ಬ್ರೇಕಿಂಗ್ ನ್ಯೂಸ್
03-02-22 12:12 pm HK Desk news ಕರ್ನಾಟಕ
ಹುಬ್ಬಳ್ಳಿ, ಫೆ.2 : ಹಿಜಾಬ್ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ಚರ್ಚೆ ನಡೆಸುವ ಅಗತ್ಯವಿಲ್ಲ. ಹಿಜಾಬ್ ಬೇಕೆಂದು ಪಟ್ಟು ಹಿಡಿಯುವ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಟಿಸಿ ಕೊಟ್ಟು ಕಿತ್ತೊಗೆಯಿರಿ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಉಡುಪಿ ಪ್ರಥಮ ದರ್ಜೆ ಕಾಲೇಜಿನ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್, ರಾಜ್ಯ ಸರಕಾರ ಹಿಜಾಬ್ ವಿಚಾರದಲ್ಲಿ ಯಾವುದೇ ರಾಜಿ ಪಂಚಾಯ್ತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕಾಲೇಜಿನ ಸಮವಸ್ತ್ರದ ವಿಚಾರದಲ್ಲಿ ಕಠಿಣ ನಿಲುವು ತಳೆದು ಎಲ್ಲರಿಗೂ ಸಮಾನ ಎಂಬ ಕಾಲೇಜಿನ ಶಿಸ್ತನ್ನು ಪಾಲನೆ ಮಾಡಬೇಕು. ಹಿಜಾಬ್ ಧಾರಣೆ ಅಥವಾ ಇನ್ನಾವುದೇ ಧಾರ್ಮಿಕ ಆಚರಣೆಗಳಿದ್ದರೆ ಅದನ್ನು ಅವರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲಿ. ಶಾಲೆಗೆ ಬಂದಾಗ ಅದೆಲ್ಲವನ್ನೂ ಬಿಟ್ಟು ಬರಬೇಕು. ಶಾಲೆಯ ಸಮವಸ್ತ್ರ ಧರ್ಮ, ಜಾತಿಗಳ ಕಟ್ಟುಪಾಡುಗಳನ್ನು ಮೀರಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಧಾರ್ಮಿಕ ಚೌಕಟ್ಟುಗಳನ್ನು ಆಚರಿಸಲು ಅವಕಾಶ ನೀಡುವುದು ಅಂದರೆ, ಅಲ್ಲಿ ಪ್ರತ್ಯೇಕತಾವಾದ, ಉಗ್ರವಾದಕ್ಕೆ ಬೆಂಬಲ ನೀಡುವುದೆಂದೇ ಅರ್ಥ. ಆ ರೀತಿಯ ಧಾರ್ಮಿಕ ಚೌಕಟ್ಟು ಇಟ್ಟುಕೊಂಡು ಶಾಲೆಗೆ ಬರಬೇಕೆಂದಿದ್ದರೆ ಅಂಥವರು ಪಾಕಿಸ್ಥಾನ ಅಥವಾ ಅಫ್ಘಾನಿಸ್ತಾನಕ್ಕೆ ಹೋಗಲಿ ಎಂದು ಮುತಾಲಿಕ್ ಹೇಳಿದ್ದಾರೆ.
ಬಿಜೆಪಿ ಸರಕಾರ ಹಿಜಾಬ್ ವಿವಾದ ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಹಿಂದುತ್ವದ ಪೋಷಕರು ಎಂದು ಕರೆದುಕೊಳ್ಳುವ ಮಂದಿ ಆಡಳಿತ ನಡೆಸುತ್ತಿದ್ದರೂ, ಜಾತ್ಯತೀತರ ಒತ್ತಡಕ್ಕೆ ಮಣಿದಿರುವಂತೆ ತೋರುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೇಕಾದ್ರೆ ತಾವೇ ಹಿಜಾಬ್ ಅಥವಾ ಬುರ್ಖಾ ಧರಿಸಿಕೊಂಡು ಓಟು ಕೇಳಿದರೂ, ಮುಸ್ಲಿಮರಿಂದ ಒಂದು ಮತವೂ ಬಿಜೆಪಿಗೆ ಸಿಗಲಾರದು. ಹೀಗಾಗಿ ಸಿಎಂ ಬೊಮ್ಮಾಯಿ ಹಿಂದುಗಳ ಭಾವನೆಯನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು ರೈಲು ನಿಲ್ದಾಣದ ಒಳಗಡೆ ಮಸೀದಿ ನಿರ್ಮಿಸಲು ಅವಕಾಶ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿದೆ ಎಂದು ದೂರಿದ ಮುತಾಲಿಕ್, ಕೋಲಾರ ಮತ್ತಿತರ ಕಡೆ ಶಾಲೆಗಳಲ್ಲಿ ನಮಾಜ್ ಮಾಡುವುದಕ್ಕೂ ಅವಕಾಶ ನೀಡಿರುವುದು ದುರಂತ. ಇಂಥದಕ್ಕೆ ಬಿಜೆಪಿ ಸರಕಾರ ಅವಕಾಶ ಕೊಟ್ಟು ಏನು ಮಾಡಲು ಹೊರಟಿದೆ. ಇಸ್ಲಾಮೀಕರಣ ಎಂದು ಬೊಬ್ಬೆ ಹಾಕುವ ಮಂದಿ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
Hubballi, Shri Ram Sena Chief Pramod Muthalikpramo’s statement that students insisting on wearing a hijab to the classroom showed their terrorist mindset and they should be kicked out of the schools, has triggered a controversy in the state.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am