ಬ್ರೇಕಿಂಗ್ ನ್ಯೂಸ್
06-02-22 10:59 pm HK Desk news ಕರ್ನಾಟಕ
ಬೆಂಗಳೂರು, ಫೆ.6 : ಪಬ್ ನಲ್ಲಿ ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಯುವತಿ ಹಾಗೂ ಆಕೆಯ ಸೋದರನ ಮೇಲೆ ಬೌನ್ಸರ್ ಮತ್ತು ಡಿಜೆಗಳು ಹಲ್ಲೆಗೆ ಮುಂದಾಗಿ ಆವಾಜ್ ಹಾಕಿದ ಘಟನೆ ಕೋರಮಂಗಲ 80 ಫೀಟ್ ರಸ್ತೆಯಲ್ಲಿರುವ ಬದ್ಮಾಷ್ ಪಬ್ ನಲ್ಲಿ ನಡೆದಿದೆ.
ಯುವತಿ ಸುಮಿತಾ ಹಾಗೂ ಸಹೋದರ ನಂದಕಿಶೋರ್ ಮೇಲೆ ಡಿಜೆ ಹಲ್ಲೆಗೆ ಮುಂದಾದ ಆರೋಪದಲ್ಲಿ ಬದ್ಮಾಷ್ ಪಬ್ ಡಿಜೆ ಸಿದ್ಧಾರ್ಥ್ ವಿರುದ್ಧ ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ ಸುಮಿತಾ ಎಂಬಾಕೆಯ ಹುಟ್ಟುಹಬ್ಬ ಇತ್ತು. ಬದ್ಮಾಷ್ ಪಬ್ ನಲ್ಲಿ ಹುಟ್ಟುಹಬ್ಬ ಆಚರಣೆಗೆಂದು ಆಕೆಯ ಸಹೋದರು ಹಾಗೂ ಸ್ನೇಹಿತರ 15 ಜನರ ತಂಡ ತೆರಳಿತ್ತು. ರಾತ್ರಿ 9 ಗಂಟೆಗೆ ಇವರು ಹೋಗಿದ್ದರು. ಈ ನಡುವೆ, ಕನ್ನಡ ಹಾಡು ಪ್ಲೇ ಮಾಡಿ ಎಂದು ಮನವಿ ಮಾಡಿದ್ದಾರೆ. 9.30 ರಿಂದ ರಾತ್ರಿ 12.30ರ ವರೆಗೂ ಡಿಜೆ ಸಿದ್ದಾರ್ಥ್ ಬಳಿ ಮನವಿ ಮಾಡಿದ್ದಾರೆ.
ಸ್ವತಃ ಯುವತಿ ಸುಮಿತಾ ಡಿಜೆ ಬಳಿ ತೆರಳಿ ಒಂದೇ ಒಂದು ಕನ್ನಡ ಹಾಡು ಹಾಕಿ ಎಂದು ನಾಲ್ಕೈದು ಬಾರಿ ಮನವಿ ಮಾಡಿದ್ದರು. ಅಲ್ಲದೆ, ಸುಮಿತಾಳ ಸಹೋದರ ಡಾ.ದೀಪಕ್ ಕೂಡ ಕನ್ನಡ ಹಾಡಿಗೆ ಮನವಿ ಮಾಡಿದ್ದರು. ಆದರೆ ಕನ್ನಡ ಸಾಂಗ್ ಹಾಕಲಿಕ್ಕೆ ಆಗಲ್ಲ, ಕನ್ನಡ ಸಾಂಗ್ ಕೇಳೋದಾದ್ರೆ ಹೊರಗ್ ಹೋಗಿ ಅಂತ ಡಿಜೆ ಅವಾಜ್ ಹಾಕಿದ್ದಾನೆಂದು ಸುಮಿತಾ ಆರೋಪಿಸಿದ್ದಾರೆ. ಪದೇ ಪದೇ ಕೇಳ್ತಿದ್ದಾಗ ಇವರಿದ್ದ ಟೇಬಲ್ ಬಳಿ ಬಂದ ಡಿಜೆ, ಸುಮಿತಾ ಸಹೋದರ ನಂದಕಿಶೋರ್ ಕಾಲರ್ ಹಿಡಿದು ಆವಾಜ್ ಹಾಕಿದ್ದಾನೆ. ಈ ವೇಳೆ ಪಬ್ ನಲ್ಲಿ ವಾಗ್ವಾದ ನಡೆದಿದ್ದು ಡಿಜೆ ಸಿದ್ದಾರ್ಥ ಕನ್ನಡದ ಬಗ್ಗೆ ಕೇವಲವಾಗಿ ಆಡಿಕೊಂಡಿದ್ದಾನೆ.
ಕನ್ನಡ ಸಾಂಗ್ ಹಾಕದೇ ತೆಲುಗು, ತಮಿಳು, ಹಿಂದಿ ಹಾಡುಗಳನ್ನ ಪ್ಲೇ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ. ಈ ಬಗ್ಗೆ ಸುಮಿತಾ ಅಂಡ್ ಟೀಮ್, ಕೋರಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ರೂ ಅವರು ಸ್ಥಳಕ್ಕೆ ಬರದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಸುಕಿನ ಎರಡು ಗಂಟೆ ವರೆಗೂ ಪಬ್ ಬಾಗಿಲು ಓಪನ್ ಇದ್ರೂ ಪೊಲೀಸರು ಕ್ಯಾರೆ ಮಾಡಿಲ್ಲ ಎಂದು ಆರೋಪಿಸಲಾಗಿದೆ.
Fight erupts in Badmaash Pub Bangalore over not playing Kannada song. It is also alleged that DJ Siddarth tried to assault girl and his brother who demanded to play Kannada song. The pub is said to be open till midnight two in the morning and the police aren't taking any action she added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am