಾರದಲ್ಲಿ ಬಿಜೆಪಿ ನಾಯಕರು ಪೊಲೀಸ್ ದೂರು ನೀಡಿದ್ದಾರೆ. ಅಲ್ಲದೆ, 48 ಗಂಟೆಯೊಳಗೆ ಆತನನ್ನು ಬಂಧಿಸಬೇಕು ಎಂದು ಗಡುವು ನೀಡಿದ್ದಾರೆ.
ನಾಗಪುರ ಇಡಿ ಕಚೇರಿ ಮುಂದೆ ಜೂನ್ 13ರಂದು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಶೇಖ್ ಹುಸೇನ್ ಎಂಬ ಕಾಂಗ್ರೆಸ್ ನಾಯಕ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಜೈಸೆ ಕುತ್ತೇ ಕಿ ಮೌತ್ ಹೋತೀ ಹೈ, ಜೈಸೇ ನರೇಂದ್ರ ಮೋದಿ ಕೀ ಮೌತ್ ಹೋಗೀ (ಯಾವ ರೀತಿ ಬೀದಿ ನಾಯಿಗಳು ಸಾಯುತ್ತವೋ, ಅದೇ ರೀತಿ ನರೇಂದ್ರ ಮೋದಿಯೂ ಸಾಯಲಿದ್ದಾರೆ) ಎಂದು ಶೇಖ್ ಹುಸೇನ್ ಬಹಿರಂಗ ವೇದಿಕೆಯಲ್ಲಿ ಹೇಳಿಕೆ ನೀಡಿದ್ದರು.

ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಹಲವಾರು ಕಡೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ, ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಶೇಖ್ ಹುಸೇನ್ ನೀಡಿರುವ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮಹಾ ವಿಘಾಡಿ ಸರಕಾರ ಪೊಲೀಸರ ಮೇಲೆ ಎಫ್ಐಆರ್ ಮಾಡದಂತೆ ಒತ್ತಡ ಹೇರಿದೆ. ಆದರೆ ನಾವು ಎರಡು ದಿನಗಳ ಗಡುವು ನೀಡುತ್ತೇವೆ. ಎಫ್ಐಆರ್ ದಾಖಲಿಸಿ, ಪೊಲೀಸರು ಬಂಧಿಸದಿದ್ದರೆ ಕಾನೂನು ಕದ ತಟ್ಟಲಿದ್ದೇವೆ. ಜೊತೆಗೆ ಪ್ರತಿಭಟನೆಯನ್ನೂ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕರು ಮುಂದಿನ ಲೋಕಸಭೆ ಚುನಾವಣೆ ವರೆಗೂ ನಾವು ನಿರಂತರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
On Wednesday, the Bharatiya Janata Party (BJP) registered a complaint against Congress leader Sheikh Hussain at the Gittikhadan Police Station for using derogatory comments against Prime Minister Narendra Modi in Nagpur. The BJP leaders have sought strict action against Hussain and also demanded his arrest within 48 hours, failing which they will launch an intense agitation.
04-03-26 11:51 am
HK News Staffer
ಬೆಂಗಳೂರಿನಲ್ಲಿ 10 ಕೋಟಿ ಮೌಲ್ಯದ ಬೃಹತ್ ಡ್ರಗ್ಸ್ ಪತ...
03-03-26 08:39 pm
ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು ಕೊಲ್ಲಿ...
03-03-26 08:37 pm
ತಮ್ಮದೇ ಶಾಸಕರ ಫೋನ್ ಕದ್ದಾಲಿಕೆ - ಡಿಕೆಶಿ ಬಗ್ಗೆ ಎಚ...
03-03-26 08:25 pm
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
04-03-26 10:54 am
HK News Staffer
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm