ಬ್ರೇಕಿಂಗ್ ನ್ಯೂಸ್
01-06-22 10:26 pm HK News Desk ದೇಶ - ವಿದೇಶ
ಮುಂಬೈ, ಜೂನ್ 1: ತನ್ನ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ತೆರೆಗೆ ಬರಲು ಇನ್ನೆರಡು ದಿನ ಇರುವಾಗ ನಟ ಅಕ್ಷಯ್ ಕುಮಾರ್, ಇತಿಹಾಸ ಪುಸ್ತಕಗಳ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಇತಿಹಾಸ ಪುಸ್ತಕಗಳಲ್ಲಿ ದಾಳಿಕೋರ ಮೊಘಲರ ಬಗ್ಗೆ ಪಠ್ಯ ಹೆಚ್ಚಿದೆಯೇ ವಿನಾ ಪೃಥ್ವಿರಾಜ್ ಚೌಹಾಣ್ ಬಗ್ಗೆ ಒಂದೆರಡು ಗೆರೆಗಳಷ್ಟೇ ಇವೆ ಎಂದು ಹೇಳಿದ್ದಾರೆ. ಇತಿಹಾಸ ಪುಸ್ತಕದ ಬಗ್ಗೆ ಅಕ್ಷಯ್ ಕುಮಾರ್ ತೆಗಳಿಕೆ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಕೆಲವರು ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಎಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದ ಅಕ್ಷಯ್ ಕುಮಾರ್, ದುರಾದೃಷ್ಟ ಅಂದರೆ, ನಮ್ಮ ಇತಿಹಾಸ ಪುಸ್ತಕಗಳಲ್ಲಿ ಕೆಲವು ಸಾಲುಗಳನ್ನಷ್ಟೇ ಪೃಥ್ವಿರಾಜ್ ಬಗ್ಗೆ ಕೊಡಲಾಗಿದೆ. ನಮ್ಮ ರಾಜರ ಬದಲಿಗೆ ದಾಳಿಕೋರರ ಬಗ್ಗೆಯೇ ಹೆಚ್ಚಿನದನ್ನು ಕೊಡಲಾಗಿದೆ. ನಮ್ಮ ರಾಜರು, ನಮ್ಮ ಸಂಸ್ಕೃತಿ ಬಗ್ಗೆ ಪುಸ್ತಕಗಳಲ್ಲಿ ಕೊಟ್ಟಿಲ್ಲ. ನಮ್ಮ ನೈಜ ಇತಿಹಾಸವನ್ನು ಪುಸ್ತಕದಲ್ಲಿ ಬರೆದಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಸಾಧ್ಯವಾದರೆ, ಎರಡೂ ಕಡೆಯ ಇತಿಹಾಸವನ್ನು ಬ್ಯಾಲೆನ್ಸ್ ಆಗಿ ಪುಸ್ತಕದಲ್ಲಿ ಕೊಡಿ. ಮೊಘಲರಷ್ಟೇ ನಮ್ಮ ರಾಜರ ಬಗ್ಗೆಯೂ ಮಕ್ಕಳು ತಿಳಿದುಕೊಳ್ಳಬೇಕು. ನಮ್ಮಲ್ಲೂ ಬಹಳ ದೊಡ್ಡ ರಾಜರುಗಳು ಇದ್ದರು ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಮಾತುಗಳು ಟ್ವಿಟರ್ ನಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಖಾರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಬ್ಬರಂತೂ ಸಿಬಿಎಸ್ಇ ಏಳನೇ ತರಗತಿಯ ಪುಸ್ತಕದಲ್ಲಿ ಪೃಥ್ವಿರಾಜ್ ಬಗ್ಗೆ ಎರಡು ಪುಟಗಳಿವೆ ಎಂದು ಅದರ ಫೋಟೋ ಹಾಕಿದ್ದಾರೆ. ಕೆಲವರು ಮೊಘಲರು ಯಾವಾಗ ಬಂದಿದ್ದು, ಪೃಥ್ವಿರಾಜ್ ಆಡಳಿತ ಯಾವಾಗ ಇದ್ದಿದ್ದು ಅಂತ ಇವರಿಗೆ ಗೊತ್ತಾ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಸಾಮ್ರಾಟ್ ಪೃಥ್ವಿರಾಜ್ ಚಿತ್ರವನ್ನು ನೋಡಿ. ಇತಿಹಾಸ ತಿಳಿದುಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
Just two more days and Akshay Kumar’s Samrat Prithviraj will finally hit the theatres. The actor, who has been all up and about promoting his upcoming film, received flak for his recent statement on history books. Akshay said that children’s history textbooks are filled with information on invaders but hardly have any lines on Samrat Prithviraj Chauhan.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm