ಬ್ರೇಕಿಂಗ್ ನ್ಯೂಸ್
25-02-22 10:19 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.25 : ಉಡುಪಿ ಕಾಲೇಜಿನಲ್ಲಿ ವಿವಾದ ಉಂಟಾದ ಬಳಿಕ ಹಿಜಾಬ್ ಧರಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ವಿಚಾರಣೆಯನ್ನ ಹೈಕೋರ್ಟ್ ಕಡೆಗೂ ಮುಕ್ತಾಯಗೊಳಿಸಿದೆ. 11 ದಿನಗಳಿಂದ ನಿರಂತರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
11 ದಿನಗಳಿಂದ ನಿರಂತರವಾಗಿ ಅರ್ಜಿದಾರರ ಪರ ವಕೀಲರು ಹಾಗೂ ಶಿಕ್ಷಕರ ಪರ ವಕೀಲರು, ಕಾಲೇಜು ಆಡಳಿತ ಮಂಡಳಿ ಪರ ವಕೀಲರ ವಾದ ಹಾಗೂ ಸರ್ಕಾರದ ಪರ ನಡೆಸಿದ ಅಡ್ವೊಕೇಟ್ ಜನರಲ್ ಪ್ರತಿವಾದ ಆಲಿಸಿದ ಹೈಕೋರ್ಟ್ ತ್ರಿಸದಸ್ಯ ಪೀಠ ಅಂತಿಮವಾಗಿ ಇಂದು ಪಿಐಎಲ್ ಸಲ್ಲಿಸಿದ್ದ ವಕೀಲರಿಗೆ ವಾದ ಮಂಡಿಸಲು ಅವಕಾಶ ಮಾಡಿಕೊಟ್ಟಿತ್ತು.
)
ಈ ಹಿನ್ನೆಲೆ ರೆಹಮತ್ತುಲ್ಲಾ ಕೊತ್ವಾಲ್ ಹಿಜಾಬ್ ಧರಿಸೋದಕ್ಕೆ ಅವಕಾಶ ಕೋರಿ ವಾದ ಮಂಡಿಸಿದ್ರು. ಜೊತೆಗೆ ಹಿರಿಯ ವಕೀಲರಾದ ರವಿವರ್ಮಕುಮಾರ್ ಕೂಡ ವಾದ ಮಂಡಿಸಿದರು. ಕಾಲೇಜು ಅಭಿವೃದ್ದಿ ಸಮಿತಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ. ಹಾಗೆಂದು ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಸಿಡಿಸಿಯ ಇತರೇ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಕಾಲೇಜುಗಳಲ್ಲಿ 12 ಜನರ ಸಮಿತಿಯಲ್ಲಿ 11 ಮಂದಿ ಶಾಸಕರ ಕಡೆಯವರೇ ಇದ್ದು ಶಾಸಕರ ತೀರ್ಮಾನವನ್ನು ಜಾರಿ ಮಾಡುವುದಷ್ಟೇ ಇವರ ಕೆಲಸ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ ಎಂದು ರವಿವರ್ಮ ಕುಮಾರ್ ವಾದಿಸಿದರು.
ಇದಾದ ಬಳಿಕ ಹಿರಿಯ ವಕೀಲ ಬಾಲನ್ ಸಹ ಹಿಜಾಬ್ ಪರ ವಾದ ಮಂಡಿಸಿದ್ದು, ವಿಷಯ ಡೈವರ್ಟ್ ಮಾಡಿದ ಹಿನ್ನೆಲೆಯಲ್ಲಿ ಬಾಲನ್ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಾಲಯ ಮತ್ತೊಬ್ಬ ಅರ್ಜಿದಾರರಾದ ಸುಭಾಷ್ ಝಾಗೆ ವಾದ ಮಂಡಿಸಲು ಅವಕಾಶ ಮಾಡಿಕೊಟ್ಟಿತ್ತು. ಕೊಟ್ಟ ಅಲ್ಪ ಸಮಯದಲ್ಲಿ ಅಲಹಾಬಾದ್, ಕೇರಳ ಹಾಗೂ ಬಾಂಬೆ ಹೈಕೋರ್ಟ್ ತೀರ್ಪುಗಳನ್ನ ಉಲ್ಲೇಖಿಸಿದ ಸುಭಾಷ್ ಝಾ ಸಮವಸ್ತ್ರ ಹಾಗೂ ಹಿಜಾಬ್ ಬಗ್ಗೆ ಕೆಲವು ದಾಖಲೆಗಳನ್ನ ಸಲ್ಲಿಸಿ ವಾದ ಮಂಡಿಸಿದ್ರು. ಹೀಗೆ ಸರಿ ಸುಮಾರು ಎರಡುವರೆ ಗಂಟೆಗಳ ಕಾಲ ನಡೆದ ವಾದ ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ಮುಕ್ತಾಯಗೊಳಿಸುವುದಾಗಿ ಹೇಳಿದ್ದು ತೀರ್ಪನ್ನ ಕಾಯ್ದಿರಿಸಿದೆ. ಇದಲ್ಲದೆ, ಕೆಲವು ಮಧ್ಯಂತರ ಅರ್ಜಿದಾರರಿಗೆ ಲಿಖಿತ ವಾದ ಮಂಡಿಸಲು ಅವಕಾಶ ನೀಡಿದ್ದು, ಅವುಗಳ ಪರಿಶೀಲನೆ ಬಳಿಕ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
The Karnataka High Court reserved its judgment in the hijab case after 11 days of back-to-back hearing on Friday. The hearing for the hijab case resumed at 2:30 pm in the Karnataka High Court.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm