ಬ್ರೇಕಿಂಗ್ ನ್ಯೂಸ್
22-02-22 11:19 pm HK Desk news ಕರ್ನಾಟಕ
ಶಿವಮೊಗ್ಗ, ಫೆ.22 : ಈ ರೀತಿ ಸರಣಿಯಾಗಿ ಹಿಂದು ಕಾರ್ಯಕರ್ತರ ಕೊಲೆಯಾಗುವುದನ್ನು ನೋಡಿದರೆ, ನಮ್ಮ ರಕ್ಷಣೆಯನ್ನು ನೀವು ಮಾಡುತ್ತೀರಾ.. ಇಲ್ಲಾ ನಾವೇ ಮಾಡಿಕೊಳ್ಳಬೇಕಾ ಎಂಬ ಪ್ರಶ್ನೆ ಬರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಗೃಹ ಸಚಿವರನ್ನು ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಮನೆಗೆ ಆಗಮಿಸಿ ಮಾಧ್ಯಮಕ್ಕೆ ಮಾತನಾಡಿದ ಅವರು, ಹಿಜಬ್ ವಿರುದ್ಧ ಹರ್ಷ ಗಲಾಟೆ ಮಾಡುತ್ತಿದ್ದರಿಂದ ಕೊಂದಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದರ ಹಿಂದಿನ ಸತ್ಯವನ್ನು ಬಯಲಿಗೆ ಎಳೆಯಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲಿಲ್ಲ ಎಂದರೆ ಮುಂದೆ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ. ಇಂತಹ ಘಟನೆಗಳನ್ನು ತಡೆಯಬೇಕು ಎಂಬುದು ಸರ್ಕಾರಕ್ಕೆ ಅರಿವಾಗಬೇಕು. ಹಿಂದುಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು ಇನ್ನೂ ಹಿಂದೂಗಳ ಸಮಾಧಿಗೆ ಕಾರಣರಾಗುತ್ತಿದ್ದಾರೆ ಎಂದರೆ ಇದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಭಾರತದಲ್ಲಿ ವಹಾಬಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. 2% ಇದ್ದದ್ದು, 25% ಆಗಿದೆ ಎಂದು ಮುಸಲ್ಮಾನರೇ ಹೇಳುತ್ತಿದ್ದಾರೆ. ಇದು ಬಹಳ ಅಪಾಯಕಾರಿ ಸಂಗತಿ. ಮುಂದೆ ಇದರಿಂದ ದಂಗೆ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.

ಗೃಹ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿ ಆಗಿರುವುದು ದುರದೃಷ್ಟಕರ. ಹಾಗಾಗಿ ನೀವು ನಮ್ಮನ್ನು ರಕ್ಷಣೆ ಮಾಡುತ್ತೀರಾ ಅಥವಾ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕೋ ಎಂದು ಪ್ರಶ್ನಿಸುತ್ತೇನೆ. ನಿನ್ನೆ ಹತ್ಯೆಯಾಗಿದೆ. ಇಂದು ಶಾಂತವಾಗಿದೆ ಎಂಬುವುದು ಖುಷಿ ಪಡುವ ವಿಚಾರವೋ, ಬೇಸರದ ವಿಚಾರವೋ ಗೊತ್ತಿಲ್ಲ. ಹರ್ಷನ ಹತ್ಯೆ 6 ತಿಂಗಳಾದರೂ ಮರೆಯಾಗುವುದಿಲ್ಲ. ಆತನ ಸಾವಿಗೆ ಪರಿಹಾರ ಕೊಡುತ್ತೇವೆ ಅಂದರೆ ಮಾತ್ರ ಇದನ್ನು ಮುಕ್ತಾಯಗೊಳಿಸಬಹುದು. ಇಲ್ಲವಾದರೆ 3-4 ತಿಂಗಳಿಗೊಮ್ಮೆ ಈ ರೀತಿಯ ಹತ್ಯೆ ಮರುಕಳಿಸುತ್ತಿರುತ್ತದೆ ಎಂದು ಹೇಳಿದ್ದಾರೆ.
ಹಿಂದೂ ಹೆಸರು ಹೇಳಿಕೊಂಡು ಆಚೆ ಬರುವವರು ಹೆದರಿಕೊಳ್ಳಬೇಕು. ಹಿಂದೂಗಳು ಮನೆಯಲ್ಲಿ ಇರಬೇಕು ಎಂಬುವುದು ಮುಸಲ್ಮಾನರ ಉದ್ದೇಶ. ಅಕ್ಬರ್, ಬಾಬರ್ ಅದೇ ಕಾಲಕ್ಕೆ ನಾವು ಮರಳುತ್ತಿದ್ದೇವೆ ಎಂದರೆ ಏನು ಅರ್ಥ. ಈ ವಿಚಾರ ಇನ್ನೂ ವ್ಯಾಪಕವಾಗಬೇಕು. ಸರ್ಕಾರ ಏನೇ ಹೇಳಿದರೂ ಯಾವುದು ಸಮಾಧಾನ ನೀಡುವುದಿಲ್ಲ. ಈ ಘಟನೆಗೆ ಸೂಕ್ತವಾದ ಪರಿಹಾರ ನೀಡಿದಾಗ ಮಾತ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದಿದ್ದಾರೆ.
Chakravarti Sulibele questions govt of safety after murder of Harsha in Shivamogga. speaking to media persons after meeting the family he slammed the govt questioning if Hindus Youths should safeguard themselves or not.
03-03-26 08:39 pm
HK News Staffer
ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು ಕೊಲ್ಲಿ...
03-03-26 08:37 pm
ತಮ್ಮದೇ ಶಾಸಕರ ಫೋನ್ ಕದ್ದಾಲಿಕೆ - ಡಿಕೆಶಿ ಬಗ್ಗೆ ಎಚ...
03-03-26 08:25 pm
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
03-03-26 09:33 pm
HK News Staffer
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
ನಾಲ್ಕು ವರ್ಷಗಳ ಪ್ರೀತಿ ನಿರಾಕರಿಸಿದ ಪ್ರೇಯಸಿ; ವಿರಸ...
03-03-26 10:37 am
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm