ಬ್ರೇಕಿಂಗ್ ನ್ಯೂಸ್
11-04-22 01:46 pm HK Desk news ಕರ್ನಾಟಕ
ವಿಜಯಪುರ, ಎ.11: ಸಚಿವ ಸಂಪುಟ ಬದಲಾವಣೆ ಮಾಡ್ತಾರೋ, ಪುನರ್ ರಚನೆ ಮಾಡ್ತಾರೋ ಯಾವುದರ ಬಗ್ಗೆನೂ ಸ್ಪಷ್ಟವಾದ ಸಂದೇಶ ಕೇಂದ್ರದಿಂದ ಬಂದಿಲ್ಲ. ಈಗ ನಾವು ಏನೇ ಮಾತನಾಡಿದ್ರೂ ಅದು ಊಹಾಪೋಹ ಆಗುತ್ತದೆ. ಪಕ್ಷದ ಕಾರ್ಯಕಾರಿಣಿ ಬಳಿಕ ಒಟ್ಟಾರೆ ಒಳ್ಳೆ ಬೆಳವಣಿಗೆ ಆಗುತ್ತದೆ ಎಂದು ಬಿಜೆಪಿ ರೆಬೆಲ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ವೈಯಕ್ತಿಕ ಹಾಗೂ ಕಾರ್ಯಕಾರಿಣಿ ಕೆಲಸದ ನಿಮಿತ್ತ ನಾನು ದೆಹಲಿಗೆ ಹೋಗಿದ್ದೆ. ಮಂತ್ರಿಯಾಗಲು ಲಾಬಿ ಮಾಡೋದಕ್ಕೆ ನಾನು ದೆಹಲಿಗೆ ಹೋಗಿಲ್ಲ. ಈ ಮೊದಲೂ ಅರವಿಂದ ಬೆಲ್ಲದ ಜೊತೆ ನಾನು ದೆಹಲಿಗೆ ಹೋಗಿದ್ದೆ, ಮಂತ್ರಿಗೋಸ್ಕರ ಹೋಗಿರಲಿಲ್ಲ ಎಂದಿದ್ದಾರೆ ಯತ್ನಾಳ್. ನೀವು ಸಚಿವನಾಗಲು ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ ಎಂತೆಂಥವರನ್ನೋ ಮನೆಯಲ್ಲಿ ಕೂಡಿಸಿದೆ ಹೈಕಮಾಂಡ್, ಇನ್ನು ವಿಜಯೇಂದ್ರ ಯಾವ ಗಿಡದ ತೊಪ್ಪಲು. ನನ್ನಿಂದ ಬಿಜೆಪಿ ಎನ್ನುವವರನ್ನೇ ಮನೆಯಲ್ಲಿ ಕೂಡಿಸಿದ್ದಾರೆ, ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ. ಬಿಜೆಪಿಯಲ್ಲಿ ಇನ್ಮುಂದೆ ವಂಶ ಪಾರಂಪರೆಗೆ ಅವಕಾಶವಿಲ್ಲ. ಪರಿವಾರ ವಾದ್ ಬಿಜೆಪಿಯಲ್ಲಿ ನಡೆಯಲ್ಲ ಎಂದು ಎಂದು ಪ್ರಧಾನ ಮಂತ್ರಿಗಳು ನಾಲ್ಕೈದು ಬಾರಿ ಹೇಳಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೆಟ್ ಕೊಡುವ ಕಾಲ ಬಿಜೆಪಿಯಲ್ಲಿ ಹೋಯ್ತು.

ಮೊನ್ನೆ ಉತ್ತರ ಪ್ರದೇಶದಲ್ಲಿ ಈ ಪ್ರಯೋಗ ಆಗಿದೆ. ಅಪ್ಪನ ಜಾಗ ನನಗೆ ಬೇಕು, ಅಪ್ಪನ ಜಾಗ ನನಗೆ ಕೊಡಿ ಎನ್ನುವುದು ಇನ್ಮುಂದೆ ಯಾವುದು ಉಳಿಯಲ್ಲ ಎಂಬ ವಿಶ್ವಾಸ ನನಗಿದೆ. ಆ ಭ್ರಮೆಯಲ್ಲಿ ಇರುವುದಕ್ಕಿಂದ ಈಗೇನಾದ್ರೂ ಉದ್ಯೋಗ ಮಾಡಿಕೊಂಡಿದ್ರೆ ಅದರಲ್ಲೇ ಮುಂದುವರೆಯುವುದು ಒಳ್ಳೆಯದು ಎಂದು ಯಡಿಯೂರಪ್ಪ ಮತ್ತು ಅವರ ಪುತ್ರನಿಗೆ ಟಾಂಗ್ ನೀಡಿದ್ದಾರೆ.
Karnataka Yatnal talks about cabinet expansion and surgery.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm