ಬ್ರೇಕಿಂಗ್ ನ್ಯೂಸ್
04-02-22 09:07 pm HK Desk news ಕರ್ನಾಟಕ
ಬೆಂಗಳೂರು, ಫೆ.4 : ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಯೂನಿಫಾರ್ಮ್ ಮಾಡುವುದಕ್ಕೆ ಆಯಾ ಸಂಸ್ಥೆಗಳಿಗೆ ಅಧಿಕಾರ ಕೊಡಲಾಗಿದೆ. ಈ ರೀತಿಯ ನಿಯಮವನ್ನು 2013-2018ರಲ್ಲಿಯೇ ಮಾಡಲಾಗಿದೆ. ಯಾವುದೇ ಕಮಿಟಿ ಯೂನಿಫಾರ್ಮ್ ಮಾಡಬಹುದು. ಆದರೆ 5 ವರ್ಷ ಯೂನಿಫಾರ್ಮ್ ಇರಬೇಕೆಂಬ ನಿಯಮ ಇದೆ. ಇದರ ಬಗ್ಗೆ ಚರ್ಚೆ ನಡೆಸಲಾಗಿದೆ. ಹೈಕೋರ್ಟ್ ನೋಟೀಸಿಗೆ ಮಾಹಿತಿ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿಚಾರದಲ್ಲಿ ವಿವಾದ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸಚಿವರು ಮಾಹಿತಿ ನೀಡಿದರು. ಸದ್ಯಕ್ಕೆ ವಿಚಾರ ಕೋರ್ಟಿನಲ್ಲಿದೆ. ಆ ಬಗ್ಗೆ ಲೀಗಲ್ ಟೀಮ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ನಿಯಮ ಏನು ಹೇಳುತ್ತದೆ ಅನ್ನುವ ಬಗ್ಗೆ ಚರ್ಚೆ ನಡೆದಿದೆ. ಕೋರ್ಟ್ ತೀರ್ಪು ಬರುವ ವರೆಗೆ ಯಥಾಸ್ಥಿತಿ ಮುಂದುವರಿಸಲು ಸೂಚನೆ ನೀಡಿದ್ದಾಗಿ ಹೇಳಿದ್ದಾರೆ.
ಆಯಾ ಶಿಕ್ಷಣ ಸಂಸ್ಥೆಗಳು ಪ್ರಾದೇಶಿಕವಾಗಿ ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಕಾಪಾಡಬೇಕು. ಆ ಮಕ್ಕಳು ಒಂದೂವರೆ ವರ್ಷದಿಂದ ಬರ್ತಿದಾರೆ. ಶಾಲೆಯ ಶಿಸ್ತು, ನಿಯಮವನ್ನು ಪ್ರಿನ್ಸಿಪಾಲ್ ಹೇಳಿದ್ದಾರೆ. ಲಿಖಿತವಾಗಿ ಇದನ್ನೆಲ್ಲ ಒಪ್ಪಿಕೊಂಡಿದ್ದರು. ಜನವರಿ ವರೆಗೂ ಆ ಕಂಡೀಷನ್ಸ್ ಫಾಲೋ ಮಾಡಿದ್ದಾರೆ. ಯಾರ ಪ್ರಚೋದನೆಯಿಂದ ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರನ್ನು ಮನವೊಲಿಕೆ ಮಾಡಲು ರಘುಪತಿ ಭಟ್ ಪ್ರಯತ್ನ ಪಟ್ಟಿದ್ದಾರೆ. ಪೋಷಕರಿಗೂ ಮನವರಿಕೆ ಮಾಡಲು ಯತ್ನ ಮಾಡಿದ್ದಾರೆ. ಅದರಲ್ಲಿ ಕೆಲವು ಮಕ್ಕಳು ಒಪ್ಪಿಕೊಂಡು ತರಗತಿಗೆ ಬರುತ್ತಿದ್ದಾರೆ.
ಕೇರಳ ಮತ್ತು ಬಾಂಬೆ ಹೈಕೋರ್ಟ್ ಕೂಡ ಸಮವಸ್ತ್ರದ ಪರವಾಗಿ ತೀರ್ಪು ನೀಡಿದೆ. ಆದರೆ ನಮ್ಮ ಸಿದ್ದರಾಮಯ್ಯ ಮಾತ್ರ ಕಾನೂನು, ಸಂವಿಧಾನದ ಬಗ್ಗೆ ಮಾತನಾಡಿದ್ದು ನೋಡಿದರೆ ಅವರಿಗೆ ಕಾನೂನು ಗೊತ್ತಿಲ್ಲವಾ ಅನಿಸುತ್ತದೆ. ಹಿರಿಯರಾಗಿ ಈ ರೀತಿ ಹೇಳುತ್ತಾರೆ ಅಂದ್ರೆ ದುಃಖ ಆಗುತ್ತದೆ. ವೋಟ್ ಬ್ಯಾಂಕಿಗಾಗಿ ಈ ರೀತಿ ಹೇಳಿದ್ರಾ ಅಥವಾ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೀಗೆ ಮಾತನಾಡಿದ್ರಾ ಅಂತ. ಶಿಕ್ಷಣ ಪದ್ಧತಿಯ ರೂಲ್ ಓದಿಕೊಳ್ಳಲಿ. ಅಲ್ಲಿನ ಎಸ್ಡಿಎಂಸಿಯವರು ಲಿಖಿತವಾಗಿ ತೆಗೆದುಕೊಂಡಿದ್ದನ್ನು ನೋಡಿ ಮಾತನಾಡಲಿ. ಒಂದೂವರೆ ವರ್ಷದಿಂದ ಯೂನಿಫಾರ್ಮ್ ಹಾಕಿದವರಿಗೆ ಈಗ ಏನಾಗಿದೆ ಎಂದು ಸಚಿವ ನಾಗೇಶ್ ಪ್ರಶ್ನೆ ಮಾಡಿದ್ದಾರೆ. ಈಗ ಪರೀಕ್ಷೆ ಹತ್ತಿರ ಬರುತ್ತಿರುವಾಗ ಇಂಥ ವಾತಾವರಣ ಸೃಷ್ಟಿಸಬೇಡಿ ಎಂದು ಮಕ್ಕಳಲ್ಲಿ ಮನವಿ ಮಾಡುತ್ತೇನೆ. ಇದರಿಂದ ತೊಂದರೆ ಮಾಡಿಕೊಳ್ಳುವುದು ಬೇಡ ಎಂದು ಸಲಹೆ ಮಾಡಿದರು.
ಹಿಜಾಬ್ ಧರಿಸುವುದು ಅನೇಕ ದೇಶಗಳಲ್ಲಿ ಬ್ಯಾನ್ ಆಗಿದೆ. ಹಾಗಾಗಿ ಕೆಲವರು ಅಂತಾರಾಷ್ಟ್ರೀಯ ಸುದ್ದಿ ಮಾಡಲು ಹೊರಟಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸರಕಾರದ ಬಗ್ಗೆ ಅಪಪ್ರಚಾರ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ನಾಗೇಶ್ ಹೇಳಿದರು.
The hijab controversy in the state has reached a fever pitch. The saffron shawl fight is loud VS the hijab at Belagavi College, Baindur. The hijab case (Hijab Case), which has caused a lot of controversy, is now before the High Court (Highcourt). Udupi student Resham Farooq has filed a writ petition with the High Court to allow him to wear a hijab in class. Feb. The hearing will be held at 08.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm