ಬ್ರೇಕಿಂಗ್ ನ್ಯೂಸ್
03-06-22 07:36 pm HK News Desk ದೇಶ - ವಿದೇಶ
ಕಾರವಾರ, ಜೂನ್ 3 : ಹಿಜಾಬ್ ವಿಚಾರ ನಮ್ಮ ಸರ್ಕಾರದ ಮಟ್ಟಿಗೆ ಮುಗಿದುಹೋಗಿರುವ ಅಧ್ಯಾಯ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವರು ಹಿಜಾಬ್ ಹಾಕಿಕೊಂಡು ಬಂದು ಅಶಾಂತಿಯನ್ನ ಸೃಷ್ಟಿಸುತ್ತಿದ್ದಾರೆ. ಸಂವಿಧಾನವನ್ನ ಸ್ವೀಕರಿಸುವವರು ಕೋರ್ಟಿನ ಆದೇಶವನ್ನ ವಿರೋಧ ಮಾಡತಕ್ಕದ್ದಲ್ಲ. ಹಿಜಾಬ್ ಹಾಕಿ ಬಂದು ವಿವಾದ ಸೃಷ್ಟಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಲೌಡ್ ಸ್ಪೀಕರ್ ತೆರವು ಮಾಡದಿದ್ದರೆ ಗುಂಡಿಕ್ಕಿ ಸಾಯಿಸೋದಾಗಿ ಪ್ರಮೋದ್ ಮುತಾಲಿಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೋಟ, ಮುತಾಲಿಕ್ ಅವರು ಯಾವುದೇ ಸರ್ಕಾರ ಇದ್ದರೂ ಜಾಗೃತಿ ಮಾಡುವಂತ ಕೆಲಸ ಮಾಡುತ್ತಾರೆ. ಲೌಡ್ಸ್ಪೀಕರ್ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಜಾರಿಮಾಡಲು ನಿರ್ದೇಶಿಸಿದೆ. ಕೆಲವೆಡೆ ಲೌಡ್ಸ್ಪೀಕರ್ ತೆಗೆಸಲಾಗಿದೆ, ಕೆಲವು ಕಡೆ ತೆಗೆಸುತ್ತಿದ್ದಾರೆ. ಇದು ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಎಲ್ಲವೂ ಕೂಡ ನ್ಯಾಯಾಂಗ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರುತ್ತವೆ ಎಂದರು.

ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತರನ್ನ ತುಂಬುವುದು ತಪ್ಪಲ್ಲ. ಮುಂದಿನ ಪೀಳಿಗೆಗೆ ರಾಷ್ಟ್ರೀಯತೆ ಅಂದ್ರೆ ಏನು ಅಂತ ಹೇಳಬೇಕಾದ ಅಗತ್ಯ ಇದೆ. ಅದಕ್ಕೆ ಅವಶ್ಯಕವಾದ ಪಠ್ಯಗಳ ಅಳವಡಿಕೆಗೆ ತಜ್ಞರ ಸಮಿತಿ ಪರಿಷ್ಕರಣೆ ಮಾಡಿದೆ. ವಿನಾಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಹಿಂದೆ ಅಸಹಿಷ್ಣುತೆ ಕಾರಣ ನೀಡಿ ಕೆಲವರು ತಮ್ಮ ಪ್ರಶಸ್ತಿ ವಾಪಸ್ ನೀಡೋದಾಗಿ ಹೇಳಿದ್ದರು. ಆದ್ರೆ ಇಲಾಖೆಯವರ ಬಳಿ ಕೇಳಿದಾಗ ಯಾರೂ ಸಹ ಪ್ರಶಸ್ತಿಯನ್ನಾಗಲಿ, ಹಣವನ್ನಾಗಲಿ ವಾಪಸ್ ಮಾಡಿರಲಿಲ್ಲ. ಹೀಗೆ ಗುಮ್ಮನನ್ನು ಬಿಟ್ಟು ಹೆದರಿಸುವ ಪದ್ದತಿ ಹಿಂದಿನಿಂದಲೂ ಇದೆ. ದೇವನೂರು ಮಹಾದೇವನಂಥವರು ಕೆಲವೊಂದು ವಿಚಾರಗಳನ್ನ ಉಲ್ಲೇಖಿಸಿದ್ದಾರೆ. ಅವರು ತಿಳಿದುಕೊಂಡಿರುವ ತಪ್ಪುಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗುವುದು. ಕೆಲವರು ಪಠ್ಯಪುಸ್ತಕದಿಂದ ತನ್ನ ಪಾಠವನ್ನ ತೆಗೆಯಿರಿ ಎಂದು ಹೇಳಿಕೆ ನೀಡಿದ್ದಾರೆ. ಕೆಲವರ ಪಾಠಗಳೇ ಪುಸ್ತಕದಲ್ಲಿ ಇಲ್ಲ, ಸುಮ್ಮನೆ ಹೇಳಿಕೆ ಕೊಟ್ಟವರೂ ಇದ್ದಾರೆ. ಇದರಲ್ಲಿ ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ. ಎಲ್ಲರ ಸಲಹೆ ಕೇಳುತ್ತೇವೆ, ಸರಿಯಾದುದನ್ನೇ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Hijab row in Mangalore university, court order must be strictly followed says Kota Poojary.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm