ಬ್ರೇಕಿಂಗ್ ನ್ಯೂಸ್
27-04-22 09:59 pm HK Desk ಕರ್ನಾಟಕ
ಮೈಸೂರು, ಎ.27: ಬೇಸಗೆ ರಜೆಯಲ್ಲಿ ಹಳ್ಳಿ ಸೊಗಡಿನ ಕಣ್ಣಾಮುಚ್ಚಾಲೆ ಆಟವಾಡಲು ಹೋಗಿ, ಐಸ್ ಕ್ರೀಮ್ ಬಾಕ್ಸ್ ಒಳಗಡೆ ಸಿಲುಕಿಕೊಂಡು ಇಬ್ಬರು ಬಾಲಕಿಯರು ದಾರುಣ ಸಾವು ಕಂಡ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.
ಕಣ್ಣಾ ಮುಚ್ಚಾಲೆ ಆಟದಲ್ಲಿ ಅಡಗಿಕೊಳ್ಳಲು ಹೋಗಿ ಐಸ್ ಕ್ರೀಮ್ ಬಾಕ್ಸ್ ನಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕಿಯರು ಸಾವನ್ನಪ್ಪಿದ್ದಾರೆ. ಐಸ್ ಕ್ರೀಮ್ ಬಾಕ್ಸ್ ಒಳಗೆ ಬಾಗಿಲು ಹಾಕ್ಕೊಂಡು ಅವಿತುಕೊಂಡಿದ್ದು, ಬಾಗಿಲು ತೆರೆಯಲಾಗದೆ ಉಸಿರು ಗಟ್ಟಿ ಸಾವು ಕಂಡಿದ್ದಾರೆ. ಮಸಗೆ ಗ್ರಾಮದ ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬವರ ಪುತ್ರಿ ಭಾಗ್ಯ (12) ಮತ್ತು ರಾಜನಾಯಕ ಮತ್ತು ಗೌರಮ್ಮ ಎಂಬವರ ಪುತ್ರಿ ಕಾವ್ಯ (7) ಮೃತ ಬಾಲಕಿಯರು.

ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ಐಸ್ ಕ್ರೀಮ್ ಬಾಕ್ಸ್ ಒಳಗೆ ಬಾಲಕಿಯರು ಅವಿತುಕೊಂಡಿದ್ದರು. ಅರ್ಧ ಗಂಟೆ ಕಳೆದರೂ ಹೊರಬರದ ಕಾರಣ ಹುಡುಕಾಡಿ, ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಇಬ್ಬರು ಕೂಡ ಸಾವನ್ನಪ್ಪಿದ ರೀತಿ ಪತ್ತೆಯಾಗಿದ್ದರು.
ನಂಜನಗೂಡು ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸ್ ದೂರು ದಾಖಲಿಸದೆ ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನಡೆಸಲಾಗಿದೆ. ಮಸಗೆ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Mysuru Two girls found dead in ice cream freezer box while playing games. The deceased are identified as Bagvya (12) and Kavya (7).
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm