ಬ್ರೇಕಿಂಗ್ ನ್ಯೂಸ್
26-02-22 12:12 pm HK Desk news ಕರ್ನಾಟಕ
ಚಿತ್ರದುರ್ಗ, ಫೆ.26 : ಉಕ್ರೇನ್ ಮೇಲೆ ರಷ್ಯನ್ನರ ದಾಳಿಯಿಂದಾಗಿ ಅಲ್ಲಿನ ಜನರು ಕಂಗೆಟ್ಟು ಹೋಗಿದ್ದಾರೆ. ಬಾಂಬುಗಳ ಸುರಿಮಳೆಯಿಂದ ಜೀವ ಉಳಿಸಲು ದಿಕ್ಕಾಪಾಲಾಗಿ ತೆರಳುತ್ತಿದ್ದಾರೆ. ಇದರ ನಡುವೆ, ಅಲ್ಲಿ ಸಿಕ್ಕಿಬಿದ್ದಿರುವ ಭಾರತೀಯರು ಕೂಡ ಜೀವ ಉಳಿಸುವುದಕ್ಕಾಗಿ ಸಿಕ್ಕ ಸಿಕ್ಕಲ್ಲಿ ತೆರಳುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಇಬ್ಬರು ವಿದ್ಯಾರ್ಥಿಗಳು ಯುದ್ಧ ಭೀತಿಯಲ್ಲಿ ಸಂದಿಗ್ಧ ಸ್ಥಿತಿಗೆ ತಲುಪಿದ್ದು ಅನ್ನ, ನೀರು ಇಲ್ಲದೆ ಜೀವ ಕೈಯಲ್ಲಿ ಹಿಡಿದು ರಸ್ತೆ ಮಾರ್ಗದಲ್ಲಿಯೇ ತಾಯ್ನಾಡಿನತ್ತ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ.
ಹಿರಿಯೂರು ನಗರದ ಶೇಖರ್ ಎಂಬವರ ಪುತ್ರಿ ಶಕ್ತಿಶ್ರೀ ಡಿಸೆಂಬರ್ ತಿಂಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲೆಂದು ಉಕ್ರೇನ್ ದೇಶದ ಝಪೋರಿಝಿಯಾ ರಾಜ್ಯದ ಚರ್ನವಿಕ್ಸ್ ನಗರಕ್ಕೆ ತೆರಳಿದ್ದರು. ಈಗ ಉಕ್ರೇನ್ ಮೇಲಿನ ದಾಳಿಗೊಳಗಾಗಿ ಶಕ್ತಿಶ್ರೀ ಅವರು ಭಾರತಕ್ಕೆ ವಾಪಸ್ ಬರುವುದಕ್ಕಾಗಿ ಇಪ್ಪತ್ತು ಗಂಟೆಯಿಂದ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಕುಡಿಯಲು ನೀರಿಲ್ಲ. ತಿನ್ನಲು ಊಟ, ಉಪಹಾರ ಯಾವುದೂ ಇಲ್ಲದೆ ಕೇವಲ ಒಂದು ಬಾಟಲಿ ತಂಪು ಪಾನೀಯವನ್ನೇ ಜೊತೆಗಿಟ್ಟುಕೊಂಡು ಅಲ್ಲಿಂದ ಪಾರಾಗಿ ಬರಲು ಮುಂದಾಗಿದ್ದಾರೆ. ಇತ್ತ ಶಕ್ತಿಶ್ರೀ ಕುಟುಂಬದ ಸದಸ್ಯರು ಆತಂಕಗೊಂಡಿದ್ದು ಮಗಳ ಬರುವಿಕೆಗಾಗಿ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ಶಕ್ತಿಶ್ರೀ ತಾಯಿ ಸೆಲ್ವಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಬುಧವಾರ ರಾತ್ರಿಯೇ ವಿದ್ಯಾರ್ಥಿ ನಿಲಯದಿಂದ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ರಾತ್ರಿ 10 ಗಂಟೆಯ ಸುಮಾರಿಗೆ ಬಸ್ಸಿನಲ್ಲಿ ಬೋರಿ ಸ್ಪಿಲ್ ಇಂಟರ್ನ್ಯಾಷನಲ್ ಏರ್ಪೋರ್ಟಿಗೆ ಹೊರಟಿದ್ದರು. ಗುರುವಾರ ಬೆಳಗ್ಗೆ ಚೆಕ್ಕಿಂಗ್ ಆಗುವ ಮುನ್ನವೇ ಅದೇ ಜಾಗದಲ್ಲಿ ಬಾಂಬ್ ಸ್ಪೋಟವಾಗಿದ್ದರಿಂದ ಬಸ್ಸಿನಲ್ಲೇ ವಾಪಾಸ್ ಕಳುಹಿಸಲಾಗಿತ್ತು. ಗುರುವಾರ ಬೆಳಗ್ಗೆ 7.30 ರ ಸುಮಾರಿಗೆ ಹೊರಟ ಬಸ್ ಇನ್ನೂ ಹಾಸ್ಟೆಲ್ ತಲುಪಿಲ್ಲ. ಸುಮಾರು 450 ಕಿ.ಮೀ. ದೂರದ ಮಾರ್ಗ ಮಧ್ಯದಲ್ಲಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು ಸತತ ಇಪ್ಪತ್ತು ಗಂಟೆ ಪ್ರಯಾಣದಲ್ಲಿಯೇ ಮಗಳು ಇದ್ದಾಳೆ. ಆನಂತರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಗಳ ಸ್ಥಿತಿ ನೆನೆದು ಆತಂಕ ವ್ಯಕ್ತಪಡಿಸಿದರು.
ನಡೆದುಕೊಂಡೇ ಪೋಲೆಂಡ್ ಸೇರಿದ ಪಟ್ರೆಹಳ್ಳಿಯ ವಿಷ್ಣು !
ಇದೇ ವೇಳೆ, ಕೆಲವು ಕನ್ನಡಿಗ ವಿದ್ಯಾರ್ಥಿಗಳು ಪೋಲೆಂಡಿಗೆ ತೆರಳಿ, ಅಲ್ಲಿಂದ ಭಾರತಕ್ಕೆ ಬರಲು ಯತ್ನಿಸುತ್ತಿದ್ದಾರೆ. ಉಕ್ರೇನಲ್ಲಿ ಸದ್ಯಕ್ಕೆ ಪ್ಯಾಸೆಂಜರ್ ವಿಮಾನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಭಾರತದ ವಿಮಾನ ಪೋಲೆಂಡ್ ಇನ್ನಿತರ ಆಸುಪಾಸಿನ ದೇಶಗಳಿಗೆ ತೆರಳಿ, ಉಕ್ರೇನ್ ಸಂತ್ರಸ್ತರನ್ನು ತೆರವು ಮಾಡಲು ಮುಂದಾಗಿದೆ. ಚಿತ್ರದುರ್ಗ ಜಿಲ್ಲೆಯ ಪಟ್ರೆಹಳ್ಳಿಯ ನಿವಾಸಿ ವಿಷ್ಣು ಎಂಬವರು ಈ ಪ್ರತಿಕ್ರಿಯಿಸಿ, ನಾವು ತವರಿಗೆ ಹಿಂತಿರುಗಲು ಎಲ್ಲ ಸಿದ್ಧತೆ ನಡೆಸಿದ್ದೆವು. ಅಷ್ಟೊತ್ತಿಗೆ ಯುದ್ಧ ಪ್ರಾರಂಭವಾಯಿತು. ನಾವು ನಾಲ್ಕೈದು ಸ್ನೇಹಿತರು ಸೇರಿ ಉಕ್ರೇನ್ ಕ್ಯಾಬ್ ಮಾಡಿಕೊಂಡು ಪೋಲೆಂಡ್ ಗಡಿಯತ್ತ ತೆರಳಿದೆವು. ಆದರೆ ಅಷ್ಟರಲ್ಲೇ ತುಂಬಾ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಉಂಟಾಯಿತು. ಕ್ಯಾಬ್ ಡ್ರೈವರ್ ಇನ್ನೂ ಹತ್ತು ಕಿಲೋಮೀಟರ್ ದೂರ ಪೋಲೆಂಡ್ ಇರುವಂತೆ ಇಳಿಸಿ ಬಿಟ್ಟ. ನಾವು 10 ಕಿಲೋಮೀಟರ್ ದೂರದ ಪೋಲೆಂಡ್ ಗೆ ನಡೆದು ಕೊಂಡೇ ಹೋಗ್ತೀದಿವಿ ಎಂದು ಹೇಳಿದ್ದಾರೆ.
Three MBBS students, Vinay Kallihal, Abeed Ali and Praveen Badami from Davanagere, and Suneha from Chitradurga and Nazilla from Hubballi are also stranded in Kharkiv. Vinay’s father KB Rudresh said his son was in the hostel and safe. “We are calling them every hour to ensure that they are safe,” he said. Soukat Ali, the father of Abeed, said he had booked a ticket for February 25 to come back, but all flights were cancelled.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am