ಬ್ರೇಕಿಂಗ್ ನ್ಯೂಸ್
21-02-22 03:25 pm HK News Desk ಕರ್ನಾಟಕ
ಬೆಂಗಳೂರು, ಫೆ.21: ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಗೂಂಡಾ ವರ್ತನೆಗೆ ಇನ್ನೆಷ್ಟು ಕಾರ್ಯಕರ್ತರು ಬಲಿಯಾಗಬೇಕ್ರೀ.. ಕಳೆದ ಬಾರಿ ನೀವು ವಿರೋಧ ಪಕ್ಷದಲ್ಲಿದ್ದಾಗ ಬ್ಯಾನ್ ಮಾಡುವಂತೆ ಆಗ್ರಹ ಮಾಡುತ್ತಿದ್ದೀರಲ್ಲಾ.. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯದ್ದೇ ಸರಕಾರ ಇದೆ.. ಈಗ ನಿಷೇಧ ಮಾಡಲು ನಿಮಗೇನ್ರೀ ರೋಗ ಎಂದು ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹರ್ಷ ಒಬ್ಬ ಅಪ್ಪಟ ಹಿಂದು ಕಾರ್ಯಕರ್ತ. ಕಳೆದ ಐದು ವರ್ಷಗಳಿಂದ ಆತ ಗೋರಕ್ಷಣೆ, ಹಿಂದು ಪರ ಕೆಲಸ ಮಾಡಿಕೊಂಡು ಬಂದಿದ್ದ. ಒಬ್ಬ ಬಡ ಟೈಲರನ ಒಬ್ಬ ಮಗ. ಆತನನ್ನು ಗುರಿಯಾಗಿಸ್ಕೊಂಡು ಹತ್ಯೆ ಮಾಡಿದ್ದಾರೆ. ಹರ್ಷನನ್ನು ಕೊಲೆ ಮಾಡುವುದಕ್ಕೆ ಹಲವು ಬಾರಿ ಪ್ರಯತ್ನ ನಡೆದಿತ್ತು. ದುಷ್ಕರ್ಮಿಗಳು ನಿನ್ನೆ ರಾತ್ರಿ ಹೊಂಚು ಹಾಕಿ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಬೇರಾವುದೇ ವೈಯಕ್ತಿಕ ಕಾರಣಗಳಿಲ್ಲ. ಹಿಜಾಬ್ ಗಲಾಟೆಯ ಹಿಂದಿನ ಶಕ್ತಿಗಳೇ ಈ ಕೊಲೆಯನ್ನು ಮಾಡಿದ್ದಾರೆ.


ಇಂಥ ಕೊಲೆ ಸರಣಿ ಮುಂದೆ ನಡೀಬಾರ್ದು. ಇದಕ್ಕಾಗಿ ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಿ. ಬಿಜೆಪಿಗೆ ತಾಕತ್ತಿದ್ದರೆ ಇದನ್ನು ಮಾಡಿ ಎಂದು ಸವಾಲು ಹಾಕುತ್ತೇನೆ. ಪಾಪದ ಕಾರ್ಯಕರ್ತರನ್ನು ಬಲಿ ಕೊಡಬೇಡಿ. ಕೂಡಲೇ ಪ್ರಕರಣದ ಹಿಂದಿನ ಆರೋಪಿಗಳನ್ನು ಬಂಧಿಸಿ. ಅವರನ್ನು ಜಾಮೀನಿನಲ್ಲಿ ಹೊರಬರದಂತೆ ಜೈಲಿನಲ್ಲಿ ಕೂಡಿ ಹಾಕಿ. ಅಥವಾ ಅವರನ್ನು ಎನ್ಕೌಂಟರ್ ಮಾಡಿ, ಮುಂದೆ ಈ ರೀತಯ ಅಸಹನೀಯ ಸ್ಥಿತಿ ಮರುಕಳಿಸಬಾರದು ಎಂದು ಮುತಾಲಿಕ್ ಆಗ್ರಹ ಮಾಡಿದ್ದಾರೆ.

ಬಿಜೆಪಿಯವ್ರೇ ಸೇರಿ 25 ಲಕ್ಷ ಪರಿಹಾರ ಕೊಡಿ :
ಅಲ್ಲದೆ, ಹರ್ಷನ ಬಡ ಕುಟುಂಬಕ್ಕೆ ರಾಜ್ಯ ಸರಕಾರ 25 ಲಕ್ಷ ರೂ. ಪರಿಹಾರ ನೀಡಬೇಕು. ಸರಕಾರದಿಂದ ಆಗದಿದ್ದರೆ ನಿಮ್ಮ ಜೇಬಿನಿಂದ ತೆಗೆದು ಕೊಡಿ. ಮಾಜಿ ಮುಖ್ಯಮಂತ್ರಿಯ ಊರಿನಲ್ಲಿ ಈ ಕೊಲೆಯಾಗಿದೆ. ಅಲ್ಲಿಯೇ ಗೃಹ ಸಚಿವರು ಇದ್ದಾರೆ. ಸಂಸದ ಇದ್ದಾರೆ. ಇನ್ನೊಬ್ಬ ಈಶ್ವರಪ್ಪ ಅನ್ನುವ ಸಚಿವನೂ ಇದ್ದಾರೆ. ಇವರೆಲ್ಲ ಸೇರಿ ಪರಿಹಾರ ಕೊಡಲಿ. ಇಂಥ ಜಾಗದಲ್ಲಿ ಒಬ್ಬ ಬಡಪಾಯಿ ಕಾರ್ಯಕರ್ತನ ಕೊಲೆಯಾಗುತ್ತದೆ ಎಂದರೆ ಇವರೇನು ಮಾಡುತ್ತಿದ್ದಾರೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುತಾಲಿಕ್, ಈ ಮಾತುಗಳನ್ನು ಹೇಳಿದ್ದಾರೆ.
Pramod Muthalik Reacts over Shivamogga Murder, Slams BJP says why cant PFI and SDPI be banned
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm