ಬ್ರೇಕಿಂಗ್ ನ್ಯೂಸ್
11-06-22 09:47 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 11: ಬಿಜೆಪಿ ನಾಯಕಿ ನೂಪುರ್ ಶರ್ಮಾ ಶಿರಚ್ಚೇದನ ಮಾಡಿರುವ ರೀತಿ ಚಿತ್ರಿಸಿ ಯೂಟ್ಯೂಬ್ ನಲ್ಲಿ ಎಡಿಟೆಡ್ ವಿಡಿಯೋ ಪ್ರಕಟಿಸಿದ ಕಾಶ್ಮೀರಿ ಮೂಲದ ಯೂಟ್ಯೂಬರ್ ಫೈಸಲ್ ವಾನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೈಗಂಬರ್ ಅವಹೇಳನದ ಹೇಳಿಕೆಯ ಕಾರಣಕ್ಕೆ ದೇಶದ ಹಲವೆಡೆ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಮಧ್ಯೆಯೇ ಕಾಶ್ಮೀರದಲ್ಲಿ ಯೂಟ್ಯೂಬರ್ ಆಗಿ ಫೇಮಸ್ ಆಗಿರುವ ಫೈಸಲ್ ವಾನಿ ತನ್ನ ಚಾನೆಲ್ ನಲ್ಲಿ ನೂಪುರ್ ಶರ್ಮಾ ದೇಹವನ್ನು ತಲೆಯನ್ನು ಕಡಿದ ರೀತಿ ಚಿತ್ರಿಸಿದ್ದಲ್ಲದೆ, ಬರೀಯ ರುಂಡ ರಹಿತ ದೇಹವನ್ನು ತೋರಿಸಿ ಅವಹೇಳನ ಮಾಡಿದ್ದ. ಪೈಗಂಬರ್ ಅವಹೇಳನಕ್ಕೆ ಇದೇ ಶಿಕ್ಷೆ ಎನ್ನುವ ರೀತಿ ತೋರಿಸಿದ್ದ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಶ್ಮೀರದ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಜಾಲತಾಣದಲ್ಲಿ ಪ್ರತಿಯಾಗಿ ಆಕ್ರೋಶ ಕೇಳಿಬರುತ್ತಿದ್ದಂತೆ ಫೈಸಲ್, ತನ್ನ ವಿಡಿಯೋ ಡಿಲೀಟ್ ಮಾಡಿದ್ದಲ್ಲದೆ ತಾನೇನು ಉದ್ದೇಶಪೂರ್ವಕವಾಗಿ ಈ ರೀತಿ ಚಿತ್ರಿಸಿಲ್ಲ ಎಂದು ಕ್ಷಮೆ ಕೋರಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದ. ಯಾವುದೇ ಧರ್ಮದ ಜನರ ಭಾವನೆಯನ್ನು ಘಾಸಿಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದ. ಪೊಲೀಸರು ಧರ್ಮಗಳ ಮಧ್ಯೆ ದ್ವೇಷ ಹಚ್ಚುವ ರೀತಿ ವರ್ತಿಸಿದ್ದಾನೆ ಎಂದು ಐಪಿಸಿ 505 ಮತ್ತು 506 ಅಡಿ ಕೇಸು ದಾಖಲಿಸಿದ್ದಲ್ಲದೆ, ಶನಿವಾರ ಫೈಸಲ್ ನನ್ನು ಬಂಧಿಸಿದ್ದಾರೆ.
ಫೈಸಲ್ ಎರಡು ದಿನಗಳ ಹಿಂದೆ ಡೀಪ್ ಪೈನ್ ಫಿಟ್ನೆಸ್ ಹೆಸರಲ್ಲಿ ವಿಡಿಯೋ ಪ್ರಕಟಿಸಿದ್ದು, ಅದರಲ್ಲಿ ನೂಪುರ್ ಶರ್ಮಾ ತಲೆ ಕಡಿಯುವ ರೀತಿ ಪ್ರಚೋದನಕಾರಿ ವಿಡಿಯೋ ಅಪ್ಲೋಡ್ ಮಾಡಿದ್ದ. ಅಲ್ಲದೆ, ತಲೆಯನ್ನು ಕಡಿದ ರಕ್ತಸಿಕ್ತ ಕತ್ತಿಯನ್ನೂ ತೋರಿಸಿದ್ದ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
A Kashmiri YouTuber, whose video depicting the beheading of suspended BJP spokesperson Nupur Sharma had gone viral on social media platforms, was arrested on Saturday for breaching public tranquillity and causing fear in the public, police said. Wani has deleted the video and apologised for it as well.Before his arrest, Wani posted another video in which he said he did not have any intention of hurting the sentiments of people or any religion.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm