ಬ್ರೇಕಿಂಗ್ ನ್ಯೂಸ್
18-04-22 11:09 am HK Desk news ಕರ್ನಾಟಕ
ಮೈಸೂರು, ಎ.18: ಬಿಜೆಪಿ ಸರಕಾರದಲ್ಲಿ ಲಂಚ ಮತ್ತು ಮಂಚಕ್ಕಾಗಿ ಎರಡು ವಿಕೆಟ್ ಬಿದ್ದಿದೆ. ಇನ್ನೂ ಐದು ಸಚಿವರ ವಿಕೆಟ್ ಗಳು ಲಂಚದ ಹೆಸರಲ್ಲಿ ಬೀಳಲಿದೆ. ಇವರು ಪರ್ಸೆಂಟೇಜ್ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಶ್ವರಪ್ಪ ಪುತ್ರ ಕಾಂತರಾಜು ಕಳೆದ ನಾಲ್ಕೈದು ವರ್ಷಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ 29 ಸೈಟುಗಳನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನ ಕೈಗಾರಿಕಾ ವಲಯದಲ್ಲಿ ಒಂಬತ್ತು ಸೈಟ್ ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ನಂಬರ್ ವನ್ ಆರೋಪಿ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಯನ್ನು ಪಕ್ಕದಲ್ಲರೆ ಕೂರಿಸಿಕೊಂಡು ಸುದ್ದಿಗೋಷ್ಟಿ ನಡೆಸಿ, ಶೀಘ್ರದಲ್ಲೇ ಕ್ಲೀನ್ ಚಿಟ್ ಪಡೆದು ಬರುತ್ತಾರೆಂದು ಸಮರ್ಥಿಸುತ್ತಾರೆ. ಆರೋಪಿಯನ್ನು ಪಕ್ಕದಲ್ಲೇ ಇಟ್ಟುಕೊಂಡು ಮಾತಾಡುವ ಮಂದಿ ಸಾಮಾನ್ಯ ಜನರಿಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಮೆರವಣಿಗೆ ಮಾಡುತ್ತಾ ತಾನು ತಪ್ಪು ಮಾಡಿಲ್ಲ. ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗುತ್ತೇನೆ ಎನ್ನುತ್ತಿದ್ದಾರೆ. ಇತ್ತ ಸಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಆರೋಪಿಯನ್ನು ಸಮರ್ಥಿಸಿಕೊಂಡು ಸಂಪುಟ ಸೇರುತ್ತಾರೆ ಎನ್ನುತ್ತಿದ್ದಾರೆ. ಇದರರ್ಥ ಇವರು ತನಿಖೆ ಮಾಡಿಸೋದಾ, ನಾಟಕ ಮಾಡೋದಾ ? ಆರೋಪಿಯನ್ನು ಹೊರಗೆ ಬಿಟ್ಟು ಯಾವ ತನಿಖೆ ಮಾಡುತ್ತಾರೆ. ಈಶ್ವರಪ್ಪರನ್ನು ಬಂಧಿಸದಿದ್ದರೆ ಸಾಕ್ಷ್ಯ ನಾಶ ಮಾಡುತ್ತಾರೆ. ರಾಜೀನಾಮೆ ನೀಡುವ ಸಂದರ್ಭದಲ್ಲೇ 159 ಮಂದಿಯನ್ನು ವರ್ಗಾವಣೆ ಮಾಡುತ್ತಾರೆ. ಈ ಪೈಕಿ 29 ಮಂದಿ ಮೈಸೂರಿನ ಪಿಡಿಓಗಳನ್ನು ವರ್ಗಾವಣೆ ಮಾಡಿದ್ದು ಎಷ್ಟು ಪರ್ಸೆಂಟ್ ತಗೊಂಡಿದ್ದಾರೆ ಎನ್ನೋದನ್ನು ಕೇಳಬೇಕಾಗುತ್ತದೆ. ಇವರ ವರ್ತನೆಗಳೇ ಈಶ್ವರಪ್ಪ ಭ್ರಷ್ಟ ಎನ್ನುವುದನ್ನು ತೋರಿಸುತ್ತದೆ ಎಂದು ಹರಿಹಾಯ್ದರು.
40% ಕಮೀಷನ್ ಅನ್ನುವುದು ಶುರುವಾಗಿದ್ದೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಲಾಖೆಯಿಂದ. ಕೆಲಸಕ್ಕೆ ಮುಂಚೆ 40% ಕಮೀಷನ್ ನೀಡಿದರೆ ಗುತ್ತಿಗೆ ಕೆಲಸ ಎಂಬುದನ್ನು ಮೊದಲಿಗೆ ಸುಧಾಕರ್ ಜಾರಿಗೆ ತಂದಿದ್ದು. ಅದನ್ನು ಉಳಿದವರು ಕೂಡ ಅನುಷ್ಠಾನ ಮಾಡಿದ್ದಾರೆ. ಬಿಜೆಪಿ ರಾಜ್ಯದ ಬೊಕ್ಕಸ ಲೂಟಿ ಮಾಡುತ್ತಿದ್ದು ಇದನ್ನು ನಾವು ಜನರಿಗೆ ತಿಳಿಸುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.
ಹತ್ತು ವರ್ಷದಲ್ಲಿ ಲೂಟಿ ರವಿಗೆ ಐನೂರೆಕ್ರೆ ಭೂಮಿ !
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಬಿಜೆಪಿಯಲ್ಲಿ ಕಮಿಷನ್ ದಂಧೆ ಎಷ್ಟರ ಮಟ್ಟಿಗೆ ಬೇರು ಬಿಟ್ಟಿದೆ ಎಂದರೆ ಮೈಸೂರಿನಲ್ಲಿ ಸಂಸದ-ಶಾಸಕರ ನಡುವೆ ಇದೇ ವಿಷಯಕ್ಕೆ ಭಿನ್ನಾಭಿಪ್ರಾಯ ಬಂದಿತ್ತು. ರಾಜ್ಯ ಸರಕಾರದಲ್ಲೇ ಇಲ್ಲದ ಸಿ.ಟಿ.ರವಿ ಲೂಟಿ ರವಿ ಆಗಿದ್ದಾರೆ. 10 ವರ್ಷದ ಹಿಂದೆ ಸಿ.ಟಿ.ರವಿ ಬಳಿ 19 ಎಕರೆ 3 ಗುಂಟೆ ಜಮೀನು ಇತ್ತು. ಇಂದು ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಡೆಲ್ಲಿಯಲ್ಲಿ ಆಸ್ತಿ ಮಾಡಿದ್ದಾರೆ. 400 ರಿಂದ 500 ಎಕರೆ ಜಮೀನು ಸಿ.ಟಿ.ರವಿ ಭಾವ ಸುದರ್ಶನ್ ಹೆಸರಿನಲ್ಲಿದೆ. ಎಲ್ಲಾ ಕಂಟ್ರ್ಯಾಕ್ಟ್ ಅನ್ನು ತಮ್ಮ ಭಾವ ಸುದರ್ಶನ್ ಗೆ ನೀಡುತ್ತಿದ್ದಾರೆ. ಇವರು ಜೈಲಿಗೆ ಹೋಗಿ ಬಂದಿರುವ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಅಂತವರನ್ನಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಬೇನಾಮಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ತಮ್ಮ ಭ್ರಷ್ಟಾಚಾರ ಮರೆಮಾಚಿ ಕೋಮು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
We will go to every household and create awareness among the people about BJP’s loot in the State, announced Lakshmana. Lakshman also alleged that another five BJP Ministers are indulge in corruption in the State, namely R Ashok, K R Gopalaiah, Dr C N Ashwathnarayana, Shashikala Jolle and former minister Nagesh.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm