ಬ್ರೇಕಿಂಗ್ ನ್ಯೂಸ್
04-05-22 03:38 pm HK Desk News ಕರ್ನಾಟಕ
ತುಮಕೂರು, ಮೇ 9 : ಪರೀಕ್ಷೆಯಲ್ಲಿ ಅಕ್ರಮ ಎಲ್ಲ ಕಾಲದಲ್ಲೂ ಆಗಿದೆ, ಸಿದ್ದರಾಮಯ್ಯ ಕಾಲದಲ್ಲಿ ನಾಲ್ಕು ಬಾರಿ ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಆಗಿಲ್ಲವಾ. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿಲ್ಲವೇ. ಪತ್ರಿಕೆ ಲೀಕ್ ಆದ ಬಗ್ಗೆ ಅವರು ತನಿಖೆಯನ್ನೇ ಮಾಡಿಲ್ಲ. ಪಿಎಸ್ಐ ಪರೀಕ್ಷೆಯಲ್ಲಿ ಸಣ್ಣ ಸಾಕ್ಷ್ಯ ಸಿಕ್ಕಿದ ಕೂಡಲೇ ಕೇವಲ ಎರಡು ಗಂಟೆಯಲ್ಲಿ ಸಿಎಂ ಒಪ್ಪಿಗೆ ಪಡೆದು ಸಿಓಡಿ ತಂಡಕ್ಕೆ ತನಿಖೆಗೆ ವಹಿಸಿದ್ದೆ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದು ಪಕ್ಷ ಭೇದ ಇಲ್ಲದೆ ಆರೋಪಿತರನ್ಬು ಅರೆಸ್ಟ್ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತನಿಖೆ ಯಾವ ರೀತಿಯ ಪ್ರಗತಿಯಲ್ಲಿದೆ ಅನ್ನುವ ಪ್ರತಿಕ್ಷಣದ ಮಾಹಿತಿ ಮಾಧ್ಯಮದಲ್ಲಿಯೇ ಬರ್ತಿದೆ. ಪರೀಕ್ಷೆಯಲ್ಲಿ ಭ್ರಷ್ಟಾಚಾರ ಹೊಸದೇನಲ್ಲ.. ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ನಾಲ್ಕು ಬಾರಿ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಆಯ್ತು. ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಆರೋಪ ಮಾಡುವ ಮೊದಲು ತಮ್ಮ ಅವಧಿಯನ್ನ ನೆನಪು ಮಾಡಿಕೊಳ್ಳಬೇಕು. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ ತನಿಖೆ ಮುಂದಕ್ಕೆ ಹೋಗಲೇ ಇಲ್ಲ. ಆದರೆ ನಾವು ಪಕ್ಷ , ಪಂಗಡ ನೋಡದೇ ಅರೆಸ್ಟ್ ಮಾಡಿದ್ದೇವೆ. ಇನ್ನು ಮುಂದೆ ಅಕ್ರಮ ಮಾಡುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇವೆ.
ಆರಂಭದಲ್ಲಿ ಅಕ್ರಮ ನಡೆದಿಲ್ಲ ಎಂದು ಪರಿಷತ್ ನಲ್ಲಿ ನಾನು ಉತ್ತರ ಕೊಟ್ಟಿರೋದು ನಿಜ. ಆಗ ನನಗೆ ಯಾವುದೇ ದಾಖಲಾತಿ ಸಿಕ್ಕಿರಲಿಲ್ಲ. ಯಾರೋ ಹೇಳ್ತಾರೆ ಅನ್ನೋ ಕಾರಣಕ್ಕೆ ನಾನು ಹೇಳೋಕ್ಕಾಗಲ್ಲ. ಆನಂತರ ಎವಿಡೆನ್ಸ್ ಸಿಕ್ಕಿದಾಗ ನಾನು ತಕ್ಷಣ ತನಿಖೆಗೆ ಆದೇಶಿಸಿದೆ ಎಂದರು ಆರಗ.
545 ಜನ ಪಾಸಾದ ಅಭ್ಯರ್ಥಿಗಳು ಇದ್ದಾರೆ. ಅಷ್ಟೂ ಜನಕ್ಕೆ ನೋಟಿಸ್ ನೀಡಲಾಗಿದೆ. ಹಾಜರಾಗಿ ಓಎಮ್ಆರ್ ಶೀಟ್ ತೋರಿಸುವಂತೆ ನೋಟಿಸ್ ನೀಡಲಾಗಿದೆ. ಓಎಂಆರ್ ಶೀಟ್ ನಲ್ಲಿ ಅನುಮಾನ ಬಂದಲ್ಲಿ ಅವರನ್ನ ಅಲ್ಲೇ ಕೂರಿಸಿಕೊಳ್ತಾರೆ. ಯಾರ ಪ್ರಭಾವಕ್ಕೂ ಇಲ್ಲಿ ಯಾರೂ ಮಣಿಯುವ ಪ್ರಶ್ನೆ ಬರುವುದಿಲ್ಲಾ..
ಸಿದ್ದರಾಮಯ್ಯ ಅವರಿಗೆ ಇಷ್ಯುಗಳೇ ಇಲ್ಲ. ಅವರ ಅನೇಕ ಮುಖಂಡರು ನನ್ನ ಹತ್ರ ಆ ವಿಡಿಯೋ ಇದೆ, ಈ ವಿಡಿಯೋ ಇದೆ ಅಂತಾ ಹೇಳಿದ್ರು. ಆದರೇ ಅವರ್ಯಾರು ತನಿಖಾಧಿಕಾರಿಗಳಿಗೆ ಅದನ್ನ ಒಪ್ಪಿಸ್ತಿಲ್ಲ. ಅದರ ಬದಲಾಗಿ, ಯಾರ್ಯಾರದ್ದೋ ಚಾರಿತ್ರ್ಯ ಹರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪ್ರಾಮಾಣಿಕವಾದ ತನಿಖೆಯಲ್ಲಿ ನಂಬಿಕೆ ಇಲ್ಲ. ಇವರ ದೊಡ್ಡ ದೊಡ್ಡ ಮುಖಂಡರು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅದರಲ್ಲಿ ಭಾಗಿಯಾಗಿದ್ದಾರೆ. ಪೂನಾದಲ್ಲಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್ ನವರೇ. ಇದರ ಹಿಂದೆ ಕಾಂಗ್ರೆಸ್ ನವರು ಇದ್ದಾರೆ. ನಾವು ಯಾವುದೇ ಪಕ್ಷ ಪಂಗಡ ನೋಡದೆಯೇ, ಮೂಗು ತೂರಿಸದೇನೆ ತನಿಖೆ ಮಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಯಾರ ದಾಖಲಾತಿ ಸಿಗುತ್ತೋ ಅಂತವರನ್ನ ಅರೆಸ್ಟ್ ಮಾಡ್ತಿದ್ದೇವೆ.
ಸಿದ್ದರಾಮಯ್ಯ ಕಾಲದಲ್ಲಿಯೇ ಸಿಓಡಿ ರಚಿಸಲಾಗಿತ್ತು. ಈಗ ಅದರ ಮೇಲೆ ನಂಬಿಕೆ ಇಲ್ಲಾ ಅಂದರೆ ಹೇಗೆ? ನಂಬಿಕೆ ಇಲ್ಲಾ ಅಂದರೇ ಸಿಓಡಿನ ಆಗಲೇ ವಿಸರ್ಜನೆ ಮಾಡಬೇಕಿತ್ತು. ಲೋಕಾಯುಕ್ತವನ್ನ ಕತ್ತು ಹಿಸುಕಿದವರು ಯಾರು. ಪ್ರಬಲವಾಗಿದ್ದ ಲೋಕಾಯುಕ್ತವನ್ನ ಕಾಂಗ್ರೆಸ್ ಕಾಲದಲ್ಲಿ ಕತ್ತು ಹಿಸುಕಲಾಯಿತು. ಆಮೇಲೆ ಅವರೇ ಎಸಿಬಿ ಮಾಡಿದರು ಎಂದು ಗೃಹ ಸಚಿವ ಆರಗ ಜ್ಙಾನೇಂದ್ರ ಟೀಕಿಸಿದರು.
Home minister slams Siddaramaiah says during his tenure question paper was leaked for three times.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm