ಬ್ರೇಕಿಂಗ್ ನ್ಯೂಸ್
17-05-22 10:52 am Bangalore Correspondent ಕರ್ನಾಟಕ
ಬೆಂಗಳೂರು, ಮೇ 16: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬೆಂಗಳೂರಿನ ಬಿಜೆಪಿ ಮುಖಂಡನ ಸಾವಿನ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಸಾವಿಗೆ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್ ಮೇಲ್ ಕಾರಣ ಅನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಸಾವಿಗೆ ಶರಣಾದ ಬಿಜೆಪಿ ಮುಖಂಡ ಅನಂತರಾಜು ಅವರ ಪತ್ನಿ ಡೆತ್ ನೋಟ್ ಆಧರಿಸಿ ದೂರು ನೀಡಿದ್ದಾರೆ.
ಅನಂತರಾಜು ಮೇ 12ರಂದು ಸಂಜೆ ತನ್ನ ಮನೆಯ ಮೇಲಿನ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದ ಅನಂತರಾಜು ಹಠಾತ್ ಸಾವಿಗೆ ಶರಣಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಘಟನೆ ಬಳಿಕ ತೀವ್ರ ನೊಂದಿದ್ದ ಅವರ ಪತ್ನಿ ಸುಮಾಗೆ ಮೂರು ದಿನಗಳ ನಂತರ ಬೆಡ್ ರೂಮಿನಲ್ಲಿದ್ದ ಪುಸ್ತಕದಲ್ಲಿ ಗಂಡ ತನ್ನ ಸಾವಿಗೆ ಕಾರಣ ಬರೆದಿಟ್ಟು ಕ್ಷಮೆ ಕೋರಿರುವ ಬರಹ ಪತ್ತೆಯಾಗಿದೆ.
ಮೊದಲಿಗೆ ಥೈರಾಯ್ಡ್ ಸಮಸ್ಯೆ ಇದ್ದುದರಿಂದ ಅನಂತರಾಜು ಆರೋಗ್ಯ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಫೇಸ್ಬುಕ್ ನಲ್ಲಿ ಪರಿಚಯ ಆಗಿದ್ದ ಲೇಡಿಯಿಂದಾಗಿ ಬ್ಲಾಕ್ಮೇಲ್ ಆಗಿರುವ ವಿಚಾರ ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿದೆ. ಕೆ.ಆರ್.ಪುರಂ ನಿವಾಸಿ ರೇಖಾ ಎಂಬಾಕೆ ಫೇಸ್ಬುಕ್ ರಿಚಯ, ಸ್ನೇಹದ ನೆಪದಲ್ಲಿ ಸಂಬಂಧ ಬೆಳೆಸಿಕೊಂಡು ವಿಡಿಯೋ ಮಾಡಿಟ್ಟು ತನ್ನ ಗಂಡನ ಜೊತೆ ಸೇರಿ ಬ್ಲಾಕ್ಮೇಲ್ ಮಾಡಿದ್ದಾಳೆ. ಅನಂತರಾಜು ಖಾಸಗಿ ಕ್ಷಣಗಳನ್ನು ಕಳೆದಿದ್ದ ಅಶ್ಲೀಲ ಫೋಟೋ ಮತ್ತು ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಮಾಡಿದ್ದರು. ಆಗಾಗ ಹಣ ಕೇಳುತ್ತಿದ್ದರು. ಹಲವು ಬಾರಿ ಹಣ ಕೊಟ್ಟಿದ್ದರೂ, ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟು ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದರು.
ಹೆಚ್ಚಿನ ಹಣ ಕೊಡದೇ ಇದ್ದರೆ ಬಿಜೆಪಿ ಮುಖಂಡರಿಗೆ ವಿಡಿಯೋ ತಲುಪಿಸಿ ರಾಜಕೀಯದಲ್ಲಿ ಹೆಸರು ಕೆಡಿಸುತ್ತೇವೆ ಎಂದು ಬೆದರಿಸುತ್ತಿದ್ದರು. ಇದರಿಂದ ತೀವ್ರ ನೊಂದಿದ್ದ ಅನಂತರಾಜು, ತನ್ನ ಪತ್ನಿಯ ಜೊತೆಗೂ ವಿಷಯ ಹೇಳಿಕೊಂಡಿದ್ದ. ಪತ್ನಿ ಸುಮಾ ಹಲವು ಬಾರಿ ಧೈರ್ಯ ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪತ್ನಿ ಸುಮಾ ನೀಡಿರುವ ದೂರಿನಂತೆ ರೇಖಾ, ವಿನೋದ್ ಮತ್ತು ಸ್ಪಂದನ ಎಂಬ ಮೂವರ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಆರಂಭಿಸಿದ್ದಾರೆ.
BJP leader Anant Raju’s suicide was widely suspected. Police investigations have now revealed that the woman was found behind the death. Anantaraju is not sick, but has been suicidal in the Honeytrap trap, as is known by many, all of which are mentioned in the Death Note. The FIR has been lodged with the wife of BJP leader Ananta Raju. Rekha, Vinod and Spandana mention the death note written by BJP leader Anantaraju before his suicide.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm