ಬ್ರೇಕಿಂಗ್ ನ್ಯೂಸ್
06-04-22 01:06 pm HK Desk news ಕರ್ನಾಟಕ
ತುಮಕೂರು, ಎ.6 : ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಹೇಳಿರೋದು ನೂರಕ್ಕೆ ನೂರು ಸತ್ಯ. ನಾನು ಮಾಲಿನ್ಯ ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೈಕ್ ಗಳನ್ನ ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ. ಇದು ಹಿಂದು ರಾಷ್ಟ್ರ, ಪಾಕಿಸ್ತಾನ ಅಲ್ಲ.. ಇಲ್ಲಿ ನಮ್ಮ ಕಾನೂನಿಗೆ ಬೆಲೆ ಕೊಡಬೇಕು ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಸೊಗಡು ಶಿವಣ್ಣ ಹೇಳಿದ್ದಾರೆ.
ಈ ಮೈಕ್ ಗಳ ಶಬ್ಧದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ. ತುಮಕೂರು ನಗರದ ಸದಾಶಿವ ನಗರ, ಜಯಪುರದಲ್ಲಿ ಆಜ಼ಾನ್ ಕಾಟದಿಂದ ಹಿಂದೂಗಳು ಮನೆ ತೊರೆದಿದ್ದಾರೆ. ಮನೆಗಳನ್ನ ಮಾರಾಟ ಮಾಡುತ್ತಿದ್ದಾರೆ. ಎಲ್ಲ ಬಿಟ್ಟು ಹಿಂದೂಗಳು ನಮ್ಮ ಸ್ಮಶಾನಕ್ಕೆ ಹೋಗಿ ವಿಧಿವಿಧಾನ ಮಾಡುವ ವೇಳೆಯೂ ಆಜ಼ಾನ್ ಕೂಗುತ್ತಿದ್ದು ನಮಗೆ ತೊಂದರೆ ಆಗುತ್ತಿದೆ.

ಈ ನೀತಿಯನ್ನು ನೀವು ಹಿಂದೆಯೇ ಯಾಕೆ ತಂದಿಲ್ಲ ಎಂಬ ಪ್ರಶ್ನೆಗೆ, ಹಿಂದೆ 70 ವರ್ಷ ಆಳಿದವರು ಪಾಪಿಗಳು. ಅವರು ಸಮಾಜದಲ್ಲಿ ಜಾತಿ ವಿಂಗಡಣೆ ಮಾತ್ರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಈಗ ಹಿಜಾಬ್ ಹಿಡಿದುಕೊಂಡಿದ್ದಾರೆ, ಸಿದ್ದರಾಮಯ್ಯ ಹಲಾಲ್ ಹಿಡ್ಕೊಂಡಿದ್ದಾರೆ. ಇನ್ನೊಬ್ಬರು ಮಾವಿನಹಣ್ಣು ಹಿಡ್ಕೊಂಡಿದ್ದಾರೆ. ಇವರು ಮೊದಲು ಶಬ್ಧ ಮಾಲಿನ್ಯ ತಡೆಗಟ್ಟಲಿ. ದೇವಸ್ಥಾನದಲ್ಲೂ ಮೈಕ್ ಗಳನ್ನ ಶಬ್ಧ ಮಾಲಿನ್ಯ ಆಗದಂತೆ ಹಾಕಿಕೊಳ್ಳಲಿ.
ಸುಪ್ರೀಂ ಆದೇಶ ಯಥಾವತ್ತು ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಇದು ಪಾಕಿಸ್ಥಾನ ಅಲ್ಲ ಹಿಂದೂ ರಾಷ್ಟ್ರ. ಇಲ್ಲಿ ಹಿಂದೂ ಕಾನೂನು ಇರಬೇಕು ಎಂದು ತುಮಕೂರಿನಲ್ಲಿ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ದೇಶ ವಿಭಜನೆ ಮಾಡೋಕೆ ಹೊರಟಿದ್ದಾರೆ. ಮಾವಿನಹಣ್ಣನ್ನ ನಮ್ಮವರು ಬೆಳೆಯೋದು, ಅವರು ಮಾರಿ ಲಾಭ ಮಾಡಿಕೊಳ್ಳುವುದು. ಹೈಕೋರ್ಟ್ ತೀರ್ಪಿನ ವಿರುದ್ಧ ಇವರ ಅಂಗಡಿ ಬಂದ್ ಮಾಡಿದ್ರು. ಇದ್ರಿಂದ ನಮ್ಮವರಿಗೂ ಲಾಸ್ ಆಗಿದೆ. ರೇಷ್ಮೆ ಮಾರ್ಕೇಟ್ ಗಳೂ ಬಂದ್ ಆಗಿದ್ದವು. ಇದರಿಂದ ನಮ್ಮವರಿಗೆ ತುಂಬಾ ತೊಂದರೆ ಆಯ್ತು. ರೇಷ್ಮೆ ಗೂಡುಗಳು ನಾಶ ಆದವು. ಹಾಗಾಗಿ ಇವರು ಮಾವಿನ ಹಣ್ಣನ್ನೂ ಮಾರಲು ಬರಬಾರದು, ನಮ್ಮವರೇ ಮಾರಲಿ, ಸಾಕು. ಮುಸಲ್ಮಾನರು ಮಾವಿನಹಣ್ಣನ್ನ ಖರೀದಿ ಮಾಡದೆ ಇದ್ರೆ ರೈತರೇನೂ ಕಂಗಾಲು ಆಗಲ್ಲ. ರೈತರಿಂದ ನಮ್ಮವರೇ ಖರೀದಿ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿ. ಮುಸಲ್ಮಾನರು ಯಾಕೆ ಪೌರ ಕಾರ್ಮಿಕರ ಕೆಲಸ ಮಾಡಲ್ಲ,ನಮ್ಮವರೇ ಯಾಕೆ ಮಾಡ್ಬೇಕು. ನಮ್ಮವರು ಮುಸಲ್ಮಾನರ ಕಸ ಗುಡಿಸೋದು, ಶೌಚ ಕ್ಲೀನ್ ಮಾಡೋದು ಮಾಡ್ತಾರೆ. ಮುಸಲ್ಮಾನರು ಸಹ ಪೌರಕಾರ್ಮಿಕರ ತರ ಕೆಲಸ ಮಾಡಲಿ ಎಂದು ಸೊಗಡು ಶಿವಣ್ಣ ಪ್ರಲಾಪ ತೋಡಿಕೊಂಡಿದ್ದಾರೆ.
India is a land of Hindus and not Muslims, azan is creating disturbances to Hindu houses slams Sogadu Shivanna in Tumakuru.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm