ಬ್ರೇಕಿಂಗ್ ನ್ಯೂಸ್
15-05-22 03:28 pm HK Desk News ಕರ್ನಾಟಕ
ತುಮಕೂರು, ಮೇ 15 : ಎರಡು ವರ್ಷಗಳಿಂದ ಪ್ರೀತಿಸಿ ಮದುವೆಗೆ ರೆಡಿಯಾಗಿದ್ದಾಗಲೇ ಪ್ರಿಯಕರ ಅಪಘಾತದಲ್ಲಿ ಸಾವನ್ನಪ್ಪಿದರೆ, ಘಟನೆಯಿಂದ ಆಘಾತಗೊಂಡು ಪ್ರೀತಿಸುತ್ತಿದ್ದ ಯುವತಿಯೂ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಧನುಷ್ (23) ಮತ್ತು ಸುಷ್ಮಾ (22) ಮೃತ ದುರ್ದೈವಿಗಳು. ತುಮಕೂರು ತಾಲೂಕಿನ ಅರೆಹಳ್ಳಿಯಲ್ಲಿ ದುರಂತ ನಡೆದಿದೆ. ಮೇ 11ರಂದು ಹುಡುಗ ಸಾವನ್ನಪ್ಪಿದರೆ, ಶನಿವಾರ ರಾತ್ರಿ ಯುವತಿ ಸಾವು ಕಂಡಿದ್ದಾಳೆ. ಮೇ 11ರಂದು ನೆಲಮಂಗಲ ಬಳಿ ನಡೆದ ಅಪಘಾತದಲ್ಲಿ ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ ಸಾವನ್ನಪ್ಪಿದ್ದ. ಸಾವಿನ ಸುದ್ದಿಕೇಳಿ ಆಘಾತಗೊಂಡಿದ್ದ ಅರೆಹಳ್ಳಿ ನಿವಾಸಿ ಯುವತಿ ಸುಷ್ಮಾ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ದುಃಖದ ಮಧ್ಯೆಯೂ ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು. ಅದೇ ಯೋಚನೆಯಲ್ಲಿ ಮುಳುಗಿದ್ದ ಸುಷ್ಮಾ ಮನನೊಂದು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.


ವಿಷ ಸೇವಿಸಿದ್ದ ಯುವತಿಯನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಒಯ್ದಿದ್ದು ಸೂಕ್ತ ಚಿಕಿತ್ಸೆ ಲಭಿಸಿರಲಿಲ್ಲ. ನಾಲ್ಕೈದು ಆಸ್ಪತ್ರೆಗಳಲ್ಲಿ ಸುತ್ತಿದರೂ, ಚಿಕಿತ್ಸೆ ಫಲಿಸದೇ ಸುಷ್ಮಾ ಸಾವು ಕಂಡಿದ್ದಾಳೆ. ಎಂಕಾಂ ಮಾಡುತ್ತಿದ್ದ ಸುಷ್ಮಾ ಮತ್ತು ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದ ಧನುಷ್ ಹೊಸ ಬಾಳಿನ ಕನಸು ಕಟ್ಟಿದ್ದರು. ಆದರೆ ಧನುಷ್ ಊರಿನ ಜಾತ್ರೆಗೆ ಬರುತ್ತಿದ್ದ ವೇಳೆ ಅಪಘಾತ ನಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಹುಡುಗ- ಹುಡುಗಿ ಪ್ರೀತಿಸುತ್ತಿದ್ದ ವಿಚಾರ ತಿಳಿದ ಮನೆಯವರು ಇತ್ತೀಚೆಗೆ ಇಬ್ಬರಿಗೂ ಮದುವೆ ನಿಶ್ಚಯ ಮಾಡಿದ್ದರು. ಆದರೆ ವಿಧಿಯಾಟ ಬೇರೆಯದೇ ಆಗಿತ್ತು. ಬಾಳಿ ಬದುಕಬೇಕಾದವರು ದುರಂತ ಅಂತ್ಯ ಕಂಡಿದ್ದಾರೆ.
Tumkur Bride grooms dies on road accident, shocked bride consumes poison found dead. The deceased have been identified as Dhanush (23) and Sushma (22).
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm