ಬ್ರೇಕಿಂಗ್ ನ್ಯೂಸ್
05-06-22 01:29 pm HK News Desk ದೇಶ - ವಿದೇಶ
ಢಾಕಾ, ಜೂ 05: ಬಾಂಗ್ಲಾದೇಶದ ಕಂಟೈನರ್ ಡಿಪೋಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 16 ಜನರು ಸಜೀವ ದಹನವಾಗಿದ್ದು, 450ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ.
ಚಿತ್ತಗಾಂಗ್ನ ಸೀತಾಕುಂಡ ಉಪಜಿಲಾದಲ್ಲಿರುವ ಕಡಮ್ರಸುಲ್ ಪ್ರದೇಶದ ಬಿಎಂ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, 16 ಜನರು ಸಾವನ್ನಪ್ಪಿದ್ದಾರೆ ಮತ್ತು 450 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆ(ಸಿಎಂಸಿಎಚ್)ಗೆ ರವಾನಿಸಲಾಗಿದೆ.


ಪೊಲೀಸ್ ಔಟ್ಪೋಸ್ಟ್ ಸಬ್-ಇನ್ಸ್ಪೆಕ್ಟರ್(ಎಸ್ಐ) ನೂರುಲ್ ಆಲಂ ಅವರು ಮಾತನಾಡಿದ್ದು, ಈ ಘಟನೆಯ ಪ್ರಾಥಮಿಕ ತನಿಖೆ ವೇಳೆ, ಕಂಟೈನರ್ ಡಿಪೋಗೆ ರಾಸಾಯನಿಕಗಳಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಮುನ್ನವೇ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನಂತರ ರಾತ್ರಿ 11:45ಕ್ಕೆ ಭಾರೀ ಸ್ಫೋಟ ಸಂಭವಿಸಿದೆ ಎಂದು ವಿವರಿಸಿದರು.

ಈ ಬೆನ್ನಲ್ಲೇ ಕಂಟೈನರ್ ಒಂದರಲ್ಲಿ ರಾಸಾಯನಿಕ ಅಂಶವಿದ್ದ ಕಾರಣ ಬೆಂಕಿ ಒಂದು ಕಂಟೇನರ್ ನಿಂದ ಮತ್ತೊಂದು ಕಂಟೇನರ್ ಗೆ ವ್ಯಾಪಿಸಿದೆ. ಈ ಸ್ಫೋಟವು ನೆರೆಹೊರೆಯನ್ನು ಬೆಚ್ಚಿಬೀಳಿಸಿದೆ. ಹತ್ತಿರದ ಮನೆಗಳ ಕಿಟಕಿ ಗಾಜುಗಳು ಒಡೆದುಹೋಗಿವೆ ಎಂದರು.

ಚಿತ್ತಗಾಂಗ್ ಅಗ್ನಿಶಾಮಕ ಸೇವೆ ಮತ್ತು ಸಿವಿಲ್ ಡಿಫೆನ್ಸ್ ಸಹಾಯಕ ನಿರ್ದೇಶಕ ಎಂಡಿ ಫಾರುಕ್ ಹೊಸೈನ್ ಸಿಕ್ದರ್ ಸೇರಿ ಸುಮಾರು 19 ಅಗ್ನಿಶಾಮಕ ಘಟಕಗಳು ಬೆಂಕಿ ನಂದಿಸಲು ಕೆಲಸ ಮಾಡುತ್ತಿವೆ. ಆರು ಆಂಬ್ಯುಲೆನ್ಸ್ಗಳು ಸಹ ಸ್ಥಳದಲ್ಲಿದೆ.
At least 35 people were killed and over 450 injured in a massive fire caused by an explosion that swept through a private chemical container depot in southeastern Bangladesh, officials said on Sunday. On Saturday night, the fire broke out at BM Container Depot in the Kadamrasul area in Sitakunda Upazila in Chittagong. "So far 35 dead bodies reached the morgue here," a police officer stationed at the state-run Chattagram Medical College Hospital (CMCH) told newsmen.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm