ಬ್ರೇಕಿಂಗ್ ನ್ಯೂಸ್
07-05-22 07:27 pm HK Desk News ಕರ್ನಾಟಕ
ವಿಜಯಪುರ, ಮೇ 7 : ಸಿಎಂ ಹುದ್ದೆ 2500 ಕೋಟಿಗೆ ಹರಾಜು ಎಂಬ ರೀತಿ ಹೇಳಿಕೆ ನೀಡಿ ಪೇಚಿಗೆ ಸಿಲುಕಿರುವ ರೆಬಲ್ ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಪಕ್ಷದ ಶಿಸ್ತು ಸಮಿತಿ ಕ್ರಮಕ್ಕೆ ಶಿಫಾರಸು ಮಾಡಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಯತ್ನಾಳ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ. ಏನು ಬೇಕಾದರೂ ಶಿಫಾರಸು ಮಾಡಲಿ, ಶಿಸ್ತು ಕಮಿಟಿ ಅಂದ್ರೆ ಏನು..? ನನ್ನ ಕರಿಸ್ತಾರಲ್ಲಾ ಅಲ್ಲಿಯೇ ಹೇಳ್ತೇನೆ. ಹಿಂದೇನು ಕರೆಸಿದ್ರು ಎಂದು ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರೇ ಕ್ಲಿಯರ್ ಆಗಿ ಹೇಳಿದ್ದಾರಲ್ಲ. ನಾನು ಪಾರ್ಟಿ ಬಗ್ಗೆ ಹೇಳಿಲ್ಲ, ಇನ್ ಜನರಲ್ ಆಗಿ ಮಾತಾಡಿದ್ದಾರೆ ಅಂತ. ಇಷ್ಟರ ಮೇಲೆ ಏನು ಶಿಸ್ತು ಕ್ರಮ? ಶಿಸ್ತು ಕ್ರಮ ಅಂತಾ ಕೆಲವು ಮಾಧ್ಯಮಗಳು ಹೊಡೆಯುತ್ತಿವೆ. ಅದು ಏನು ಆಗೋದಿಲ್ಲ. ಮಾಧ್ಯಮದಲ್ಲಿ ಹೇಳಿದ್ದೆಲ್ಲ ಸತ್ಯವಲ್ಲ ಎಂದರು ಯತ್ನಾಳ್. ಸತ್ಯ ಏನಿದ್ದರೂ, 24 ಕ್ಯಾರೆಟ್ ಬಂಗಾರ ಇರತ್ತೆ. ಸತ್ಯಕ್ಕೆ ಪಿಲ್ಟರ್ ಇರೋಲ್ಲ, ಸುಳ್ಳಿಗೆ ಪಿಲ್ಟರ್ ಇರುತ್ತೆ ಎಂದು ಯತ್ನಾಳ್ ಕುಹಕವಾಡಿದ್ದಾರೆ.
ಇದೇ ವೇಳೆ, ಡಿಕೆಶಿ ವಿರುದ್ಧ ಯತ್ನಾಳ್ ಸಿಡಿಮಿಡಿಯಾಗಿದ್ದು ಡಿಕೆಶಿಗೆ ನನ್ನ ಭಯ ಬಗ್ಗೆ ಶುರುವಾಗಿದೆ. ಯತ್ನಾಳ್ ಸಿಎಂ ಆದ್ರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿಕೆಶಿಗೆ ಇದೆ. ಮತ್ತೆ ಅದೇ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಭಯ ಶುರುವಾಗಿದೆ. ಡಿಕೆಶಿ ಗೆ ಏನೋ ಒಂದು ಸಂದೇಶ ಸಿಕ್ಕಿದೆ. ಯತ್ನಾಳ್ ಪವರ್ಪುಲ್ ಮನುಷ್ಯ ಆದ್ರೆ ಅನ್ನೋ ಭಯ ಇದೆ. ಇದರಿಂದಾಗಿ ನನ್ನ ಬಗ್ಗೆ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಸಚಿವ ಸ್ಥಾನ ಕೇಳಿಯೇ ಇಲ್ಲ. ನಾನು ವಿಧಾನಸೌಧದಲ್ಲಿ 2 ಸಾವಿರ ಕೋಟಿ ವಿಚಾರ ಮಾತನಾಡಿದಾಗ ಇಶ್ಯೂ ಆಗಲಿಲ್ಲ. ರಾಮದುರ್ಗದಲ್ಲೂ ಹೇಳಿದ್ದೀನಿ. ವಿಧಾನ ಸೌಧದಲ್ಲಿ ಹೇಳಿದಾಗ ಯಾಕೆ ಚರ್ಚೆ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯ ಸುಳಿವಿದೆ, ಹೀಗಾಗಿ ನಾನು ಟಾರ್ಗೆಟ್. ಯತ್ನಾಳ್ ಏನಾದರೂ ಆದ್ರೆ ಬುಲ್ಡೋಜರ್ ತರ್ತಾರೆ ಅಂತಾ ಭಯ. ಅಕ್ರಮ ಆಸ್ತಿ ಹೊಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ನಾನು ಸಿಎಂ ಆದ್ರೆ ಬುಲ್ಡೊಜರ್ ರೆಡಿ ಇಟ್ಟಿದ್ದೀನಿ. ಬುಲ್ಡೊಜರ್ ಗೆ ಆರ್ಡರ್ ಕೊಟ್ಟಿದ್ದೀನಿ. ಹಾಗಾಗಿ ನನ್ನ ಸಚಿವ ಸ್ಥಾನ ತಪ್ಪಿಸಲು ಇದು ಷಡ್ಯಂತ್ರ ಎಂದಿದ್ದಾರೆ ಯತ್ನಾಳ್.
Yatnal slams DK Shivakumar says hes afraid that I will be the next CM. He's worried that I will send Bulldozer to destroy his territory.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm