ಬ್ರೇಕಿಂಗ್ ನ್ಯೂಸ್
11-06-22 04:05 pm HK News Desk ದೇಶ - ವಿದೇಶ
ರಾಂಚಿ, ಜೂನ್ 11: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮುಸ್ಲಿಮ್ ಮತೀಯರ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಉದ್ರಿಕ್ತರು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಹಲವಾರು ವಾಹನಗಳಿಗೆ ಬೆಂಕಿ ಇಕ್ಕಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಸತ್ತಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಹಲವಾರು ಪೊಲೀಸರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗಿನಿಂದಲೇ ರಾಂಚಿಯಲ್ಲಿ ಪ್ರತಿಭಟನೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು. ರಸ್ತೆಗಳಲ್ಲಿ ಟೈರ್ ಗೆ ಬೆಂಕಿ ಹಚ್ಚುವುದು, ನಿಲ್ಲಿಸಿರುವ ವಾಹನಗಳಿಗೆ ಬೆಂಕಿ ಹಚ್ಚುವ ಕೆಲಸ ನಡೆದಿದೆ. ಸಣ್ಣ ಮಕ್ಕಳು, ಹರೆಯದ ಹುಡುಗರನ್ನು ಪ್ರಚೋದಿಸಿ ಗಲಭೆಗೆ ಹಚ್ಚುವ ಕೆಲಸ ನಡೆದಿದೆ. ರಾಂಚಿಯ ಕೆಲವು ಏರಿಯಾಗಳಲ್ಲಿ ಪೊಲೀಸರ ಕೈಮೀರಿದ್ದು, ಕರ್ಫ್ಯೂ ಹೇರಲಾಗಿದೆ. ಜನರು ಮನೆಯಿಂದ ಹೊರಬರದಂತೆ ತಡೆಯುತ್ತಿದ್ದಾರೆ. ಸಿಆರ್ ಪಿಎಫ್ ಯೋಧರನ್ನು ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ.

ರಾಂಚಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಹೇರಲಾಗಿದ್ದು, ಕೆಲವು ಕಡೆಗಳಲ್ಲಿ ಅಂಗಡಿ, ವ್ಯಾಪಾರಸ್ಥರು ಕೂಡ ಹೊರಗೆ ಬರುವಂತಿಲ್ಲ. ಅಂಗಡಿ ಓಪನ್ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ, ಸೋಶಿಯಲ್ ಮೀಡಿಯಾದ ಮೂಲಕ ಗಲಭೆಗೆ ಪ್ರೇರಣೆ ನೀಡುವ ಕೆಲಸ ಆಗುತ್ತಿರುವ ಶಂಕೆಯಲ್ಲಿ ರಾಂಚಿಯಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ಕೇವಲ ಫೋನ್ ಸಂಪರ್ಕ ಮಾತ್ರ ಸೌಲಭ್ಯ ನೀಡಲಾಗಿದೆ.

ಬಿಹಾರದ ಸಚಿವ ಬಿಜೆಪಿ ಮುಖಂಡ ನಿತಿನ್ ನವೀನ್ ಶುಕ್ರವಾರ ರಾಂಚಿಯಲ್ಲಿದ್ದು ರಸ್ತೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಬರುತ್ತಿದ್ದಾಗಲೇ ಪ್ರತಿಭಟನೆ ಎದುರಾಗಿದೆ. ಉದ್ರಿಕ್ತರು ಸಚಿವರ ವಾಹನಕ್ಕೆ ಕಲ್ಲುತೂರಿ ಹಾನಿಗೊಳಿಸಲು ಮುಂದಾಗಿದ್ದಾರೆ. ಈ ವೇಳೆ, ಸಚಿವ ನಿತಿನ್ ನವೀನ್ ಹಲ್ಲೆಕೋರರಿಂದ ಅಲ್ಪದರಲ್ಲಿ ಪಾರಾಗಿದ್ದಾರೆ. ಹಲ್ಲೆ, ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ರಾಂಚಿಯಲ್ಲಿ ಹರತಾಳಕ್ಕೆ ಕರೆ ನೀಡಿದ್ದು, ಶನಿವಾರ ನಗರ ಪೂರ್ತಿ ಬಂದ್ ಆಗಿದೆ.
An uneasy calm prevailed in Jharkhand’s Ranchi on Saturday, less than 24 hours after a protest against suspended BJP spokesperson Nupur Sharma’s inflammatory remarks on Prophet Mohammad turned violent. Streets were deserted as prohibitory orders remained in force in parts of the cityprohibitory orders remained in force in parts of the city, and internet services were suspended. Announcements were being made through the public address system in all localities, warning citizens not to venture out, otherwise they would be taken into custody.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
20-04-26 09:40 pm
HK News Staffer
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
20-04-26 09:35 pm
HK News Staffer
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm