ಬ್ರೇಕಿಂಗ್ ನ್ಯೂಸ್
18-02-22 09:55 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.18 : ಹಿಜಾಬ್ ಧರಿಸುವುದು ಇಸ್ಲಾಮಿನ ಅಗತ್ಯ ಆಚರಣೆ ಆಗಿರುವುದಿಲ್ಲ. ಇದನ್ನು ಸಮವಸ್ತ್ರದ ನೆಪದಲ್ಲಿ ಶಾಲೆಗಳಲ್ಲಿ ನಿರ್ಬಂಧಿಸುವುದು ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗಲ್ಲ ಎಂದು ರಾಜ್ಯ ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟಿನಲ್ಲಿ ವಾದಿಸಿದ್ದಾರೆ.
ಹಿಜಾಬ್ ವಿವಾದ ಕುರಿತ ಅರ್ಜಿಗಳ ಬಗ್ಗೆ ಅರ್ಜಿದಾರರ ವಾದ ಮಂಡನೆಯ ಬಳಿಕ ಇಂದು ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ನಾವದಗಿ ವಾದ ಆರಂಭಿಸಿದ್ದಾರೆ. ಶಾಲೆ, ಕಾಲೇಜುಗಳಿಗೆ ಸಮವಸ್ತ್ರ ಕುರಿತ ಸರಕಾರದ ಆದೇಶವನ್ನು ನೀವು ಸುಪ್ರೀಂ ಕೋರ್ಟ್ ಶಬರಿಮಲೆ ಮತ್ತು ಶಾಯಿರಾ ಬಾನು ತ್ರಿಬಲ್ ತಲಾಕ್ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಆಧಾರದಲ್ಲಿ ನೋಡಬೇಕು. ಹಿಜಾಬ್ ಧಾರ್ಮಿಕ ನಂಬಿಕೆಯಷ್ಟೇ ಆಗಿರುವಾಗ ಅದನ್ನು ಸಮಾನತೆ ತೋರಬೇಕಾದ ಜಾಗದಲ್ಲಿ ಹಾಕಬೇಕಾದ ಅಗತ್ಯ ಇದೆಯೇ ಎಂಬುದನ್ನು ನಿರ್ಧರಿಸಬೇಕು ಎಂದು ನಾವದಗಿ ಹೇಳಿದರು.
19-3-2013 ರಲ್ಲಿಯೇ ಶಾಲಾ ಸಮವಸ್ತ್ರದ ಬಗ್ಗೆ ಆಗಿನ ಸರಕಾರ ನಿರ್ಧಾರ ಮಾಡಿದೆ. ಕಾನೂನು ವ್ಯಾಪ್ತಿಯಡಿ ಕಾಲೇಜು ಅಭಿವೃದ್ಧಿ ಸಮಿತಿಯನ್ನು ಮಾಡಲಾಗಿತ್ತು. ಸಮಿತಿಯಲ್ಲಿ ಸದಸ್ಯರಾಗಿ ಶಾಸಕ, ಪೋಷಕರ ಪರವಾಗಿ ಒಬ್ಬರು, ವಿದ್ಯಾರ್ಥಿಯ ಪರ ಒಬ್ಬ, ಕಾಲೇಜು ಪ್ರಿನ್ಸಿಪಾಲ್, ಸೀನಿಯರ್ ಪ್ರೊಫೆಸರ್ ಒಬ್ಬರು ಇರುತ್ತಾರೆ. ಪರಿಶಿಷ್ಟ ಜಾತಿಗೆ ಸಂಬಂಧಪಟ್ಟು ಒಬ್ಬರು ಇರುತ್ತಾರೆ. ಆಯಾ ಕಾಲೇಜಿಗೆ ಯಾವ ರೀತಿಯ ಸಮವಸ್ತ್ರ ಬೇಕೆಂದು ನಿರ್ಧರಿಸಲು ಸಮಿತಿಗೆ ಕಾಲೇಜು ಶಿಕ್ಷಣ ಕಾಯ್ದೆ ಅನುವು ಕೊಡುತ್ತದೆ ಎಂದು ಹೇಳಿದರು.
ಉಡುಪಿ ಕಾಲೇಜಿನಲ್ಲಿ 1985ರಿಂದಲೂ ಸಮವಸ್ತ್ರ ಇದ್ದು 2021 ರ ವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. 8ನೇ ತರಗತಿಯಿಂದ ಸೆಕಂಡ್ ಪಿಯುಸಿ ವರೆಗೆ 956 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್ ಕೊನೆಯಲ್ಲಿ ಹಿಜಾಬ್ ಧರಿಸಿ ಬರಲು ವಿದ್ಯಾರ್ಥಿಗಳ ಪೋಷಕರು ಪ್ರಾಂಶುಪಾಲರಲ್ಲಿ ಅನುಮತಿ ಕೇಳಿದ್ದರು. ಅದರಂತೆ, ಜ.1 ರಂದು ಕಾಲೇಜು ಅಭಿವೃದ್ಧಿ ಸಮಿತಿ ಸಭೆಯನ್ನೂ ನಡೆಸಿತ್ತು. ಈ ಬಗ್ಗೆ ವಿವಾದ ಆಗುತ್ತಿದ್ದಂತೆ, ಆರು ಮಂದಿ ತಜ್ಞರಲ್ಲಿ ವರದಿ ಕೇಳಿ, ಯಥಾಸ್ಥಿತಿ ಕಾಯ್ದುಕೊಳ್ಳಲು ಸರಕಾರ ನಿರ್ಧರಿಸಿತ್ತು. ಆದರೆ ಅಷ್ಟರಲ್ಲೇ ವಿವಾದ ಬೇರೆ ಕಡೆಗೆಲ್ಲ ಹರಡಿತ್ತು. ಈ ಬಗ್ಗೆ ಸರಕಾರ ಕೊನೆಗೆ ಆದೇಶ ಹೊರಡಿಸಬೇಕಾಯ್ತು.
ಆನಂತರ ಕಾಲೇಜು ಶಿಕ್ಷಣ ಕಾಯ್ದೆ ಬಗ್ಗೆ ಕೋರ್ಟ್ ಗಮನಸೆಳೆದ ಎಜಿ, ಯಾವುದೇ ಕಾಲೇಜಿನ ಸಿಡಿಸಿ ಯುನಿಫಾರ್ಮ್ ಮಾಡಿಲ್ಲ ಅಂದ್ರೆ ಅಲ್ಲಿನ ವಿದ್ಯಾರ್ಥಿಗಳು ಧರಿಸುವ ಉಡುಪು, ಸಮಾನತೆ ಮತ್ತು ಸಾಮಾಜಿಕ ಸುವ್ಯವಸ್ಥೆಗೆ ತೊಂದರೆ ಇರದಂತೆ ಇರಬೇಕು ಎಂದಿದೆ ಕಾಯ್ದೆ. ಸಮಾನತೆ, ಒಗ್ಗಟ್ಟು, ಸಹೋದರತ್ವ ಇರುವ ಬಗ್ಗೆ ಮಾತ್ರ ಅದರಲ್ಲಿ ಹೇಳಲಾಗಿದೆ. ಆದರೆ ಈ ವಿವಾದ ಶುರುವಾಗುವ ತನಕ ಹಿಜಾಬ್ ಬಗ್ಗೆ ಒಂದೂ ಕಂಪ್ಲೇಂಟ್ ಬಂದಿರಲಿಲ್ಲ ಎಂದು ಹೇಳಿದರು.
ಸರ್ಕಾರದ ಆದೇಶದಲ್ಲಿ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ, ಇದರ ನಡುವೆ ಹಿಜಾಬ್ ಕಡ್ಡಾಯವಲ್ಲವೆಂದು ಏಕೆ ಉಲ್ಲೇಖ ಮಾಡಿದ್ದೀರಿ ಎಂದು ಸಿಜೆ, ಸರಕಾರವನ್ನು ಪ್ರಶ್ನೆ ಮಾಡಿದರು. ಸರಕಾರ ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸಿಲ್ಲ. ವಿವಾದ ದಿನೇ ದಿನೇ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು. ಹೀಗಾಗಿ ಸರಕಾರ ಆದೇಶ ಬಿಡುಗಡೆ ಮಾಡಬೇಕಾಗಿ ಬಂತು ಎಂದು ಹೇಳಿದ ಎಜಿ ನಾವದಗಿ, ಮೊದಲಿಗೆ ಸರ್ಕಾರಕ್ಕೆ ಸಮವಸ್ತ್ರ ಸಂಹಿತೆ ತರುವ ಉದ್ದೇಶವೂ ಇರಲಿಲ್ಲ. ಶಿಕ್ಷಣ ಕಾಯ್ದೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಲಾಗಿದೆ. 2014 ರಿಂದಲೂ ಕಾಲೇಜು ಅಭಿವೃದ್ಧಿ ಸಮಿತಿಗಳಿವೆ. ಈವರೆಗೂ ವಿದ್ಯಾರ್ಥಿಗಳು, ಪೋಷಕರು ಈ ಸಮಿತಿಯ ರಚನೆ ಬಗ್ಗೆ ಪ್ರಶ್ನಿಸಿಲ್ಲ ಎಂದರು.
ಒಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರನ್ನು ಕಾಲೇಜು ಸಮಿತಿ ಅಧ್ಯಕ್ಷರಾಗಿ ಮಾಡಿದರೆ ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ರಾಜ್ಯ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದರು. ಪ್ರತಿಕ್ರಿಯೆ ನೀಡಿದ ಎಜಿ, ಅದನ್ನು ಎಂಎಲ್ಎ ನಿರ್ಧಾರ ಮಾಡುವುದಲ್ಲ. ಆಯಾ ಸರಕಾರ ಮಾಡುತ್ತದೆ ಎಂದರು. ಆರ್ಟಿಕಲ್ 25(1) ಸಾಮಾಜಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯದ ಬಗ್ಗೆ ಹೇಳುತ್ತದೆ. ಹೀಗಾಗಿ ಸಂವಿಧಾನದ 25(1) ಎನ್ನುವುದು ಪರಿಪೂರ್ಣ ಹಕ್ಕಲ್ಲ. ಸರ್ಕಾರ ಕಾನೂನು ಮೂಲಕ ಇದನ್ನು ನಿರ್ಬಂಧಿಸಬಹುದು. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಬಹುದು. ಕೋವಿಡ್ ಸಂದರ್ಭದಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ನಿರ್ಬಂಧಿಸಿದ್ದು ಇದೇ ಆಧಾರದಲ್ಲಿ. ಸಾರ್ವಜನಿಕ ಆರೋಗ್ಯಕ್ಕಾಗಿ ಇಂತಹ ನಿರ್ಬಂಧಕ್ಕೆ ಅವಕಾಶವಿದೆ ಎಂದರು.
ಆತ್ಮಸಾಕ್ಷಿ ಅನ್ನೋದು ಮಾನಸಿಕ ಅಭಿಪ್ರಾಯ. ನಂಬಿಕೆಯೇ ಬೇರೆ, ಆಚರಣೆಯೇ ಬೇರೆ. ಕೆಲವರಿಗೆ ಯಾವುದೇ ಶಕ್ತಿಯ ಮೇಲೂ ನಂಬಿಕೆ ಇಲ್ಲದಿರಬಹುದು. ಆತ ಮಾನಸಿಕ ಅಭಿಪ್ರಾಯದಲ್ಲಿ ಆತ್ಮಸಾಕ್ಷಿ ಹಕ್ಕು ಹೊಂದಿರ್ತಾನೆ. ಹಿಜಾಬ್ ಒಂದು ನಂಬಿಕೆ, ಆಚರಣೆ ಮಾತ್ರ ಆಗಿದ್ದರೆ ಅದನ್ನು ಕಡ್ಡಾಯ ಕರ್ಮ ಎನ್ನುವಂತಿಲ್ಲ ಎಂದರು ಪ್ರಭುಲಿಂಗ ನಾವದಗಿ. ಹಿಜಾಬ್ ಯಾವ ರೀತಿಯ ಧಾರ್ಮಿಕ ನಂಬಿಕೆ, ಯಾಕೆ ಅತ್ಯಗತ್ಯ ಅಲ್ಲ ಎನ್ನುವ ಬಗ್ಗೆ ಸೋಮವಾರ ವಾದ ಮಂಡಿಸುತ್ತೇನೆ ಎಂದು ಎಜಿ ಹೇಳಿದರು. ಮುಖ್ಯ ನ್ಯಾಯಾಧೀಶರು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.
ಇದೇ ವೇಳೆ ಅರ್ಜಿದಾರ ವಕೀಲ ಮೊಹಮ್ಮದ್ ತಾಹಿರ್, ಹೈಕೋರ್ಟಿನ ಮಧ್ಯಂತರ ಆದೇಶವನ್ನು ಪ್ರಶ್ನೆ ಮಾಡಿದರು. ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಮ್ಮ ಆದೇಶ ಕ್ಲಿಯರ್ ಆಗಿದೆ. ಇದರಿಂದ ತೊಂದರೆ ಆಗುತ್ತಿದೆ ಎಂದಾದಲ್ಲಿ ಸರಕಾರಕ್ಕೆ ದೂರು ನೀಡಿ ಎಂದು ಸೂಚನೆ ನೀಡಿದರು.
Hearing the case of hijab (Hijab Row) on the 6th consecutive day in a three-member bench of the High Court (High Court) adjourned the next hearing to Monday, Feb 21.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 12:07 pm
HK News Desk
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm