ಬ್ರೇಕಿಂಗ್ ನ್ಯೂಸ್
24-02-22 08:31 pm HK Desk news ಕರ್ನಾಟಕ
ಹಾವೇರಿ, ಫೆ.24 : ಸಿಎಂ ತವರು ಜಿಲ್ಲೆ ಹಾವೇರಿಯ ಎಂಟು ಮಂದಿ ವಿದ್ಯಾರ್ಥಿಗಳು ಯುದ್ಧ ಭೀತಿಯಲ್ಲಿರುವ ಉಕ್ರೇನ್ ದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದು ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದು ರಕ್ಷಣೆಗೆ ಸರಕಾರದ ಮೊರೆ ಇಟ್ಟಿದ್ದಾರೆ.
ಮೂರು ತಿಂಗಳ ಹಿಂದೆ ರಾಣೆ ಬೆನ್ನೂರಿನ ಪ್ರವೀಣ ಅಜರೆಡ್ಡಿ ಉಕ್ರೇನ್ ತೆರಳಿದ್ದು ಆತನ ಪೋಷಕರು ತಮ್ಮ ಮಗನನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಾರ್ಖೀವ್ ನಗರದಲ್ಲಿ ಪ್ರವೀಣ್ ಎಂಬಿಬಿಎಸ್ ಕಲಿಯುತ್ತಿದ್ದಾನೆ. ಪ್ರವೀಣ ವಾಸವಿರುವ ಜಾಗ ರಷ್ಯಾದಿಂದ 40 ಕಿಮೀ ದೂರದ ಗಡಿಯಲ್ಲಿದ್ದು ಮನೆಯವರು ಆತಂಕದಲ್ಲಿದ್ದಾರೆ. ಜೊತೆಗೆ ಮಗನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇದಲ್ಲದೆ, ರಾಣೆಬೆನ್ನೂರು ತಾಲೂಕಿನ ಏಳು ವಿದ್ಯಾರ್ಥಿಗಳು ಉಕ್ರೇನಲ್ಲಿದ್ದಾರೆಂಬ ಮಾಹಿತಿಯಿದೆ. ಬ್ಯಾಡಗಿ ತಾಲೂಕಿನ ಒಬ್ಬ ವಿದ್ಯಾರ್ಥಿ ಉಕ್ರೇನ್ ದೇಶದಲ್ಲಿ ಸಿಲುಕಿದ್ದಾನೆ. ಸುಮನ್ ವೈಶಾಯರ್, ರಂಜಿತ ಕಲಕಟ್ಟಿ, ಅಮೀತ್ ವೈಶಾಯರ್, ನವೀನ ಗ್ಯಾನಗೌಡರ, ಜೈನ್ ನತುಲ್, ವಸಂತಕುಮಾರ, ಶಿವಲಿಂಗಪ್ಪ ಮತ್ತು ಪ್ರವೀಣ ಅಜರೆಡ್ಡಿ ಎಂಬ ಎಂಟು ವಿದ್ಯಾರ್ಥಿಗಳು ಉಕ್ರೇನಲ್ಲಿದ್ದು ಪೋಷಕರ ಜೊತೆ ಮಾತನಾಡಿದ್ದಾರೆ.
ಮಕ್ಕಳ ಜೊತೆ ವಿಡಿಯೋ ಕಾಲ್ ಮಾಡಿ ಪರಿಸ್ಥಿತಿ ಬಗ್ಗೆ ವಿಚಾರಿಸ್ತಿರುವ ಪೋಷಕರು, ಹೊರಗೆ ಹೋಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಇವರೆಲ್ಲ ಕಾರ್ಕೀವ್ ಇಂಟರ್ ನ್ಯಾಶನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡ್ತಿದಾರೆ. ಸಿಎಂ ತವರು ಜಿಲ್ಲೆಯವರೇ ಎಂಟು ಮಂದಿ ಉಕ್ರೇನಲ್ಲಿ ಸಿಲುಕಿದ್ದು ಮಕ್ಕಳ ರಕ್ಷಣೆಗಾಗಿ ಪೋಷಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
Karnataka Six students of Haveri standard in Ukraine.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm